ETV Bharat / state

ಹಿಜಾಬ್​- ಕೇಸರಿ ವಿವಾದ ದುರ್ದೈವದ ಸಂಗತಿ : ಕಾಂಗ್ರೆಸ್ ಎಂಎಲ್‌ಸಿ ಸಲೀಂ ಅಹ್ಮದ್​ ಬೇಸರ

author img

By

Published : Feb 12, 2022, 3:38 PM IST

Updated : Feb 12, 2022, 4:11 PM IST

ಅಣ್ಣ- ತಮ್ಮಂದಿರಂತೆ ಇದ್ದ ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುತ್ತಿರುವ ಘಟನೆಗಳಿಂದ ನಾವೆಲ್ಲಾ ನೊಂದಿದ್ದೇವೆ. ಈ ರೀತಿಯ ಘಟನೆಗಳು ಆಗಬಾರದು. ಇದಕ್ಕೆ ನೇರವಾಗಿ ಸರ್ಕಾರವೇ ಹೊಣೆ ಎಂದು ಸಲೀಂ ಅಹ್ಮದ್ ಆರೋಪಿಸಿದ್ದಾರೆ..

congress-leader
ಸಲೀಂ ಅಹ್ಮದ್

ಹಾವೇರಿ : ವಿದ್ಯಾರ್ಥಿಗಳ ನಡುವೆ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ವಿವಾದ ಭುಗಿಲೆದ್ದಿರುವುದು ದುರ್ದೈವದ ಸಂಗತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣ-ತಮ್ಮಂದಿರಂತೆ ಇದ್ದ ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುತ್ತಿರುವ ಘಟನೆಗಳಿಂದ ನಾವೆಲ್ಲಾ ನೊಂದಿದ್ದೇವೆ. ಈ ರೀತಿಯ ಘಟನೆಗಳು ಆಗಬಾರದು. ಇದಕ್ಕೆ ನೇರವಾಗಿ ಸರ್ಕಾರವೇ ಹೊಣೆ ಎಂದು ಸಲೀಂ ಅಹ್ಮದ್ ಆರೋಪಿಸಿದ್ದಾರೆ.

ಹಿಜಾಬ್​- ಕೇಸರಿ ವಿವಾದದ ಕುರಿತಂತೆ ಕಾಂಗ್ರೆಸ್ ಎಂಎಲ್‌ಸಿ ಸಲೀಂ ಅಹ್ಮದ್​ ಮಾತನಾಡಿರುವುದು..

ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಅದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವದಿಲ್ಲ. ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಕೆಲವು ಶಕ್ತಿಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿವೆ.

ಇಂತಹ ಶಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಶಾಂತಿ ನೆಲೆಸಬೇಕು. ನಾವೆಲ್ಲ ಅಣ್ಣ-ತಮ್ಮಂದಿರಂತೆ ಜೀವನ ಮಾಡುವ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದರು.

ಸಿ ಎಂ ಇಬ್ರಾಹಿಂ ಪಕ್ಷ ಬಿಡಲ್ಲ: ಸಿಎಂ ಇಬ್ರಾಹಿಂ ಪಕ್ಷ ತೊರೆಯುತ್ತಿರುವ ಬಗ್ಗೆ ಮಾತನಾಡಿದ ಅವರು, ಇಬ್ರಾಹಿಂ ಅವರು 2008ರಿಂದ ಕಾಂಗ್ರೆಸ್​ನಲ್ಲಿದ್ದಾರೆ. ಅವರು ಕೇಳಿದ ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ನೀಡಿದೆ. ಆದರೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನವನ್ನ ಅವರು ಕೇಳಿದ್ದರು. ಈಗ ಆ ಸ್ಥಾನಕ್ಕೆ ಬಿ ಕೆ ಹರಿಪ್ರಸಾದ್‌ ಅವರನ್ನ ಪಕ್ಷ ನೇಮಿಸಿದೆ. ಆದರೂ ಇಬ್ರಾಹಿಂ ಅವರು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಸಲೀಂ ಅಹ್ಮದ್ ತಿಳಿಸಿದರು.

ಸಚಿವ ಕೆ.ಎಸ್.ಈಶ್ವರಪ್ಪ ಕೆಂಪುಕೋಟೆಯಲ್ಲಿ ಭಗವಾ ಧ್ವಜ ಹಾರಲಿದೆ ಎಂಬ ಹೇಳಿಕೆಯನ್ನು ಖಂಡಿಸಿದ ಸಲೀಂ ಅಹ್ಮದ್​, ಸಚಿವರಾಗಿ ಕೆ.ಎಸ್.ಈಶ್ವರಪ್ಪ ಈ ತರಹದ ಹೇಳಿಕೆ ನೀಡಬಾರದಿತ್ತು. ಈ ಕೂಡಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಶ್ವರಪ್ಪರ ರಾಜೀನಾಮೆ ಪಡೆಯಬೇಕು. ಇಂತಹ ಹೇಳಿಕೆಗಳಿಂದ ದೇಶದಲ್ಲಿ ಕೋಮು ಸೌಹಾರ್ದ ಹದಗೆಡುತ್ತದೆ ಎಂದು ಹೇಳಿದರು.

ಓದಿ: ಬೆಳಗಾವಿಯಲ್ಲಿ ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ: ಶಾಲಾ ಸಮವಸ್ತ್ರದಲ್ಲೇ ಬಾಲಕನ ಶವಪತ್ತೆ

Last Updated : Feb 12, 2022, 4:11 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.