ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಸ್ಥಳದ ಸ್ವಚ್ಛತೆಗೆ ನಮ್ಮ ಜೆಸಿಬಿ ಮತ್ತು ರೋಲರ್ ಯಂತ್ರವನ್ನು ಬಳಸಿಕೊಂಡು ಇದೀಗ ಹಣ ಕೇಳಿದ್ರೆ ಗುತ್ತಿಗೆದಾರರು ಅವಾಜ್ ಹಾಕುತ್ತಿದ್ದಾರೆ ಅಂತ ವಾಹನಗಳ ಮಾಲೀಕರಾದ ಪ್ರವೀಣ ಹಾಗೂ ಇಬ್ರಾಹಿಂ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಜನವರಿ 6 ರಿಂದ 8 ರ ವರೆಗೆ ಅಖಿಲ ಭಾರತ 86 ನೇ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನ ನಡೆಯುವ ಸ್ಥಳದ ಸ್ವಚ್ಛತೆಗೆ ನಮ್ಮ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು. ನವೆಂಬರ್ 14 ರಿಂದ ಡಿಸೆಂಬರ್ 4 ರವರೆಗೆ ವೇದಿಕೆ ನಿರ್ಮಾಣಕ್ಕೆ ನಮ್ಮ ಜೆಸಿಬಿ ಮತ್ತು ರೋಲರ್ ಬಳಸಿಕೊಂಡು ಇದೀಗ ಹಣ ನೀಡದೆ ಸತಾಯಿಸುತ್ತಿದ್ದಾರೆ. ಈ ಕುರಿತಂತೆ ಗುತ್ತಿಗೆದಾರ ಮಹೇಶ್ಗೆ ಕೇಳಿದರೆ ಅವರು ಅವಾಚ್ಯ ಶಬ್ದಗಳಿಂದ ಅವಾಜ್ ಹಾಕಿದ್ದಾರೆ ಎಂದು ವಾಹನಗಳ ಮಾಲೀಕರು ಆರೋಪಿಸಿದ್ದಾರೆ.
ಜೆಸಿಬಿ ಮಾಲೀಕ ಪ್ರವೀಣನಿಗೆ 70 ಸಾವಿರ ಹಾಗೂ ರೋಲರ್ ಮಾಲೀಕ ಇಬ್ರಾಹಿಂಗೆ 20 ಸಾವಿರ ರೂಪಾಯಿ ಹಣ ನೀಡುವುದು ಬಾಕಿ ಇದೆಯಂತೆ. ಈ ವಿಷಯವನ್ನು ಕಸಾಪ ಅಧ್ಯಕ್ಷರ ಮತ್ತು ಅಧಿಕಾರಿಗಳ ಗಮನಕ್ಕೆ ಸಹ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ, ಹೇಗಾದರೂ ಮಾಡಿ ನಮ್ಮ ಹಣ ಕೊಡಿಸಿ ಎಂದು ಚಾಲಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ.. ಅತಿಥಿಗಳಿಗೆ ಕಲ್ಯಾಣ ಮಂಟಪ, ಸಮುದಾಯ ಭವನ ಉಚಿತವಾಗಿ ನೀಡಲು ಮುಂದಾದ ಹಾವೇರಿ ಜನ