ETV Bharat / state

ಹಾಸನದಲ್ಲೂ ಅತಿಥಿ ಉಪನ್ಯಾಸಕರ ಆನ್​​ಲೈನ್​​​ ಪ್ರತಿಭಟನೆಗೆ ಬೆಂಬಲ

ಅತಿಥಿ ಉಪನ್ಯಾಸಕರಿಗೆ ಬಾಕಿ ಇರುವ ವೇತನ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆನ್​ಲೈನ್​ ಚಳವಳಿ ನಡೆಸಿದ್ದಾರೆ. ಈ ಚಳವಳಿಗೆ ರಾಜ್ಯದಾದ್ಯಂತ ಉತ್ತಮ ಬೆಂಬಲ ದೊರಕಿದ್ದು, ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಇವರು ಮಂಡಿಸಿದ್ದಾರೆ.

Support for online protest of guest lecturers demanding pay in Hassan
ಹಾಸನದಲ್ಲೂ ಅತಿಥಿ ಉಪನ್ಯಾಸಕರ ಆನ್​​ಲೈನ್​​​ ಪ್ರತಿಭಟನೆಗೆ ಬೆಂಬಲ
author img

By

Published : Jul 11, 2020, 10:06 PM IST

ಹಾಸನ: ರಾಜ್ಯದಾದ್ಯಂತ ನಡೆದ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರ ಆನ್​​ಲೈನ್​​ ಚಳವಳಿಯಲ್ಲಿ ಜಿಲ್ಲೆಯ ಉಪನ್ಯಾಸಕರು ಕೂಡ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.​

ಸರ್ಕಾರವು ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು. ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಹಾಗೂ ಸೇವಾ ಭದ್ರತೆ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಯಿತು.

ಹಾಸನದಲ್ಲೂ ಅತಿಥಿ ಉಪನ್ಯಾಸಕರ ಆನ್​​ಲೈನ್​​​ ಪ್ರತಿಭಟನೆಗೆ ಬೆಂಬಲ

ಅತಿಥಿ ಉಪನ್ಯಾಸಕಿ ಸುಮಾ ಈ ಕುರಿತು ಮಾತನಾಡಿ, ಇಂದು ಕರ್ನಾಟಕ ರಾಜ್ಯದಲ್ಲಿರುವ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಬರುವ ಸಂಬಳ ಮೊದಲೆ ಕಡಿಮೆಯಾಗಿದ್ದು, ಕೆಲಸ ಮಾಡಿದ ಸಂಬಳ ಕೊಡ 7-10 ತಿಂಗಳು ನಿಲ್ಲಿಸಿದ್ದಾರೆ. ತಮ್ಮ ವೃತ್ತಿಯನ್ನೇ ನಂಬಿರುವ ಅತಿಥಿ ಉಪನ್ಯಾಸಕರುಗಳಿಗೆ ಸಂಬಳ ಕೊಡದಿದ್ದರೆ ತಮ್ಮ ಕುಟುಂಬ ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಆನ್​​​ಲೈನ್ ಮೂಲಕ ಇಡೀ ರಾಜ್ಯದಲ್ಲಿ ನಮ್ಮ ಬೇಡಿಕೆ ಸರ್ಕಾರಕ್ಕೆ ಹೇಳುವ ಪ್ರಯತ್ನ ಮಾಡಿದ್ದು, ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಸೇವಾ ಭದ್ರತೆ ಈಡೇರಿಸುವ ನಿಟ್ಟಿನಲ್ಲಿ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.