ETV Bharat / state

ಈ ಉಪ ಚುನಾವಣೆಯಲ್ಲಿ ಸರ್ಕಾರಕ್ಕೆ ಮತದಾರರು ತಕ್ಕ ಉತ್ತರ ಕೊಡ್ತಾರೆ: ಡಿ ಕೆ ಶಿವಕುಮಾರ್

ಅಗತ್ಯ ವಸ್ತುಗಳ ಬೆಲೆ ದಿನೇ ದಿನೆ ಏರಿಕೆಯಾಗುತ್ತಿರುವುದರಿಂದ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸುವ ಮೂಲಕ ಬಿಜೆಪಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.

Congress Will wins in Karnataka by-polls - kpcc president DK Shivakumar
ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಿ ಬಿಜೆಪಿ ಸರ್ಕಾರಕ್ಕೆ ಮತದಾರರು ಉತ್ತರ ಕೊಡ್ತಾರೆ - ಡಿಕೆ ಶಿವಕುಮಾರ್
author img

By

Published : Oct 7, 2021, 2:12 PM IST

Updated : Oct 7, 2021, 3:29 PM IST

ಹಾವೇರಿ: ಕೋವಿಡ್‌ ಸಮಯದಲ್ಲಿ ಬಿಜೆಪಿ ಸರ್ಕಾರ ಜನರನ್ನು ಕೆರಳಿಸಿದೆ. ಆಸ್ಪತ್ರೆಯಲ್ಲಿ ಜನರನ್ನು ಕ್ಯೂ ನಿಲ್ಲಿಸಿದೆ. ಶವ ಸುಡಲು ಕ್ಯೂ ನಿಲ್ಲಿಸಿದ್ದರು. ಯುವಕರು ಉದ್ಯೋಗವಿಲ್ಲದೆ ಬೀದಿಗೆ ಬಂದು ನಿಂತಿದ್ದಾರೆ. ಸಿಲಿಂಡರ್ ಬೆಲೆ ದಿನೇ ದಿನೆ ಹೆಚ್ಚಾಗ್ತಿರೋದ್ರಿಂದ‌ ಮಹಿಳೆಯರು ಸಹ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಈ ಉಪ ಚುನಾವಣೆಯಲ್ಲಿ ಸರ್ಕಾರಕ್ಕೆ ಮತದಾರರು ತಕ್ಕ ಉತ್ತರ ಕೊಡ್ತಾರೆ: ಡಿ ಕೆ ಶಿವಕುಮಾರ್

ಹಾನಗಲ್‌ನ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ಬಂದಿದ್ದ ಡಿಕೆಶಿ, ಅಕ್ಟೋಬರ್‌ 30 ರಂದು ಮತದಾರರು ಕಾಂಗ್ರೆಸ್ ಗೆಲ್ಲಿಸುವ ಮೂಲಕ ಬಿಜೆಪಿ ಸರ್ಕಾರಕ್ಕೆ ಉತ್ತರ ಕೊಡಲಿದ್ದಾರೆ‌ ಎಂದರು.

ಜೆಡಿಎಸ್‌ ಗೆಲ್ಲೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ:

ಜೆಡಿಎಸ್ ನವರು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ನವರು ಏನಾದ್ರೂ ಮಾಡಿಕೊಳ್ಳಲಿ, ಅವರು ಗೆಲ್ಲೋದಿಲ್ಲ ಅನ್ನೋದು ಅವರಿಗೂ ಗೊತ್ತಿದೆ. ನಮಗೂ ಗೊತ್ತಿದೆ, ನಿಮಗೂ ಗೊತ್ತಿದೆ. ಅವರು ಪಕ್ಷದ ಅಭ್ಯರ್ಥಿ ಹಾಕ್ತೀನಿ ಅಂದಾಗ ಬೇಡ ಅಂತಾ ಹೇಳಲು ಆಗುತ್ತಾ? ಅಲ್ಪಸಂಖ್ಯಾತರನ್ನ ಹಾಕಬಾರದು ಅಂತೇನಿಲ್ಲ. ಆದ್ರೆ ಮತ ಹಾಕೋರು ಮತದಾರರು ಎಂದಿದ್ದಾರೆ.

Last Updated : Oct 7, 2021, 3:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.