ETV Bharat / state

ಹಾವೇರಿ ಡಿಡಿಪಿಐ ಕಚೇರಿ ಮೇಲೆ ಎಸಿಬಿ ದಾಳಿ: ದಾಖಲೆ ಇಲ್ಲದ 1 ಲಕ್ಷದ 69 ಸಾವಿರ ರೂ. ಜಪ್ತಿ

ಹಾವೇರಿಯ ಡಿಡಿಪಿಐ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದು, ನಗದು ಪುಸ್ತಕದಲ್ಲಿ ದಾಖಲಾಗದ 1 ಲಕ್ಷ 69 ಸಾವಿರ ಅನಧಿಕೃತ ಹಣವನ್ನು ಜಪ್ತಿ ಮಾಡಿದ್ದಾರೆ.

ACB Raid on DDPI office at Haveri
ಹಾವೇರಿ ಡಿಡಿಪಿಐ ಕಚೇರಿ ಮೇಲೆ ಎಸಿಬಿ ದಾಳಿ
author img

By

Published : Apr 12, 2022, 7:09 AM IST

ಹಾವೇರಿ: ಡಿಡಿಪಿಐ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಈ ವೇಳೆ ಡಿಡಿಪಿಐ ಸೇರಿದಂತೆ ಕಚೇರಿ ಸಿಬ್ಬಂದಿ ಬಳಿ 1 ಲಕ್ಷ 69 ಸಾವಿರ ರೂಪಾಯಿ ಅನಧಿಕೃತ ನಗದು ಹಣ ಪತ್ತೆಯಾಗಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಡಿಡಿಪಿಐ ಜಗದೀಶ್ವರ ಅವರ ಬಳಿ 50,900 ರೂಪಾಯಿ ನಗದು ಹಾಗೂ ಇತರ ಸಿಬ್ಬಂದಿ ಬಳಿ 1,18,100 ರೂಪಾಯಿ ಹಣ ಪತ್ತೆಯಾಗಿದೆ. ನಗದು ಪುಸ್ತಕದಲ್ಲಿ ದಾಖಲಾಗದ ಒಟ್ಟು 1 ಲಕ್ಷದ 69 ಸಾವಿರ ಅನಧಿಕೃತ ಹಣವನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕಚೇರಿಯಲ್ಲಿನ ದಾಖಲೆಗಳ ಪರಿಶೀಲನೆ ನಂತರ ಡಿಡಿಪಿಐ ಮತ್ತು ಸಿಬ್ಬಂದಿ ಬಳಿ ಅನಧಿಕೃತ ಹಣ ಪತ್ತೆಯಾಗಿದೆ ಎನ್ನಲಾಗ್ತಿದೆ.

ಎಸಿಬಿ ಡಿವೈಎಸ್​​ಪಿ ಗೋಪಿ, ಸಿಪಿಐಗಳಾದ ಪ್ರಭಾವತಿ, ಬಸವರಾಜ ಬುದ್ನಿ ಹಾಗೂ ಎಸಿಬಿ ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು. ಹಾವೇರಿ ಎಸಿಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ: ಬೆಳಗಾವಿ: ವಾಹನ ಅಡ್ಡಗಟ್ಟಿ 4.97 ಕೋಟಿ ರೂಪಾಯಿ ದರೋಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.