ETV Bharat / state

ಸಕಲೇಶಪುರದಲ್ಲಿ ಆಗಂತುಕರಿಂದ ರೈಲ್ವೆ ಸಿಬ್ಬಂದಿಗೆ ಬೆದರಿಕೆ: ಕಾರ್ಯಾಚರಣೆಗೆ ಇಳಿದ ಪೊಲೀಸರು

ಸಕಲೇಶಪುರ ತಾಲೂಕಿನ ಕಡಗರವಳ್ಳಿ ಸಮೀಪ 55ನೇ ಮೈಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೈಲ್ವೆ ಇಲಾಖೆಯ ಇಬ್ಬರು ಸಿಬ್ಬಂದಿಗೆ ಆಗಂತುಕರಿಬ್ಬರು ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

author img

By

Published : Jul 17, 2019, 6:29 PM IST

ಆಗುಂತಕ ವ್ಯಕ್ತಿಗಳಿಬ್ಬರಿಂದ ರೈಲ್ವೆ ಸಿಬ್ಬಂದಿಗೆ ಬೆದರಿಕೆ

ಹಾಸನ: ಸಕಲೇಶಪುರದಲ್ಲಿ ಆಗಂತುಕ ವ್ಯಕ್ತಿಗಳಿಬ್ಬರು ರೈಲ್ವೆ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದ ಪ್ರಕರಣದ ಸುದ್ದಿಯನ್ನ ಇಂದು ಈಟಿವಿ ಭಾರತ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ಸಂಬಂಧಪಟ್ಟ ಇಲಾಖೆ ಇಂದು ಮಧ್ಯಾಹ್ನದಿಂದಲೇ ಆಗಂತುಕರ ಬೇಟೆಗೆ ಕಾರ್ಯಚರಣೆಗೆ ಇಳಿದಿದೆ.

ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಸಕಲೇಶಪುರ ತಾಲೂಕಿನ ಕಡಗರವಳ್ಳಿ ಸಮೀಪ 55ನೇ ಮೈಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೈಲ್ವೆ ಇಲಾಖೆಯ ಇಬ್ಬರು ಸಿಬ್ಬಂದಿಗೆ ಆಗಂತುಕರಿಬ್ಬರು ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಇಬ್ಬರು ರೈಲ್ವೆ ಇಲಾಖೆ ಸಿಬ್ಬಂದಿ ತಮ್ಮ ಮೇಲಿನ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ವರದಿ ನೀಡಿದ್ದರು. ಈ ಸಂಬಂಧ ಈಟಿವಿ ಭಾರತ ಇಂದು ಬೆಳಗ್ಗೆ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ಇದರಿಂದ ಜಾಗೃತಗೊಂಡ ರೈಲ್ವೆ ಪೊಲೀಸ್, ನಾಗರಿಕ ಪೊಲೀಸ್, ಅರಣ್ಯ ಇಲಾಖೆ ಮತ್ತು ಡಿ.ಸ್ವಾಟ್ ತಂಡಗಳು ಕಾರ್ಯಾಚರಣೆ ಮಾಡುತ್ತಿದ್ದು, ಆಗಂತುಕ ವ್ಯಕ್ತಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಆಗಂತುಕ ವ್ಯಕ್ತಿಗಳಿಗಾಗಿ ಪೊಲೀಸರಿಂದ ಕಾರ್ಯಾಚರಣೆ

ನಾಲ್ಕು ತಂಡಗಳಲ್ಲಿ ಒಟ್ಟು 30ರಿಂದ 35 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲು ಮಾರ್ಗದ ನಡುವಿನ 55ನೇ ಮೈಲಿಯಿಂದ ಪ್ರಾರಂಭವಾದ ಕಾರ್ಯಾಚರಣೆ ಶಿರವಾಗಲು, ಹೊಂಗಡಹಳ್ಳ, ಮಾರುತಿ ಪವರ್ ಜನ್, ಕಾಗಿನಹರೆ ಭಾಗಗಳಲ್ಲಿ ನಡೆಯುತ್ತಿದೆ. ಪೊಲೀಸರ ಮೂಲಗಳ ಪ್ರಕಾರ ಮಾಹಿತಿ ತಿಳಿದ ತಕ್ಷಣ ನಾವು ನಕ್ಸಲ್ ಚಟುವಟಿಕೆ ಇರಬಹುದೆಂಬ ಅನುಮಾನದಿಂದ ಕಾರ್ಯಾಚರಣೆ ಆರಂಭಿಸಿದ್ದೇವೆ. ಇದುವರೆಗೆ ನಮಗೆ ನಕ್ಸಲ್ ಚಟುವಟಿಕೆಗೆ ಸಂಬಂಧಪಟ್ಟಂತೆ ಯಾವುದೇ ಕರಪತ್ರವಾಗಲಿ ಅಥವಾ ನಕ್ಸಲ್ ಚಟುವಟಿಕೆಯ ಸಾಮಗ್ರಿಯಾಗಲೀ ಸಿಕ್ಕಿಲ್ಲ ಎಂದಿದ್ದಾರೆ.

2012ರಿಂದ ಇಲ್ಲಿವರೆಗೆ ಯಾವುದೇ ನಕ್ಸಲ್ ಚಟುವಟಿಕೆ ಈ ಭಾಗದಲ್ಲಿ ಕಾಣಸಿಗುವುದಿಲ್ಲ. ಹೀಗಾಗಿ ಬಹುಶಃ ಇದು ದರೋಡೆಕೋರರ ಕೃತ್ಯವಿರಬಹುದು ಎಂಬುದನ್ನು ತನಿಖೆ ಮಾಡುತ್ತಿದ್ದೇವೆ. ಇನ್ನು ಸಕಲೇಶಪುರ ಭಾಗದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಗೆ ಬಂದಿರುವ ಬೇರೆ ರಾಜ್ಯದ ವ್ಯಕ್ತಿಗಳ ಫೋಟೋಗಳನ್ನು ಕೂಡ ಕಲೆಹಾಕುತ್ತಿದ್ದು, ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

Intro:

EXCLUSIVE VIDEO ONLY ON ETV BHARAT

ಹಾಸನದ ಸಕಲೇಶಪುರದಲ್ಲಿ ಆಗುಂತಕ ವ್ಯಕ್ತಿಗಳಿಬ್ಬರು ರೈಲ್ವೆ ಸಿಬ್ಬಂದಿಗಳಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದ ಪ್ರಕರಣದ ಸುದ್ದಿಯನ್ನ ಈಟಿವಿ ನ್ಯೂಸ್ ಇಂದು ವಿಸ್ತೃತ ವರದಿಯನ್ನ ಮಾಡಿತ್ತು. ವರದಿಗೆ ಸ್ಪಂದಿಸಿದ ಸಂಬಂಧಪಟ್ಟ ಇಲಾಖೆ ಇಂದು ಮಧ್ಯಾಹ್ನದಿಂದಲೇ ಆಗುಂತರ ಬೇಟೆಗೆ ಕಾರ್ಯಚರಣೆಗೆ ಇಳಿದಿದೆ.

ಹೌದು ನೆನ್ನೆ ರಾತ್ರಿ 7 ಗಂಟೆಯ ಸುಮಾರಿಗೆ ಸಕಲೇಶಪುರ ತಾಲೂಕಿನ ಕಡಗರವಳ್ಳಿ ಸಮೀಪ 55ನೇ ಮೈಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ರೈಲ್ವೆ ಇಲಾಖೆಯ ಸಿಬ್ಬಂದಿಗಳಿಗೆ ಆಗುಂತಕರಿಬ್ಬರು ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು.

ಈ ಸಂಬಂಧ ಇಬ್ಬರು ರೈಲ್ವೆ ಇಲಾಖೆ ಸಿಬ್ಬಂದಿಗಳು ತಮ್ಮ ಮೇಲೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ವರದಿ ನೀಡಿದ್ದರು. ಈ ಸಂಬಂಧ ಈಟಿವಿ ನ್ಯೂಸ್ ಇಂದು ಬೆಳಗ್ಗೆ ವಿಸ್ತೃತ ವರದಿಯನ್ನು ಪ್ರಸಾರ ಮಾಡಿದ್ದು ಪ್ರಸಾರದ ಹಿನ್ನೆಲೆಯಲ್ಲಿ ಜಾಗೃತಗೊಂಡ ರೈಲ್ವೆ ಪೊಲೀಸ್, ನಾಗರೀಕ ಪೊಲೀಸ್, ಅರಣ್ಯ ಇಲಾಖೆ ಮತ್ತು ಗಣ್ಯ ವ್ಯಕ್ತಿಗಳಿಗೆ ಭದ್ರತೆ ನೀಡುವ ಡಿ.ಸ್ವಾಟ್ ತಂಡಗಳ ಮೂಲಕ ಕಾರ್ಯಚರಣೆ ಮಾಡುತ್ತಿದ್ದು, ಆ ಆಗುಂತಕ ವ್ಯಕ್ತಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಇನ್ನು ನಾಲ್ಕು ತಂಡಗಳಲ್ಲಿ ಒಟ್ಟು 30ರಿಂದ 35 ಮಂದಿ ಕಾರ್ಯನಿರ್ವಹಿಸುತ್ತಿದ್ದು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲು ಮಾರ್ಗದ ನಡುವಿನ 55ನೇ ಮೈಲಿಯಿಂದ ಪ್ರಾರಂಭವಾದ ಕಾರ್ಯಾಚರಣೆ ಶಿರವಾಗಲು, ಹೊಂಗಡಹಳ್ಳ, ಮಾರುತಿ ಪವರ್ ಜನ್, ಕಾಗಿನಹರೆ ಭಾಗಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇನ್ನು ಪೊಲೀಸರ ಮೂಲಗಳ ಪ್ರಕಾರ ಮಾಹಿತಿ ತಿಳಿದ ತಕ್ಷಣ ನಾವು ನಕ್ಸಲ್ ಚಟುವಟಿಕೆ ಇರಬಹುದೆಂಬ ಅಭಿಮಾನದಿಂದ ಕಾರ್ಯಾಚರಣೆ ಆರಂಭಿಸಿದ್ದು, ಇದುವರೆಗೆ ನಮಗೆ ಅಂತಹ ನಕ್ಸಲ್ ಚಟುವಟಿಕೆ ಸಂಬಂಧಪಟ್ಟಂತೆ ಯಾವುದೇ ಕರಪತ್ರವಾಗಲಿ ಅಥವಾ ನಕ್ಸಲ್ ಚಟುವಟಿಕೆಯ ಸಾಮಗ್ರಿಯಾಗಲೀ ಸಿಕ್ಕಿಲ್ಲ. 2012 ರಿಂದ ಇಲ್ಲಿವರೆಗೆ ಯಾವುದೇ ನಕ್ಸಲ್ ಚಟುವಟಿಕೆ ಈ ಭಾಗದಲ್ಲಿ ಕಾಣಸಿಗುವುದಿಲ್ಲ. ಹೀಗಾಗಿ ಬಹುಶಃ ಇದು ದರೋಡೆಕೋರರ ಕೃತ್ಯವಿರಬಹುದು ಎಂಬುದನ್ನು ತನಿಖೆ ಮಾಡುತ್ತಿದ್ದೇವೆ ಇನ್ನು ಸಕಲೇಶಪುರ ಭಾಗದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಗೆ ಬಂದಿರುವ ಬೇರೆ ರಾಜ್ಯದ ವ್ಯಕ್ತಿಗಳ ಫೋಟೋಗಳನ್ನು ಕೂಡ ಹಾಕುತ್ತಿದ್ದು ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ.

ಒಟ್ಟಾರೆ ಈಟಿವಿ ನ್ಯೂಸ್ ವರದಿಯಿಂದ ಎಚ್ಚೆತ್ತ ಪೊಲೀಸರು ಇಲಾಖೆಯ ಜೊತೆಗೂಡಿ ಕಾರ್ಯ ಮಾಡುತ್ತಿದ್ದು ನಿಜಕ್ಕೂ ಅವರ ಕಾರ್ಯಕ್ಕೆ ನಮ್ಮ ಕಡೆಯಿಂದ ಕೃತಜ್ಞತೆ ಹೇಳಲೇಬೇಕು.

ಸುನಿಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.Body:0Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.