ಹಾವೇರಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಹಾವೇರಿ ಜಿಲ್ಲೆಯಲ್ಲಿ ಬ್ರಹ್ಮ ಕಮಲಗಳು ಅರಳಲಾರಂಭಿಸುತ್ತವೆ. ರಾತ್ರಿಯಾಗುತ್ತಿದ್ದಂತೆ ಅರಳುವ ಈ ಪುಷ್ಪಗಳ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತವೆ. ಸುವಾಸನೆಯಂತೂ ಮನೆಯ ಸುತ್ತಮುತ್ತಲ ಹರಡಿ ತನ್ನದೇ ಆದ ಲೋಕವನ್ನ ಬ್ರಹ್ಮ ಕಮಲ ಸೃಷ್ಟಿಸುತ್ತದೆ.
ಆರಂಭದಲ್ಲಿ ಹಿಮಾಲಯ ಪರ್ವತಗಳಿಗೆ ಸೀಮಿತವಾಗಿದ್ದ ಈ ಬ್ರಹ್ಮಕಮಲಗಳು ಈಗ ದಕ್ಷಿಣ ಭಾರತದಲ್ಲಿ ಸಹ ಕಾಣಿಸಲಾರಂಭಿಸಿವೆ. ಸೋಸೂರಿಯಾ ಆಬ್‍ವ್ಯಾಲೇಟಾ ಎಂದು ವೈಜ್ಞಾನಿಕವಾಗಿ ಕರೆಸಿಕೊಳ್ಳುವ ಈ ಬ್ರಹ್ಮಕಮಲದ ವಿಶೇಷ ಅಂದರೆ ಎಲೆ. ಈ ಗಿಡ ಎಲೆಯಿಂದ ಹುಟ್ಟಿ ಎಲೆಯನ್ನೇ ಕಾಂಡವನ್ನಾಗಿ ಮಾಡಿಕೊಂಡು ಎಲೆಯಲ್ಲಿಯೇ ಹೂ ಬಿಡುತ್ತೆ.
ಉತ್ತರಕರ್ನಾಟಕದ ಮಹಿಳೆಯರು ಬ್ರಹ್ಮ ಕಮಲ ಗಿಡಕ್ಕೆ ಪೂಜೆ ಸಲ್ಲಿಸುತ್ತಾರೆ. ಮಳೆಗಾಲದೂದ್ದಕ್ಕೂ ಶ್ವೇತವರ್ಣದ ಹೂ ಬಿಡುವ ಮೂಲಕ ಬ್ರಹ್ಮಕಮಲ ಸಸ್ಯೆ ಗಮನ ಸೆಳೆಯುತ್ತೆ.