ETV Bharat / bharat

ಸಂಕ್ರಾಂತಿ ಭೋಗಿ ಧೂಮ: ಚೆನ್ನೈನಲ್ಲಿ ಹಲವು ವಿಮಾನಗಳ ಹಾರಾಟ ರದ್ದು - BOGHI FESTIVAL SMOG IN CHENNAI

ಚೆನ್ನೈ ವಿಮಾನ ನಿಲ್ದಾಣದ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಭೋಗಿ ಸಂಭ್ರಮದಲ್ಲಿ ಹಳೆಯ ಬಟ್ಟೆಗಳು ಮತ್ತಿತರೆ ವಸ್ತುಗಳನ್ನು ಸುಡುವ ಸಂಪ್ರದಾಯವಿದೆ. ಇದರಿಂದಾಗಿ ದಟ್ಟ ಹೊಗೆ ಆವರಿಸಿದ್ದು, ವೀಕ್ಷಣಾ ಸಾಮರ್ಥ್ಯ ಕುಸಿದಿದೆ.

Poor visibility cause by  Boghi Festival burning several Flight cancelled in Chennai
ಸಂಗ್ರಹ ಚಿತ್ರ (IANS)
author img

By ETV Bharat Karnataka Team

Published : Jan 13, 2025, 1:17 PM IST

ಚೆನ್ನೈ(ತಮಿಳುನಾಡು): ಸಂಕ್ರಾಂತಿ ಭೋಗಿ ಹಬ್ಬದ ಸಂಭ್ರಮದಲ್ಲಿ ಜನರು ಹಳೆಯ ಬಟ್ಟೆಗಳು ಮತ್ತು ಟೈರ್​ಗಳನ್ನು ಸುಡುತ್ತಿದ್ದು ದಟ್ಟ ಹೊಗೆ ಆವರಿಸಿ ಚೆನ್ನೈನಲ್ಲಿ ಕಳಪೆ ವೀಕ್ಷಣಾ ಸಾಮರ್ಥ್ಯ ರೂಪುಗೊಂಡಿದೆ. ಇದರ ಪರಿಣಾಮ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಸೋಮವಾರ ದೆಹಲಿ ಮತ್ತು ಬೆಂಗಳೂರಿನಿಂದ ಬರಬೇಕಿದ್ದ ವಿಮಾನಗಳು ರದ್ದಾಗಿವೆ. ಇದರ ಜೊತೆಗೆ ಮತ್ತಷ್ಟು ವಿಮಾನ ಹಾರಾಟಗಳು ರದ್ದಾಗಿದ್ದು, 30 ವಿಮಾನಗಳ ಹಾರಾಟದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಚೆನ್ನೈ ವಿಮಾನ ನಿಲ್ದಾಣದಿಂದ ದುಬೈ, ಅಬು ಧಾಬಿ, ದೋಹಾ, ಮಸ್ಕತ್​, ಕುವೈತ್​, ಸಿಂಗಾಪೂರ್​, ಕೌಲಲಾಂಪುರ್​​, ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್​, ಅಂಡಮಾನ್​, ಗೋವಾ, ಪುಣೆ ಮತ್ತು ಕೋಲ್ಕತ್ತಾ ವಿಮಾನಗಳ ಹಾರಾಟದ ಮೇಲೆ ದಟ್ಟ ಹೊಗೆ ಪರಿಣಾಮ ಬೀರಿದೆ.

ಹಳೆಯ ವಸ್ತುಗಳ ಸುಡುವಿಕೆಯಿಂದ ಮಾಲಿನ್ಯ: ಚೆನ್ನೈ ವಿಮಾನ ನಿಲ್ದಾಣದ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಭೋಗಿ ಸಂಭ್ರಮದಲ್ಲಿ ಹಳೆಯ ಬಟ್ಟೆಗಳು ಹಾಗೂ ಇತರೆ ವಸ್ತುಗಳನ್ನು ಸುಡುವ ಸಂಪ್ರದಾಯವಿದೆ. ಇದರಿಂದಾಗಿ ದಟ್ಟ ಹೊಗೆ ಏರ್ಪಟ್ಟಿದ್ದು, ವೀಕ್ಷಣಾ ಸಾಮರ್ಥ್ಯ ಕುಸಿದಿದೆ.

ಈ ಹೊಗೆ ವಿಮಾನಗಳ ಕಾರ್ಯಾಚರಣೆಯ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಪರಿಸ್ಥಿತಿಯ ಸೂಕ್ಷ್ಮ ಅವಲೋಕನ ನಡೆಸುತ್ತಿದ್ದು, ನಿಲ್ದಾಣದ ಸುತ್ತಮುತ್ತ ಹರಡಿರುವ ಸ್ಮಾಗ್​ ಹಿನ್ನೆಲೆಯಲ್ಲಿ ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೋಗ್ ಸಂಭ್ರಮದಲ್ಲಿ ಈ ರೀತಿಯ ಸ್ಮಾಗ್​ನಿಂದ ಉಂಟಾಗುತ್ತಿರುವ ಸಮಸ್ಯೆ ಇದೇ ಮೊದಲಲ್ಲ. 2018ರಲ್ಲೂ ಕೂಡ 118 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿತ್ತು. ಪ್ರತಿವರ್ಷ ಈ ಘಟನಾವಳಿ ಮರುಕಳಿಸುತ್ತಿದೆ. ಭೋಗಿ ಹಬ್ಬದ ಬೆಳಗ್ಗೆ ಇಂಥ ಪರಿಸ್ಥಿತಿಯನ್ನು ಹೆಚ್ಚಾಗಿ ಕಾಣಬಹುದು.

ಭೋಗಿ ಸಂಭ್ರಮದಲ್ಲಿ ಕಾಣುತ್ತಿರುವ ಈ ಹೊಗೆ ಸಮಸ್ಯೆ ಪ್ರತಿವರ್ಷವೂ ಕಾಡುತ್ತಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗಿದೆಯಾದರೂ, ಪ್ರಯೋಜನವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ನಗರ ಪಾಲಿಕೆ​ ಅಧಿಕಾರಿಗಳು ಮತ್ತು ಪೊಲೀಸರ ಪ್ರಯತ್ನದಿಂದ ಈ ಬಾರಿ ಸಮಸ್ಯೆ ಕೊಂಚ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯರಾತ್ರಿ ಸುರಿದ ಸಾಧಾರಣ ಮಳೆ ವಾಯುಮಾಲಿನ್ಯ ಪರಿಸ್ಥಿತಿ ನಿರ್ವಹಣೆಗೆ ಕೊಂಚ ಸಹಾಯ ಮಾಡಿದೆ ಎಂದು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಭೋಗಿಗೆ ಮುನ್ನ ಮತ್ತು ನಂತರದ ದಿನ ಚೆನ್ನೈ ಸೇರಿದಂತೆ 15 ಕಡೆಗಳಲ್ಲಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ವಾಯುಗುಣಮಟ್ಟವನ್ನು ಮೇಲ್ವಿಚಾರಣೆ ನಡೆಸುತ್ತಿದೆ. (ಐಎಎನ್​ಎಸ್​)

ಇದನ್ನೂ ಓದಿ: ಮಹಾಕುಂಭ ಮೇಳ: ಭಾರತೀಯ ಸಂಸ್ಕೃತಿ, ಮೌಲ್ಯಗಳ ಆರಾಧಕರಿಗೆ ವಿಶೇಷ ದಿನ- ಪ್ರಧಾನಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.