ETV Bharat / state

ಪ್ಲಾಸ್ಟಿಕ್​ ಧ್ವಜ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ - Hindu Folklore Committee

ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ ಹಾಗೂ ಬಳಕೆ ಮಾಡುವವರ ವಿರುದ್ಧ ಕ್ರಮ ಜರುಗಿಸಿ ಧ್ವಜದ ಗೌರವ ಕಾಪಾಡುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Request the District to take action against plastic flag vendors
ಪ್ಲಾಸ್ಟಿಕ್​ ಧ್ವಜ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ
author img

By

Published : Jan 15, 2020, 11:50 PM IST

ಹಾಸನ: ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ ಹಾಗೂ ಬಳಕೆ ಮಾಡುವವರ ವಿರುದ್ಧ ಕ್ರಮ ಜರುಗಿಸಿ ಧ್ವಜದ ಗೌರವ ಕಾಪಾಡುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ಲಾಸ್ಟಿಕ್​ ಧ್ವಜ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ

ಹಿಂದೂ ಜನಜಾಗೃತಿ ಸಮಿತಿ ಗಣರಾಜ್ಯೋತ್ಸವ ಅಂಗವಾಗಿ ಹಾಸನ ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿ ಅಭಿಯಾನವನ್ನು ಮಾಡಲಾಗುತ್ತಿದ್ದು, ಭಾರತದ ಸ್ವಾತಂತ್ರ್ಯ ದಿನದಂದು ಎಲ್ಲಾ ಕಡೆ ಧ್ವಜ ವಂದನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ,ಅದೇ ದಿನ ಮಧ್ಯಾಹ್ನದಿಂದಲೇ ಮಾರ್ಗಗಳಲ್ಲಿ ಮತ್ತು ಚರಂಡಿಗಳಲ್ಲಿ ಕಾಗದದ ಅಥವಾ ಪ್ಲಾಸ್ಟಿಕಿನ ರಾಷ್ಟ್ರಧ್ವಜಗಳು ಛಿದ್ರ-ಛಿದ್ರವಾಗಿ ಬಿದ್ದಿರುತ್ತವೆ. ಇದರಿಂದ ರಾಷ್ಟ್ರಧ್ವಜಕ್ಕೆ ಅವಮಾನವನ್ನು ಮಾಡಿದಂತಾಗುತ್ತದೆ.

ಕೇಂದ್ರೀಯ ಗೃಹ ಮಂತ್ರಾಲಯದ ಆದೇಶದಂತೆ ರಾಷ್ಟ್ರಧ್ವಜ ಮತ್ತು ಬಿಲ್ಲೆಗಳಿಗಾಗಿ ಪ್ಲಾಸ್ಟಿಕ್ ಉಪಯೋಗಿಸಬಾರದು ಎಂಬ ನಿಯಮವಿದೆ. ಈ ನಿರ್ಣಯವನ್ನು ಯೋಗ್ಯ ರೀತಿಯಲ್ಲಿ ಕಾರ್ಯ ರೂಪಕ್ಕೆ ತರುವ ಅವಶ್ಯಕತೆಯಿದೆ ಎಂದರು.

Intro:ಹಾಸನ: ಜನವರಿ ೨೬ ರ ಗಣರಾಜ್ಯೋತ್ಸವದ ಅಂಗವಾಗಿ ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟ-ಬಳಕೆ ಮಾಡುವವರ ವಿರುದ್ಧ ಕ್ರಮ ಜರುಗಿಸಿ ಧ್ವಜದ ಗೌರವ ಕಾಪಾಡುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಹಿಂದೂ ಜನಜಾಗೃತಿ ಸಮಿತಿ ಗಣರಾಜ್ಯೋತ್ಸವ ಅಂಗವಾಗಿ ಹಾಸನ ಜಿಲ್ಲೆ ಸೇರಿದಂತೆ ರಾಜ್ಯವ್ಯಾಪಿ ಅಭಿಯಾನವನ್ನು ಮಾಡಲಾಗುತ್ತಿದ್ದು, ಭಾರತದ ಸ್ವಾತಂತ್ರ್ಯ ದಿನದಂದು ಎಲ್ಲಾ ಕಡೆ ಧ್ವಜವಂದನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಅದೇ ದಿನಾ ಮಧ್ಯಾಹ್ನದಿಂದಲೇ ಮಾರ್ಗಗಳಲ್ಲಿ ಮತ್ತು ಚರಂಡಿಗಳಲ್ಲಿ ಕಾಗದದ ಅಥವಾ ಪ್ಲಾಸ್ಟಿಕಿನ ರಾಷ್ಟ್ರಧ್ವಜಗಳು ಛಿದ್ರವಿಛಿದ್ರವಾಗಿ ಬಿದ್ದಿರುತ್ತವೆ. ಅದಲ್ಲದೇ ಪ್ಲಾಸ್ಟಿಕಿನ ಉಪಯೋಗದಿಂದ ಅದು ತಕ್ಷಣ ನಾಶವಾಗದ ಕಾರಣ ಬಹಳ ದಿನಗಳ ತನಕ ರಾಷ್ಟ್ರಧ್ವಜದ ಅವಮಾನವನ್ನು ಕಾಣಬೇಕಾಗುತ್ತದೆ ಎಂದು ಬೇಸರವ್ಯಕ್ತಪಡಿಸಿದರು.
ಹಿಂದೂ ಜನಜಾಗೃತಿ ಸಮಿತಿ ಕಳೆದ ೧೫ ವರ್ಷಗಳಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವ ಅಭಿಯಾನ ಮಾಡುತ್ತಿದೆ. ಇದರ ಅಂತರರ್ಗತ ರಸ್ತೆಬದಿ ಬಿದ್ದಿರುವ ರಾಷ್ಟ್ರಧ್ವಜಗಳನ್ನು ಸಂಗ್ರಹಿಸುವುದು, ಪ್ಲಾಸ್ಟಿಕ್ ಧ್ವಜದ ಬಳಕೆ ಮಾಡದಂತೆ ಶಾಲಾ - ಕಾಲೇಜುಗಳಲ್ಲಿ ಜಾಗೃತಿ ಮಾಡುವುದು, ಸರಕಾರಕ್ಕೆ ಮನವಿಪತ್ರ ನೀಡುವುದು, ಕರಪತ್ರ ವಿತರಿಸುವುದು ಮುಂತಾದ ರೀತಿಯಲ್ಲಿ ಅಭಿಯಾನ ಮಾಡುತ್ತಿದೆ.
ಕೇಂದ್ರೀಯ ಗೃಹಮಂತ್ರಾಲಯದ ಆದೇಶದಂತೆ ರಾಷ್ಟ್ರಧ್ವಜ ಮತ್ತು ಬಿಲ್ಲೆಗಳಿಗಾಗಿ ಪ್ಲಾಸ್ಟಿಕ್ ಉಪಯೋಗಿಸಬಾರದು ಎಂಬ ನಿಯಮವಿದೆ. ಈ ನಿರ್ಣಯವನ್ನು ಯೋಗ್ಯ ರೀತಿಯಲ್ಲಿ ಕಾರ್ಯರೂಪಕ್ಕೆ ತರುವ ಅವಶ್ಯಕತೆಯಿದೆ ಎಂದರು.
ಭಾರತೀಯ ಸಂವಿಧಾನದಲ್ಲಿನ ಕಲಮ್ ೫೧ (ಅ) ಇದಕ್ಕನುಸಾರ ರಾಷ್ಟ್ರಧ್ವಜದ ಗೌರವ ಕಾಪಾಡುವುದು ನಾಗರಿಕರ ಹಾಗೂ ಸರಕಾರದ ಮೂಲಭೂತ ಕರ್ತವ್ಯಗಳಾಗಿವೆ. ರಾಷ್ಟ್ರಧ್ವಜದ ಅವಮಾನ, ರಾಷ್ಟ್ರೀಯ ಗೌರವದ ಪ್ರತೀಕಗಳ ದುರುಪಯೋಗವನ್ನು ತಡೆಯುವ ಕಾಯ್ದೆ ೧೯೫೦, ಕಲಮ್ ೨ ಮತ್ತು ೫ ಕ್ಕನುಸಾರ ಹಾಗೂ ರಾಷ್ಟ್ರಗೌರವ ಅವಮಾನ ನಿರ್ಬಂಧ ಅದಿನಿಯಮ ೧೯೭೧ರ ಕಲಂ ೯ ಕ್ಕನುಸಾರ ಹಾಗೂ ಬೋಧಚಿಹ್ನೆ ಹಾಗೂ ಹೆಸರುಗಳನ್ನು (ಅಯೋಗ್ಯವಾಗಿ ಉಪಯೋಗಿಸಲು ನಿರ್ಬಂಧ) ಅಧಿನಿಯಮ ೧೯೫೦ ಇತ್ಯಾದಿ ಈ ಮೂರು ಕಾಯಿದೆಗನುಸಾರ ಇದು ದಂಡನಾತ್ಮಕ ಅಪರಾಧವಾಗಿದೆ ಎಂದರು. ಹಾಗಾಗಿ ರಾಷ್ಟ್ರಧ್ವಜದ ಅವಮಾನವಾಗ ಬಾರದೆಂದು ಸರಕಾರವು ತೆಗೆದುಕೊಂಡ ನಿರ್ಣಯವನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಪ್ಲಾಸ್ಟಿಕಿನ ರಾಷ್ಟ್ರಧ್ವಜ, ಬಿಲ್ಲೆ, ಹಾಗೂ ಇತರ ವಸ್ತುಗಳನ್ನು ಉತ್ಪಾದನೆ ಮಾಡುವ ಉತ್ಪಾದಕರು ಹಾಗೂ ವಿತರಕರು ಮತ್ತು ಮಾರಾಟಗಾರರು ಇವರ ಮೇಲೆ ಪೊಲೀಸರ ಸಹಾಯದಿಂದ ದಾಳಿ ಮಾಡಿ ಅವರ ವಸ್ತುಗಳನ್ನು ಜಪ್ತಿ ಮಾಡಬೇಕು ಹಾಗೂ ಕಾಯಿದೆಯ ಉಲ್ಲಂಘನೆ ಮಾಡಿದ್ದಕ್ಕಾಗಿ ಕಾನೂನು ಪ್ರಕಾರ ಕಾರ್ಯಾಚರಣೆ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರವ್ಯಾಪಿ ಅಭಿಯಾನವನ್ನು ಮಾಡುತ್ತಿದ್ದು, ಇದಕ್ಕೆ ಉತ್ತಮ ರೀತಿ ಸಹಕರಿಸಬೇಕೆಂದು ಮನವಿ ಮಾಡಿದರು.

ಬೈಟ್ : ಸುಜಾತ, ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.