ETV Bharat / state

ಜನಸಾಮಾನ್ಯರಿಗೂ ಹಾಸನಾಂಬೆ ದರ್ಶನ ಭಾಗ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಮನವಿ - ಹಾಸನಾಂಬೆ ಜಾತ್ರಾ ಮಹೋತ್ಸವ ಪ್ರಾರಂಭ

ಹಾಸನಾಂಬೆ ಎಂದರೆ ಸಾವಿರಾರು ವರ್ಷಗಳ ಇತಿಹಾಸವಿದೆ ಹಾಗೂ ತನ್ನದೇಯಾದ ಶಕ್ತಿಯಿದೆ. ಇದರಿಂದಲೇ ದೇಶ-ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ಅನೇಕ ಜನರು ಹರಕೆ ಕಟ್ಟಿಕೊಂಡು ತಾಯಿಯ ದರ್ಶನಕ್ಕಾಗಿ ಬರುತ್ತಾರೆ. ವರ್ಷಕ್ಕೆ ಒಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ನೀಡಲಾಗುತ್ತದೆ. ಈಗ ದರ್ಶನ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.

request-district-government-give-hasanabe-darshan-to-common-people
ಹಾಸನಾಂಬೆ ದರ್ಶನವನ್ನು ವಿಐಪಿಗಳಿಗೆ
author img

By

Published : Nov 7, 2020, 8:06 PM IST

ಹಾಸನ: ಕೇವಲ ವಿಶೇಷ ಆಹ್ವಾನಿತರಿಗೆ ಮಾತ್ರ ಹಾಸನಾಂಬೆ ದೇವಿ ದರ್ಶನ ನೀಡಿದರೆ ಸಾಲದು, ಮುಖ್ಯವಾಗಿ​ ಮೊದಲು ಜನಸಾಮಾನ್ಯರಿಗೆ ದರ್ಶನ ಸಿಗುವಂತಾಗಬೇಕು ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಹಾಸನಾಂಬೆ ದರ್ಶನವನ್ನು ವಿಐಪಿಗಳಿಗೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಾಸನಾಂಬೆ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು, ಜಿಲ್ಲಾಡಳಿತ ದೇವಾಲಯ ಪ್ರವೇಶ ಮಾಡಲು ಸಾರ್ವಜನಿಕರಿಗೆ ನಿರ್ಬಂಧ ಹೇರಿದೆ. ವಿಶೇಷ ಆಹ್ವಾನಿತರಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಜನಸಾಮಾನ್ಯರಿಗೆ ಇಲ್ಲದ ದರ್ಶನಾವಕಾಶವನ್ನು ಕೇವಲ ವಿಐಪಿ ಜನರಿಗೆ ಮಾತ್ರ ಏಕೆ ನೀಡುವುದು ಎಂದು ಪ್ರಶ್ನಿಸಿದರು.

ಜನಪ್ರತಿನಿಧಿಗಳು ಸೃಷ್ಟಿಯಾಗುವುದೇ ಜನಸಾಮಾನ್ಯರಿಂದ ಎಂಬುದನ್ನು ಮರೆಯಬಾರದು. ಜಿಲ್ಲಾಡಳಿತದ ಇಂತಹ ನಿರ್ಧಾರ ಜನಸಾಮಾನ್ಯರಿಗೆ ಅವಮಾನ ಮಾಡಿದಂತೆ ಎಂದ ಅವರು, ವಿಶೇಷ ಆಹ್ವಾನಿತರಿಗೆ ಮಾತ್ರ ಪ್ರವೇಶ ಕೊಡುವುದಾದರೆ ನಾಮಫಲಕ ಹಾಕಲಿ ಎಂದು ಸಲಹೆ ನೀಡಿದರು. ಹಾಸನಾಂಬೆ ಎಂದರೆ ಸಾವಿರಾರು ವರ್ಷಗಳ ಇತಿಹಾಸವಿದೆ ಹಾಗೂ ತನ್ನದೆಯಾದ ಶಕ್ತಿಯಿದೆ. ಇದರಿಂದಲೇ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದೆ. ಅನೇಕ ಜನರು ಹರಕೆ ಕಟ್ಟಿಕೊಂಡು ತಾಯಿಯ ದರ್ಶನಕ್ಕಾಗಿ ಬರುತ್ತಾರೆ. ವರ್ಷಕ್ಕೆ ಒಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ನೀಡಲಾಗುತ್ತದೆ. ಈಗ ದರ್ಶನ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ ಎಂದರು.

ಹಾಸನ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸದೃಢರಾಗಿದ್ದಾರೆ. ಹಾಸನಾಂಬೆ ದೇವಸ್ಥಾನದ ಬಾಗಿಲು ಮುಚ್ಚಲು ಇನ್ನು ಕೆಲ ದಿವಸಗಳು ಮಾತ್ರ ಇರುವುದರಿಂದ ನಮ್ಮಗಳ ಮತ್ತು ನನ್ನಂತ ಇನ್ನೂ ಹಲವಾರು ಮುಖಂಡರುಗಳ ಸಲಹೆ ಪಡೆದು ಸ್ಯಾನಿಟೈಸರ್ ಆಗಲಿ, ಮಾಸ್ಕ್ ಮತ್ತು ಕೈ ಕವಚ ಉಪಯೋಗಿಸಿಕೊಂಡು ಕಟ್ಟು ನಿಟ್ಟಿನ ಕ್ರಮದೊಂದಿಗೆ ಸಾರ್ವಜನಿಕರಿಗೆ ದರ್ಶನದ ಅವಕಾಶ ಕೊಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.

ಬೇಕಾದರೆ ನಮ್ಮವಂಥವರನ್ನು ಬಳಸಿಕೊಂಡು ಹಾಸನಾಂಬೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಿ. ಧರ್ಮಸ್ಥಳ ಮತ್ತು ತಿರುಪತಿ ಇತರೆ ಯಾತ್ರಾ ಸ್ಥಳದಲ್ಲಿ ದೇವಾಲಯಕ್ಕೆ ಅವಕಾಶ ನೀಡಿರುವಾಗ, ಹಾಸನದಲ್ಲಿ ಇಂತಹ ಕಟ್ಟುನಿಟ್ಟಿನ ಕ್ರಮ ಅವಶ್ಯಕತೆ ಇತ್ತಾ. ಕೂಡಲೇ ಈ ಬಗ್ಗೆ ಗಮನವಹಿಸಿ ಹಾಸನಾಂಬೆ ದೇವಿ ದರ್ಶನ ಮಾಡಲು ಸಾರ್ವಜನಿಕರಿಗೆ ಅವಕಾಶ ಸಿಗುವಂತಾಗಲಿ ಎಂದು ಕೋರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.