ETV Bharat / state

ಹಿಮ್ಸ್ ಆಸ್ಪತ್ರೆ ಎದುರು ಕೆಲಸ ವಂಚಿತರ ಪ್ರತಿಭಟನೆ

ಕೆಲಸ ವಂಚಿತರಾಗಿರುವ ನೌಕರರು ಹಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಕೊಡುವಂತೆ 5 ನೇ ದಿನವು ಮೆಡಿಕಲ್ ಕಾಲೇಜು ಮುಂದೆ ಧರಣಿ ಮುಂದುವರೆಸಿದ್ದಾರೆ.

ಹಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಕೊಡುವಂತೆ ಪ್ರತಿಭಟನೆ, Protest for a job at Hims Hospital in Hassan
ಹಿಮ್ಸ್ ಆಸ್ಪತ್ರೆ ಎದುರು ಕೆಲಸ ವಂಚಿತರ ಪ್ರತಿಭಟನೆ
author img

By

Published : Feb 7, 2020, 7:26 PM IST

ಹಾಸನ: ಕೆಲಸ ವಂಚಿತರಾಗಿರುವ ನೌಕರರು ಹಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಕೊಡುವಂತೆ 5 ನೇ ದಿನವು ಮೆಡಿಕಲ್ ಕಾಲೇಜು ಮುಂದೆ ಧರಣಿ ಮುಂದುವರೆಸಿದ್ದಾರೆ.

2006-10 ರ ವರೆಗೂ ಹಿಮ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮನ್ನು ಹಿಮ್ಸ್ ಅಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ್ದಾರೆ. ನಂತರದಲ್ಲಿ ಅನೇಕ ವರ್ಷ ವೇತನವಿಲ್ಲದೇ ಹಿಮ್ಸ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಉಚ್ಛ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಬಳಿಕ ನಮ್ಮ ಕೆಲಸವನ್ನು ಅಲ್ಲಿಯೇ ಮುಂದುವರೆಸಲು ಆದೇಶ ನೀಡಲಾಯಿತು ಎಂದರು.

ಹಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ

ಆದೇಶದ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಹಿಮ್ಸ್ ಅಧಿಕಾರಿಗಳು 307 ಜನ ಅಕ್ರಮ ನೇಮಕಾತಿಯ ವ್ಯಾಜ್ಯ ಕೋರ್ಟ್‌ನಲ್ಲಿ ಬಗೆಹರಿದ ನಂತರ ನಿಮಗೆ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದರು. ನ್ಯಾಯಾಲಯದಲ್ಲಿ ವಿವಾದ ಬಗೆಹರಿದು ಆದೇಶವಿದ್ದರೂ ಹಿಮ್ಸ್ ಅಧಿಕಾರಿಗಳು ಮಾತ್ರ ಕೆಲಸ ಕೊಡದೆ ಅನ್ಯಾಯ ಮಾಡಿರುತ್ತಾರೆ ಎಂದು ದೂರಿದರು.

ಹಿಮ್ಸ್ ನಿರ್ದೇಶಕ ಬಿ.ಸಿ. ರವಿಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, 2010 ರಲ್ಲಿ ಹಿಮ್ಸ್ ಗೆ ನೇಮಕಾತಿ ಪ್ರಕ್ರಿಯೆ ನಡೆದಿದ್ದು, 307 ಜನರನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ಅಲ್ಲಿವರೆಗೂ ಗುತ್ತಿಗೆ ಆಧಾರದ ಮೇಲೆ ಸುಮಾರು 125 ಜನ ಕೆಲಸ ನಿರ್ವಹಿಸುತ್ತಿದ್ದರು. ಇವರಲ್ಲಿ 96 ಜನರನ್ನು 307 ಜನ ಒಳಗೆ ನೇಮಕಾತಿ ಮಾಡಿಕೊಳ್ಳಲಾಯಿತು ಎಂದರು.

ಇವರಲ್ಲಿ 29 ಜನರು ಕಾರಣಾಂತರದಲ್ಲಿ ಕೆಲಸದಿಂದ ಹೊರ ಉಳಿಯಬೇಕಾಯಿತು. ಇವರಲ್ಲಿ 7-8 ಜನರು ಈಗ ನಮಗೆ ನೇಮಕಾತಿ ಕೊಡಿ ಎಂದು ಒತ್ತಾಯಿಸಿ ಧರಣಿ ಮಾಡುತ್ತಿದ್ದಾರೆ. ಆದರೆ ಅವರನ್ನು ನೇಮಕಾತಿ ಮಾಡುವ ಅಧಿಕಾರವಾಗಲಿ, ಅವಕಾಶವಾಗಲಿ ಸಂಸ್ಥೆಗೆ ಇರುವುದಿಲ್ಲ. ಕೆಲಸದಲ್ಲಿ ಮುಂದುವರೆಸುವಂತೆ ಹಿಂದೆಯೂ ನಮಗೆ 2-3 ಸಾರಿ ಮನವಿ ಕೊಟ್ಟಿದ್ದರಿಂದ ಸರ್ಕಾರಕ್ಕೆ ತಿಳಿಸಲಾಗಿತ್ತು. ಮಾನವೀಯತೆ ಆಧಾರದಲ್ಲಿ ನೇಮಕಾತಿ ಕೇಳುತ್ತಿದ್ದು, ಈ ಬಗ್ಗೆ ಸಕರಾತ್ಮಕವಾಗಿ ಪರಿಗಣಿಸಬಹುದು ಎಂಬ ವಿಶ್ವಾಸದಲ್ಲಿದ್ದೇವೆ. ಇದುವರೆಗೂ ಯಾವ ನಿರ್ದೇಶನ ಬಂದಿರುವುದಿಲ್ಲ. ನ್ಯಾಯಾಲಯದ ಮತ್ತು ಸರ್ಕಾರದ ಆದೇಶ ಬಂದಿದ್ದರೂ ಸಂಸ್ಥೆ ಅಧಿಕಾರಿಗಳು ಯಾವುದೇ ನೇಮಕಾತಿ ಕೊಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರ. ಇದುವರೆಗೂ ಸರ್ಕಾರದಿಂದ ಮತ್ತು ನ್ಯಾಯಾಲಯದಿಂದ ನೇಮಕಾತಿ ಮತ್ತೆ ಕೊಡುವಂತೆ ಯಾವ ಆದೇಶ ಬಂದಿರುವುದಿಲ್ಲ ಎಂದು ಹಿಮ್ಸ್ ನಿದೇಶಕರು ಸ್ಪಷ್ಟಪಡಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.