ETV Bharat / state

ನಂಬಿಕೆ ಹುಸಿಯಾಗದಿರಲಿ.. 2ಎ ಮೀಸಲಾತಿ ಘೋಷಿಸಲು ಸಿಎಂಗೆ ಕೂಡಲಸಂಗಮ ಶ್ರೀ ಡೆಡ್​ಲೈನ್​ - 2ಎ ಮೀಸಲಾತಿಗೆ ಬಸವಜಯ ಮೃತ್ಯುಂಜಯ ಶ್ರೀ ಒತ್ತಾಯ

12ನೇ ಶತಮಾನದಲ್ಲಿ ಬಸವಣ್ಣನವರ ಮೇಲೆ‌ ಲಿಂಗಾಯತರು ನಂಬಿಕೆ ಇಟ್ಟಷ್ಟು ನಂಬಿಕೆಯನ್ನು ಸಿಎಂ ಮೇಲೆ ಇಟ್ಟಿದ್ದೇವೆ. ನಂಬಿಕೆ, ವಿಶ್ವಾಸಕ್ಕೆ ಯಾವುದೇ ಕಾರಣಕ್ಕೂ ಕಳಂಕ ತರಬೇಡಿ ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.

Basavajaya mrutyunjaya shri
ಬಸವಜಯ ಮೃತ್ಯುಂಜಯ ಶ್ರೀ
author img

By

Published : Mar 28, 2022, 10:49 PM IST

ಹಾವೇರಿ: ಈ ಹಿಂದೆ ನಾವು ನಿಜಲಿಂಗಪ್ಪನವರನ್ನ, ಜೆ. ಹೆಚ್. ಪಟೇಲ್​ರನ್ನು ನಂಬಿರಲಿಲ್ಲ. ಆದರೆ, ಬೊಮ್ಮಾಯಿಯವರನ್ನು ಅಷ್ಟೊಂದು ನಂಬಿದ್ದೇವೆ. ಬೊಮ್ಮಾಯಿ ಅವರೇ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.

ಬಸವಜಯ ಮೃತ್ಯುಂಜಯ ಶ್ರೀ ಮಾತನಾಡಿದರು

ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಮಾತನಾಡಿದ ಶ್ರೀಗಳು, 12 ನೇ ಶತಮಾನದಲ್ಲಿ ಬಸವಣ್ಣನವರ ಮೇಲೆ‌ ಲಿಂಗಾಯತರು ನಂಬಿಕೆ ಇಟ್ಟಷ್ಟು ನಂಬಿಕೆಯನ್ನು ಸಿಎಂ ಮೇಲೆ ಇಟ್ಟಿದ್ದೇವೆ. ನಂಬಿಕೆ, ವಿಶ್ವಾಸಕ್ಕೆ ಯಾವುದೇ ಕಾರಣಕ್ಕೂ ಕಳಂಕ ತರಬೇಡಿ ಎಂದು ಮನವಿ ಮಾಡಿದರು. ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವುದರಿಂದ ನಿಮಗೆ ಏನಾದರೂ ತೊಂದರೆ ಆಗುವುದಾದರೆ, ಯಾರಿಂದಾದರೂ ಒತ್ತಡವಿದ್ದರೆ ಬಹಿರಂಗವಾಗಿ ಹೇಳಿ ಎಂದರು.

ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ಅವರು ನಮಗೆ ಕೈಕೊಟ್ಟರು. ಈಗ ಬೊಮ್ಮಾಯಿ ಅವರೂ ಕೈಕೊಟ್ಟರು ಎಂದು ಹೇಳಬೇಕಷ್ಟೆ. ಮುಂದಿನ ದಿನಗಳಲ್ಲಿ ಭಗವಂತ ಶಕ್ತಿಕೊಟ್ಟರೆ ಹೋರಾಟ ಮಾಡುತ್ತೇವೆ. ಈ ಹಿಂದೆ ನಿಮ್ಮ ತಂದೆ ಹಾಗೂ ಈಗ ನೀವು ಸಿಎಂ ಆಗುವುದಕ್ಕೆ ನಮ್ಮ ಸಮಾಜದ ದೊಡ್ಡ ಆಶೀರ್ವಾದವಿದೆ. ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಶ್ರೀಗಳು ಒತ್ತಾಯಿಸಿದರು.

ಮೀಸಲಾತಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆಯನ್ನು ನಾವು ಸಹಿಸುವುದಿಲ್ಲ. ನಮ್ಮ ಸಮಾಜಕ್ಕೆ 2ಎ ಮೀಸಲಾತಿಯ ಎಲ್ಲ ಹೋರಾಟಕ್ಕೂ ಸಿಎಂ ಬೊಮ್ಮಾಯಿ ಸ್ಪಂದಿಸಿದ್ದಾರೆ. ಡಿಸೆಂಬರ್ 16ರಂದು ಕಾಲು ನೋವಿದ್ದರೂ ಕೂಡ ಬೆಳಗಾವಿಯಲ್ಲಿ ನಡೆದ ನಮ್ಮ ಸಮಾಜದ ಎಲ್ಲ ಪಕ್ಷಗಳ ಶಾಸಕರ ಸಭೆಗೆ ಅವರು ಬಂದು ಭರವಸೆ ಕೊಟ್ಟಿದ್ದರು. ಬಜೆಟ್ ಅಧಿವೇಶನದ ಒಳಗಾಗಿ ಸಮಾಜಕ್ಕೆ ಮೀಸಲಾತಿ ಕೊಡುತ್ತೇನೆಂದು ನಮ್ಮ ಸಮಾಜದ ಶಾಸಕರು, ಸಚಿವರಿಗೆ ಸಿಎಂ ಮಾತು ಕೊಟ್ಟಿದ್ದರು. ಮೀಸಲಾತಿ ವಿಚಾರದಲ್ಲಿ ಕಳೆದೆರಡು ತಿಂಗಳಿಂದ ಸಿಎಂ ಬೊಮ್ಮಾಯಿಯವರು ಸ್ಪಷ್ಟತೆ ತೋರಿಸುತ್ತಿಲ್ಲ ಎಂದರು.

ಮಾತು ಕೊಟ್ಟಂತೆ ನಡೆದುಕೊಳ್ಳಲೇಬೇಕು: ಕೆಲವೇ ಕೆಲವು ದಿನಗಳ ಹಿಂದೆ ನಡೆದ ರಾಜ್ಯ ಸರ್ಕಾರವು ಮೀಸಲಾತಿ ಸಭೆಯಲ್ಲಿ ಹಾಲುಮತ ಸಮಾಜ, ವಾಲ್ಮೀಕಿ ಸಮಾಜ ಸೇರಿದಂತೆ ಹಲವರಿಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಪಂಚಮಸಾಲಿ ಸಮಾಜ ಒಂದೂವರೆ ವರ್ಷದಿಂದ ಹೋರಾಟ ಮಾಡುತ್ತಿದೆ. ಆದರೆ ಸಿಎಂ ಇದರ ಬಗ್ಗೆ ಮೌನವಾಗಿದ್ದಾರೆ. ಇದನ್ನು ನೋಡಿದರೆ ನಮಗೆಲ್ಲ ನಿರಾಶೆಯಾಗಿದೆ. ಬೇರೆಯವರಿಗೆ ಮಾತು ಕೊಟ್ಟಿದ್ದರೆ ನಾವು ಸುಮ್ಮನಿರುತ್ತಿದ್ದೆವು. ಯತ್ನಾಳ್​​ ಗೌಡರಿಗೆ ಮಾತು ಕೊಟ್ಟಿದ್ದಾರೆ. ಹೀಗಾಗಿ, ಸಿಎಂ ಬೊಮ್ಮಾಯಿಯವರು ಮಾತು ಕೊಟ್ಟಂತೆ ನಡೆದುಕೊಳ್ಳಲೇಬೇಕು ಎಂದು ಶ್ರೀಗಳು ಆಗ್ರಹಿಸಿದರು.

ಯತ್ನಾಳರಿಗೆ ಮಾತು ಕೊಟ್ಟಿದ್ದರು: ಸಿಎಂ ಬಸವರಾಜ ಬೊಮ್ಮಾಯಿ ಈ ಸಮಾಜವನ್ನ ಕೈಬಿಡೋದಿಲ್ಲ. ಹೊಸ ಇತಿಹಾಸ ಸೃಷ್ಟಿ ಮಾಡುತ್ತೇನೆ. ಯಡಿಯೂರಪ್ಪನವರು ಕೊಡಬೇಕಿತ್ತು, ಕೊಟ್ಟಿಲ್ಲ. ನಾನು ಮೀಸಲಾತಿ ಕೊಟ್ಟು ಹೊಸ ಕ್ರಾಂತಿ ಮಾಡುತ್ತೇನೆಂದು ಯತ್ನಾಳರಿಗೆ ಮಾತು ಕೊಟ್ಟಿದ್ದರು. ಇನ್ನು ಮೂರು ದಿನಗಳು ಮಾತ್ರ ಅವಕಾಶ ಇದೆ. ಮಾರ್ಚ್ 30ರ ಒಳಗಾಗಿ ಆಯೋಗದ ವರದಿ ಪಡೆದುಕೊಳ್ಳಬೇಕು.

ಏಪ್ರಿಲ್ 14ರ ಅಂಬೇಡ್ಕರ್​​​ ಜಯಂತಿ ಒಳಗೆ ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಏಪ್ರಿಲ್ 14ರಂದು ಕೂಡಲಸಂಗಮದಲ್ಲಿ ಸಭೆ ಕರೆದು ಅಂತಿಮ ಹೋರಾಟದ ರೂಪುರೇಷೆ ಸಿದ್ಧಪಡಿಸುವುದಾಗಿ ಬಸವಜಯ ಮೃತ್ಯುಂಜಯ ಶ್ರೀಗಳು ಎಚ್ಚರಿಕೆ ರವಾನಿಸಿದರು. ಮೀಸಲಾತಿ ಕೊಡದಿದ್ದರೆ ನರಗುಂದ ಬಂಡಾಯದ ಹೋರಾಟದ ಮಾದರಿಯಲ್ಲಿ ಐದನೇ ಹೋರಾಟವಾದ್ರೂ ಆಶ್ಚರ್ಯಪಡಬೇಕಿಲ್ಲ. ಅದಕ್ಕೆ ಅವಕಾಶ ಕೊಡಬೇಡಿ. ನಾವು ಶಾಂತಿ ಪ್ರಿಯರು, ನಿಮ್ಮನ್ನ ಬಹಳ ನಂಬಿದ್ದೇವೆ ಎಂದು ಶ್ರೀಗಳು ಪುನರುಚ್ಚಿರಿಸಿದರು.

ಓದಿ: ಚುನಾವಣೆಗಳು 'ಜನಾದೇಶ'ವಾಗುವ ಬದಲು 'ಧನಾದೇಶ'ವಾಗುತ್ತಿವೆ: ಸ್ಪೀಕರ್ ಕಾಗೇರಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.