ರಾಣೆಬೆನ್ನೂರು: ಬಟ್ಟೆ ಖರೀದಿಗೆ ಎಂದು ಬೆಂಗಳೂರಿಗೆ ತೆರಳಿದ್ದ ನಗರದ ವ್ಯಾಪಾರಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಾರುತಿ ನಗರದ ನಿವಾಸಿ ಜೂ. 9 ರಂದು ಬಟ್ಟೆ ಖರೀದಿಗೆಂದು ಬೆಂಗಳೂರಿನ ಚಿಕ್ಕಪೇಟೆಗೆ ತೆರಳಿದ್ದರು. ಜೂ.11ರಂದು ಮರಳಿ ರಾಣೆಬೆನ್ನೂರಿಗೆ ಬಂದ ಸಮಯದಲ್ಲಿ ಜ್ವರ, ಕೆಮ್ಮು, ನೆಗಡಿ ಹಾಗೂ ಸುಸ್ತಿನಿಂದ ಬಳಲುತ್ತಿದ್ದರು.
ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಜೂ.20 ರಂದು ಮತ್ತೆ ಜ್ವರ, ಕೆಮ್ಮಿನ ಸಲುವಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿಯೂ ತಪಾಸಣೆ ಮಾಡಿಸಿಕೊಂಡಿರುತ್ತಾರೆ. ಸರ್ಕಾರಿ ಆಸ್ಪತ್ರೆ ವೈದ್ಯರು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ ಸಮಯದಲ್ಲಿ, ಸೋಂಕು ದೃಢಪಟ್ಟಿದೆ.
ಆತಂಕದಲ್ಲಿ ನಗರದ ಜನತೆ: ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಕಾರಣ ಜನರು ಆತಂಕಕ್ಕೆ ಒಳಗಾಗಿದ್ದಾರೆ. ನಗರದ ಬಹುತೇಕ ಕಡೆ ಸಾರ್ವಜನಿಕರ ಓಡಾಟ ಕಡಿಮೆಯಾಗಿದ್ದು, ಮಾರುತಿ ನಗರ, ಅಶೋಕ ನಗರ ಮತ್ತು ತಳವಾರ ಓಣಿಯ ಜನರಿಗೆ ಈ ಪ್ರಕರಣ ತಲೆ ನೋವಾಗಿ ಪರಿಣಮಿಸಿದೆ.