ಹಾವೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡ್ತಿದ್ದ ಸರಕು ಸಾಗಾಣಿಕೆ ಲಾರಿ ತಡೆದು ಲಾರಿ ಚಾಲಕನ ಬಳಿ ಇದ್ದ ಮೊಬೈಲ್ ಮತ್ತು ನಗದು ಹಣ ದೋಚಿದ್ದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇಬ್ಬರು ದರೋಡೆಕೋರರು ನಿನ್ನೆ ತಡರಾತ್ರಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಚಾರ ಮಾಡುತ್ತಿದ್ದ ಸರಕು ಸಾಗಾಣಿಕೆ ಲಾರಿ ತಡೆದು ಚಾಲಕನ ಬಳಿ ಇದ್ದ ನಗದು ಹಣ ಮತ್ತು ಮೊಬೈಲ್ ದೋಚಿದ್ದರು.
ಶಾಂತಪ್ಪ ಅಂಗೂರ ಹಾಗೂ ಮಹಾಂತೇಶ ಬಾಬರ ಬಂಧಿತರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳನ್ನ ಬೆನ್ನತ್ತಿದ ಹೈವೇ ಬೀಟ್ ಪೊಲೀಸರು ಆರೋಪಿಗಳನ್ನ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.