ಹಾವೇರಿ: ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರಾದ್ರೂ ಅನಗತ್ಯವಾಗಿ ಮನೆ ಬಿಟ್ಟು ಹೊರಗೆ ಓಡಾಡಿದ್ರೆ ಜಿಲ್ಲಾ ಪೊಲೀಸರು ಬಸ್ಕಿ ಶಿಕ್ಷೆ ಫಿಕ್ಸ್ ಮಾಡಿದ್ದಾರೆ.
ಈವರೆಗೆ ಪೊಲೀಸರು ಲಾಠಿ ರುಚಿ ತೋರಿಸಿ 500 ರೂಪಾಯಿ ದಂಡ ಹಾಕ್ತಿದ್ರು. ಬಳಿಕ ಬೈಕ್ ವಶಪಡಿಸಿಕೊಳ್ಳೋಕೂ ಮುಂದಾಗಿದ್ದಾರೆ. ಆದ್ರೂ ಸಹ ಜನರ ಅನಗತ್ಯ ಓಡಾಟ ನಿಂತಿಲ್ಲ. ಹೀಗಾಗಿ ಇವತ್ತಿಂದ ಸಿಪಿಐ ಮಾರುತಿ ಹೆಗಡೆ ನೇತೃತ್ವದಲ್ಲಿ ಪೊಲೀಸರು ಬಸ್ಕಿ ಶಿಕ್ಷೆಗೆ ಮುಂದಾಗಿದ್ದಾರೆ.
ಮನೆ ಬಿಟ್ಟು ಅನಗತ್ಯವಾಗಿ ಹೊರಗೆ ಓಡಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ರೆ ಹತ್ತು, ಇಪ್ಪತ್ತು, ಐವತ್ತು ಬಸ್ಕಿ ಹೊಡೆಸಿ ಕಳಿಸ್ತಿದ್ದಾರೆ.