ETV Bharat / state

ಕ್ಯಾನ್ಸರ್​​ನಿಂದ ಬಳಲುತ್ತಿರುವ ಗಾಯಕಿ: ಚಿಕಿತ್ಸೆಗಾಗಿ ಆರ್ಥಿಕ ಸಹಾಯಕ್ಕೆ ಎದುರು ನೋಡುತ್ತಿರುವ ಹಾವೇರಿಯ ಗಾನಕೋಗಿಲೆ - etv bharat karnataka

ತಮ್ಮ ಗಾಯನದ ಮೂಲಕ ಹೆಸರುವಾಸಿಯಾಗಿರುವ ಮಂಜುಳಾ ಕೊಪ್ಪದ್ ಎಂಬ ಗಾಯಕಿ ಕ್ಯಾನ್ಸರ್​ ಕಾಯಿಲೆಗೆ ತುತ್ತಾಗಿದ್ದು, ಚಿಕಿತ್ಸೆಗೆ ನೆರವು ನೀಡುವಂತೆ ಸಂಘ, ಸಂಸ್ಥೆಗಳು ದಾನಿಗಳಿಗೆ ಮನವಿ ಮಾಡಿದ್ದಾರೆ.

a-singer-who-suffering-from-cancer-request-financial-help-for-treatment-in-haveri
ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿರುವ ಗಾಯಕಿ: ಚಿಕಿತ್ಸೆಗಾಗಿ ಆರ್ಥಿಕ ಸಹಾಯಕ್ಕೆ ಎದುರು ನೋಡುತ್ತಿರುವ ಹಾವೇರಿಯ ಗಾನಕೋಗಿಲೆ
author img

By ETV Bharat Karnataka Team

Published : Oct 4, 2023, 8:08 AM IST

Updated : Oct 4, 2023, 9:57 AM IST

ಕ್ಯಾನ್ಸರ್​​ನಿಂದ ಬಳಲುತ್ತಿರುವ ಗಾಯಕಿ ಮಂಜುಳಾ ಕೊಪ್ಪದ್

ಹಾವೇರಿ: ಮಂಜುಳಾ ಕೊಪ್ಪದ್​ ಅಂದರೆ ಹಾವೇರಿಯ ಗಾನಕೋಗಿಲೆ ಎಂದೇ ಹೆಸರು ಪಡೆದುಕೊಂಡಿದ್ದಾರೆ. ಇವರು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಸಂಗೀತ ಪ್ರೇಮಿಗಳಿಗೆ ಅಚ್ಚುಮೆಚ್ಚಿನ ಗಾಯಕಿಯಾಗಿದ್ದಾರೆ. ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ಮಂಜುಳಾ ಕೊಪ್ಪದ್​ ಅವರು ತಮ್ಮ ಗಾನ ಸುಧೆಯಿಂದಲೇ ಮನೆ ಮಾತಗಿದ್ದಾರೆ. ಗಾಯಕಿ ಮಂಜುಳಾಗೆ ವಿವಿಧ ಸಂಘ, ಸಂಸ್ಥೆಗಳು ನೂರಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಮಂಜುಳಾ ಅವರ ಸಂಗೀತ ಯಾನ ಆರಂಭವಾಗಿದ್ದು 2020 ರಲ್ಲಿ. ಅಂದಿನಿಂದ ಮೂರು ವರ್ಷಗಳ ಕಾಲ ನೂರಾರು ಹಾಡುಗಳನ್ನು ಹಾಡಿ ಸಂಗೀತ ಪ್ರಿಯರ ಮನ ಗೆದಿದ್ದಾರೆ. ಸಾಮಾಜಿಕ ಜಾಲತಾಣದಿಂದ ಆರಂಭವಾದ ಇವರ ಖ್ಯಾತಿ ಹಲವು ಸಭೆ ಸಮಾರಂಭಗಳಿಗೆ ಕರೆದೊಯ್ಯಿತು. ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಾಡಿನ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಗಾಯಕಿ ಮಂಜುಳಾಗೆ ಇದೀಗ ಹಾಡಲಾಗದ ಪರಿಸ್ಥಿತಿ ಉಂಟಾಗಿದೆ.

ಇದಕ್ಕೆ ಕಾರಣ ಅವರಿಗೆ ಕಳೆದ ಎರಡು ವರ್ಷಗಳಿಂದ ಕಾಣಿಸಿಕೊಂಡಿರುವ ಕ್ಯಾನ್ಸರ್. ರಾಜ್ಯದೆಲ್ಲಡೆ ಹೆಸರು ಮಾಡಿದ್ದ ಮಂಜುಳಾಗೆ ಸ್ತನ ಕ್ಯಾನ್ಸರ್ ಇರುವುದರಿಂದ ಹಾಡು ಹಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಮಂಜುಳಾ ಈಗಾಗಲೇ 12 ಬಾರಿ ಕೀಮೋಥೆರಪಿಗೆ ಒಳಗಾಗಿದ್ದಾರೆ. ಕ್ಯಾನ್ಸರ್ ಎರಡನೇಯ ಹಂತದಲ್ಲಿದ್ದು, ಸೂಕ್ತ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದರೆ ಹಿಂದಿನಂತೆ ಹಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕ್ಯಾನ್ಸರ್​ ಚಿಕಿತ್ಸೆಗಾಗಿ ಮಂಜುಳಾ 6 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಅಲ್ಲದೇ, ಪರಿಚಿತರ ಮತ್ತು ಸಂಬಂಧಿಕರಿಂದ ನೆರವು ಪಡೆದಿದ್ದಾರೆ. ಆದರೆ, ಚಿಕಿತ್ಸೆಗೆ ಹಣ ಸಾಕಾಗುತ್ತಿಲ್ಲ, ಇನ್ನು 25 ರೇಡಿಯೇಷನ್‌ಗಳಿಗಾಗಿ ಎರಡು ಲಕ್ಷ ರೂಪಾಯಿಗೂ ಅಧಿಕ ಹಣ ಮಂಜುಳಾ ಅವರಿಗೆ ಬೇಕಾಗಿದೆ. ನಿತ್ಯದ ಔಷಧ ಮತ್ತು ಚಿಕಿತ್ಸೆಗೆ ಎಂದು 2 ಲಕ್ಷ ರೂ. ಗೂ ಅಧಿಕ ಹಣ ಮಂಜುಳಾಗೆ ಬೇಕಾಗಿದೆ.

ಗಾಯಕಿ ಮಂಜುಳಾ ಮಾತನಾಡಿ, ನನಗೆ ಎರಡು ವರ್ಷಗಳಿಂದ ಕ್ಯಾನ್ಸರ್​​ಗೆ ತುತ್ತಾಗಿದ್ದೇನೆ. ನಾನು ಯೋಧರ, ರೈತರ, ಗಾಂಧೀಜಿ ಅವರ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್​ ಬಗ್ಗೆ ಸುಮಾರು ಹಾಡುಗಳನ್ನು ಬರೆದು, ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದಾಗ ನೀವು ನನ್ನನ್ನು ಪ್ರೋತ್ಸಾಹಿಸಿದ್ದೀರಿ. ಇಲ್ಲಿಯವರೆಗೂ 70 ಲಕ್ಷ ವೀಕ್ಷಣೆಯನ್ನು ನನ್ನ ಹಾಡುಗಳು ಪಡೆದಿವೆ. ಈಗ ನಾನು ಸಂಕಷ್ಟ ಪರಿಸ್ಥಿತಿಯಲ್ಲಿದ್ದೀನಿ. ನಾನು ಹಾಡನ್ನೇ ಜೀವನವನ್ನಾಗಿ ತೋಡಗಿಸಿಕೊಂಡಿದ್ದೆ. ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್​ ಚಿಕಿತ್ಸೆಗಾಗಿ 5 ರಿಂದ 6 ಲಕ್ಷ ರೂಗಳನ್ನು ಖರ್ಚು ಮಾಡಿದ್ದೇನೆ. ಈಗ ಇನ್ನೂ ಒಂದೂವರೆ ತಿಂಗಳು ಚಿಕಿತ್ಸೆ ಪಡೆಯಬೇಕಾಗಿದೆ ಇದಕ್ಕೆ 2 ಲಕ್ಷ ರೂಪಾಯಿಬೇಕಾಗಿದೆ. ನಾನು ಮತ್ತೆ ಮೊದಲಿನಂತೆ ಹಾಡಲು ನನಗೆ ಆರ್ಥಿಕ ಸಹಾಯ ಮಾಡುವಂತೆ ಸಂಘ ಸಂಸ್ಥೆಗಳು ಮತ್ತು ದಾನಿಗಳಿಗೆ ಮನವಿ ಮಾಡಿದ್ದಾರೆ.

ಸಹಾಯ ಮಾಡಲು ಬಯಸುವವರು 9741269639 ಫೋನ್​ ಪೇ ನಂಬರ್‌ಗೆ ಸಹಾಯ ಮಾಡಬಹುದು.

ಬ್ಯಾಂಕ್​ ವಿವರ:
ಹೆಸರು - ಮಂಜುಳಾ ಕೊಪ್ಪದ್​
ಬ್ಯಾಂಕ್ - ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
ಶಾಖೆ - ನೆಗಳೂರು
ಅಕೌಂಟ್ ನಂಬರ್- 89030381487
ಐಎಫ್ಎಸ್‌ಸಿ ಕೋಡ್- KVGB0007208

ಇದನ್ನೂ ಓದಿ: ಪುತ್ತೂರು: ಪೊದೆಯೊಳಗಿನ ಮುರುಕಲು ಮನೆಯಲ್ಲಿ 40 ವರ್ಷಗಳಿಂದ ಬ್ರಹ್ಮಚಾರಿಯ ಏಕಾಂತ ವಾಸ!

Last Updated : Oct 4, 2023, 9:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.