ETV Bharat / state

ಕಾಂಗ್ರೆಸ್​ ಔಟ್​ ಆಫ್​ ಸೈಟ್.. ಜನ ಅವರನ್ನ ಮರತೇ ಬಿಟ್ಟಿದ್ದಾರೆ: ಬಿ.ಸಿ. ಪಾಟೀಲ್ ವ್ಯಂಗ್ಯ - ‘ಸಿಪಿವೈರಷ್ಟು ಬುದ್ಧಿವಂತರಲ್ಲ ನಾವು

ಕಾಂಗ್ರೆಸ್​ನವರನ್ನ ಜನರು ಮರತೇ ಬಿಟ್ಟಿದ್ದಾರೆ. ಅದಕ್ಕಾಗಿ ತಮ್ಮ ಪಕ್ಷಕ್ಕೆ ಸೇರಿಕೊಳ್ಳುವಂತೆ ಅರ್ಜಿ ಆಹ್ವಾನಿಸಿದ್ದಾರೆ ಅಂತಾ ಸಚಿವ ಬಿ.ಸಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್​ ಔಟ್​ ಆಫ್​ ಸೈಟ್.. ಜನ ಅವರನ್ನ ಮರೆತೇ ಬಿಟ್ಟಿದ್ದಾರೆ: ಬಿ.ಸಿ.ಪಾಟೀಲ್

author img

By

Published : Jul 5, 2021, 2:23 PM IST

ಹಾವೇರಿ: ಕಾಂಗ್ರೆಸ್​ ನಾಯಕರ ಹೇಳಿಕೆಗಳ ಕುರಿತು ಸಚಿವ ಬಿ ಸಿ ಪಾಟೀಲ್ ಕುಹಕವಾಡಿದ್ದಾರೆ. ಕಾಂಗ್ರೆಸ್​ನವರು ಔಟ್​ ಆಫ್​ ಸೈಟ್ ಆಗಿಬಿಟ್ಟಿದ್ದಾರೆ. ಜನರು ಅವರನ್ನು ಮರತೇ ಬಿಟ್ಟಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್​ ಔಟ್​ ಆಫ್​ ಸೈಟ್.. ಜನ ಅವರನ್ನ ಮರೆತೇ ಬಿಟ್ಟಿದ್ದಾರೆ: ಬಿ.ಸಿ.ಪಾಟೀಲ್

‘ಹೋಲ್​ಸೇಲ್​ ಟೆಂಡರ್’

ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರು ಹೋಲ್​ಸೇಲ್​ ಟೆಂಡರ್ ಕರೆದಿದ್ದಾರೆ. ಯಾರು ಬೇಕಾದರೂ ಬರಬಹುದು ಫ್ರೀ ಅಂತಾ ಟೆಂಡರ್ ಕರೆದಿದ್ದು, ಬೇಕಾದವರು ಅರ್ಜಿ ಸಲ್ಲಿಸಬಹುದು, ಆದರೆ ಅರ್ಜಿಗಳನ್ನು ಯಾರೂ ತೆಗೆದುಕೊಳ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ. ಡಿಕೆಶಿ ಏನೋ ಕನಸು ಕಾಣುತ್ತಿದ್ದಾರೆ, ಅದ್ಯಾವ್ದು ಈಡೇರಲ್ಲ ಎಂದು ಸಚಿವ ಬಿ.ಸಿ. ಪಾಟೀಲ್ ಭವಿಷ್ಯ ನುಡಿದಿದ್ದಾರೆ.

‘ಸಿಪಿವೈರಷ್ಟು ಬುದ್ಧಿವಂತರಲ್ಲ ನಾವು’

ಸಚಿವ ಯೋಗೇಶ್ವರ್ ಅವರಷ್ಟು ಬುದ್ಧಿವಂತರಲ್ಲ ನಾವು. ಅವರ ಪರೋಕ್ಷವಾದ ಮಾತುಗಳು ನಮಗೆ ಅರ್ಥವಾಗಲ್ಲ. ಏನಾದರೂ ಇದ್ದರೆ ನೇರವಾಗಿ ಹೇಳಬಹುದು. ಅಪ್ಪನಿಗೆ ಶಕ್ತಿ ಇದ್ದರೆ ಅಪ್ಪ ಅಂಬಾರಿ ಹೊರ್ತಾನೆ, ಮಗನಿಗೆ ಶಕ್ತಿ ಇದ್ದರೆ ಮಗ ಅಂಬಾರಿ ಹೊರ್ತಾನೆ ಅಷ್ಟೇ ಎಂದರು. ಸರ್ಕಾರದಲ್ಲಿ ಆಡಳಿತ ಪಕ್ಷದವರಿಗಿಂತ ಪ್ರತಿಪಕ್ಷದವರ ಮಾತು ಜಾಸ್ತಿ ಕೇಳ್ತಾರೆ ಎಂಬ ಸಚಿವ ಯೊಗೇಶ್ವರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಹಾಗೇನಿಲ್ಲ. ಕೆಲವರು ನೆಮ್ಮದಿ ಇಲ್ಲದಿರೋರು, ಸಂತೋಷ ಇಲ್ಲದವರು ಹಾಗೆ ಹೇಳ್ತಾರೆ. ಅದ್ಯಾವುದಕ್ಕೂ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ಇದನ್ನೂ ಓದಿ:ಮುಳುಗುತ್ತಿರುವ ಹಡಗು ಕಾಂಗ್ರೆಸ್​ ರಕ್ಷಣೆಗೆ ಡಿಕೆಶಿ ಹರಸಾಹಸ ಪಡುತ್ತಿದ್ದಾರೆ: ಕಟೀಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.