ETV Bharat / state

ಹಾವೇರಿ ಮುಂದುವರಿದ ರೈತರ ಆತ್ಮಹತ್ಯೆ... ಶಾಲೆಯಲ್ಲೇ ನೇಣು ಹಾಕಿಕೊಂಡ ಅನ್ನದಾತ - ರೈತರ ಆತ್ಮಹತ್ಯೆ

ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಸಾಲ ಹಾಗೂ ಬೆಳೆ ಹಾನಿಯಿಂದ ಬೇಸತ್ತ ರೈತರೊಬ್ಬರು ಶಾಲೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತರ ಆತ್ಮಹತ್ಯೆ
author img

By

Published : Sep 15, 2019, 9:17 AM IST

ಹಾವೇರಿ: ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಹಾನಗಲ್ ತಾಲೂಕಿನ ನಿಶ್ಸೀಮ ಆಲದಕಟ್ಟಿ ಗ್ರಾಮದಲ್ಲಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

35 ವರ್ಷದ ಚಂದ್ರು ನೀಲಪ್ಪನವರು ಆತ್ಮಹತ್ಯೆ ಮಾಡಿಕೊಂಡ ರೈತ. ತನ್ನ ಮತ್ತು ತಂದೆಯ ಹೆಸರಿನಲ್ಲಿರುವ ಜಮೀನಿನಲ್ಲಿ ಚಂದ್ರು ಮೆಣಸಿನಕಾಯಿ ಮತ್ತು ಮೆಕ್ಕೆಜೋಳ ಬೆಳೆದಿದ್ದರು. ಆದರೆ ಭಾರಿ ಮಳೆ ಬೆಳೆಯನ್ನು ಹಾಳು ಮಾಡಿತ್ತು. ಒಂದು ಕಡೆ ಸಾಲ ಮತ್ತೊಂದು ಕಡೆ ಬೆಳೆಹಾನಿಯಾಗಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡ ಚಂದ್ರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಗ್ರಾಮದ ಪ್ರೌಢಶಾಲೆಯಲ್ಲಿ ನೇಣು ಹಾಕಿಕೊಂಡ ಚಂದ್ರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:FileBody:FileConclusion:File
ETV Bharat Logo

Copyright © 2025 Ushodaya Enterprises Pvt. Ltd., All Rights Reserved.