ಭಾರತೀಯ ಚಿತ್ರರಂಗದಲ್ಲಿ ಮೂಡಿಬಂದಿರುವ ಪ್ರೀಕ್ವೆಲ್ ಕಥೆಗಳು ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿವೆ. ಇಂಥದ್ದೊಂದು ಪ್ರಯತ್ನವೀಗ ಭೈರತಿ ರಣಗಲ್ ಸಿನಿಮಾದಿಂದ ಆಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆದಿದೆ. ಟ್ರೇಲರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಿದ್ದ ಸೆಂಚುರಿ ಸ್ಟಾರ್ ಅಭಿನಯದ 'ಭೈರತಿ ರಣಗಲ್' ಚಿತ್ರವಿಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮೂಲಕ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಮಫ್ತಿ ಸಿನಿಮಾದ ಪ್ರೀಕ್ವೆಲ್ ಆದ ಹಿನ್ನೆಲೆ ಬಿಡುಗಡೆಗೂ ಮುನ್ನವೇ ಭೈರತಿ ರಣಗಲ್ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿತ್ತು. ಅದರಂತೆ, ನಿರ್ದೇಶಕ ನರ್ತನ್ ಅಭಿಮಾನಿಗಳ ನಿರೀಕ್ಷೆಗಳಿಗೆ ನಿರಾಸೆ ಮಾಡದಂತೆ ಭೈರತಿ ರಣಗಲ್ ಸಿನಿಮಾನ್ನು ಅದ್ಭುತವಾದ ಸ್ಕ್ರೀನ್ ಪ್ಲೇ ಜೊತೆಗೆ ಅಷ್ಟೇ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಗಳು ಮೆಚ್ಚಿ ಶಿವಣ್ಣನನ್ನು ಕೊಂಡಾಡುತ್ತಿದ್ದಾರೆ.
ವಿನಯ್ ರಾಜ್ಕುಮಾರ್ ಹಾಗೂ ಯುವ ರಾಜ್ಕುಮಾರ್ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿ ಸಖತ್ ಥ್ರಿಲ್ ಆದರು. ನರ್ತಕಿ ಥಿಯೇಟರ್ನಲ್ಲಿ ಮಾರ್ನಿಂಗ್ ಸ್ಪೆಷಲ್ ಶೋಗೆ ನಿರ್ಮಾಪಕಿ ಗೀತಾ ಮತ್ತು ಪುತ್ರಿ ನಿವೇದಿತಾ ಹಾಜರಾಗಿದ್ದರು. ಉಳಿದಂತೆ, ಡಾಲಿ ಧನಂಜಯ್, ನಾಗಭೂಷಣ್, ವಿಕ್ಕಿ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಮಿಂಚಿಂಗ್: ಮಫ್ತಿ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಬ್ಲ್ಯಾಕ್ ಪಂಚೆ ಹಾಗೂ ಬ್ಲ್ಯಾಕ್ ಶರ್ಟ್ ತೊಟ್ಟು ಭೈರತಿ ರಣಗಲ್ ಪಾತ್ರದಿಂದ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅದೇ ಹೆಸರಿನಲ್ಲಿ ಬಂದ ಈ ಚಿತ್ರದಲ್ಲಿ ಭೈರತಿ ರಣಗಲ್ ಯಾರು? ಯಾವ ಕಾರಣಕ್ಕೆ ಸರ್ಕಾರಿ ಕಚೇರಿಗೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡ್ತಾರೆ? ಶಿವರಾಜ್ಕುಮಾರ್ ಭೈರತಿ ರಣಗಲ್ ಆಗಿದ್ದು ಹೇಗೆ? ಅನ್ನೋದನ್ನು ನಿರ್ದೇಶಕ ನರ್ತನ್ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಸೆಂಚುರಿ ಸ್ಟಾರ್ ಒನ್ ಮ್ಯಾನ್ ಹೀರೋ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ವಿಜೃಂಭಿಸಿದ್ದಾರೆ. ಕಣ್ಣಲ್ಲೇ ಅಭಿನಯಿಸಿರುವ ರೀತಿಗೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಕಳೆದುಹೋಗ್ತಾರೆ. ಹ್ಯಾಟ್ರಿಕ್ ಹೀರೋನ ಎಂಟ್ರಿ ಸೀನ್ನಿಂದ ಹಿಡಿದು ಕ್ಲೈಮಾಕ್ಸ್ ಆಕ್ಷನ್ಸ್ವರೆಗೂ ಒನ್ ಮ್ಯಾನ್ ಶೋ. ಬಾಲಿವುಡ್ ನಟ ರಾಹುಲ್ ಬೋಸ್ ಸ್ಟೀಲ್ ಇಂಡಸ್ಟ್ರಿಯ ನಂಬರ್ ಓನ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದು, ಭೈರತಿ ರಣಗಲ್ಗೆ ಟಕ್ಕರ್ ಕೊಡುವ ಖಳನಟನಾಗಿ ಇಷ್ಟ ಆಗ್ತಾರೆ.
ಡಾಕ್ಟರ್ ಪಾತ್ರದಲ್ಲಿ ಇಷ್ಟ ಆಗ್ತಾರೆ ರುಕ್ಮಿಣಿ ವಸಂತ್ : ಬಘೀರ ಚಿತ್ರದ ಬಳಿಕ ಶಿವರಾಜ್ಕುಮಾರ್ ಜೋಡಿಯಾಗಿ ಅಭಿನಯಿಸಿರುವ ರುಕ್ಮಿಣಿ ವಸಂತ್ ಡಾಕ್ಟರ್ ಪಾತ್ರದಲ್ಲಿ ಇಷ್ಟ ಆಗ್ತಾರೆ. ಶಿವಣ್ಣನ ತಂಗಿಯಾಗಿ ಛಾಯಾಸಿಂಗ್ ಅವರ ಪಾತ್ರಕ್ಕೆ ಸ್ಕೋಪ್ ಇದೆ. ಹೊಸ ಲುಕ್ನಲ್ಲಿ ಖಳ ನಟನಾಗಿ ಅವಿನಾಶ್ ಗಮನ ಸೆಳೆಯುತ್ತಾರೆ. ಉಳಿದಂತೆ ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಸಿನಿಮಾ ನೋಡುವ ಪ್ರೇಕ್ಷಕನ ಮನದಲ್ಲಿ ಉಳಿಯುವ ಹಾಗೇ ಅಭಿನಯಿಸಿದ್ದಾರೆ.
ಇದನ್ನೂ ಓದಿ: ''ಅಹಂಕಾರಿ, ಕಳಪೆ ಮೋಕ್ಷಿತಾ'': ದನಿ ಎತ್ತಿದ ಧನರಾಜ್; ಬಿಗ್ ಬಾಸ್ ಸ್ಪರ್ಧಿಗಳಿಗೆ ಆಶ್ಚರ್ಯ
ರೋಣಾಪುರ ಎಂಬ ಜನರಿಗೋಸ್ಕರ ಬದಕುವ ಭೈರತಿ ರಣಗಲ್ ಒಬ್ಬ ಗ್ಯಾಂಗ್ಸ್ಟರ್ ಮಾತ್ರವಲ್ಲ, ಬಡವರು ಹಾಗೂ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಕಾವಲುಗಾರ ಕೂಡ. ಹೀಗಾಗಿ ಭೈರತಿ ರಣಗಲ್ ಮಾಸ್ ಜೊತೆಗೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಕೂಡಾ ಹೌದು. ಅದಕ್ಕೆ ತಕ್ಕನಾಗಿ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕೆಜಿಎಫ್ ಸ್ಟೈಲ್ ಸಂಗೀತದಿಂದ ಹೊರಬಂದು ಭೈರತಿ ರಣಗಲ್ ಚಿತ್ರದ ಕಥೆಗೆ ತಕ್ಕಂತೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.
ಶಿವರಾಜ್ಕುಮಾರ್ ನಟನೆ ಬಳಿಕ ಹೆಚ್ಚು ಸ್ಕೋರ್ ಮಾಡೋದು ಕ್ಯಾಮರಾ ಮ್ಯಾನ್ ನವೀನ್ ಕುಮಾರ್ ಅವರ ಕ್ಯಾಮರಾ ವರ್ಕ್. ಒಂದೊಂದು ಫ್ರೇಮ್ಗಳನ್ನು ಸಹ ಅಚ್ಚುಕಟ್ಟಾಗಿ ಚಿತ್ರೀಕರಣ ಮಾಡಿದ್ದಾರೆ ಅನ್ನೋದಕ್ಕೆ ಇಂಟರ್ವೆಲ್ ನಲ್ಲಿ ಬರುವ ಸಿಕ್ವೇನ್ಸ್ ಉದಾಹರಣೆ. ಇದರ ಜೊತೆಗೆ ಕಲಾ ನಿರ್ದೇಶಕ ಗುಣ ಕಲಾ ನಿರ್ದೇಶನ ಕೂಡಾ ಚೆನ್ನಾಗಿದೆ. ಫೈನಲಿ ಈ ಚಿತ್ರದಲ್ಲಿ ದಿಲೀಪ್ ಸುಬ್ರಹ್ಮಣ್ಯ ಹಾಗೂ ಚೇತನ್ ಡಿಸೋಜಾ ಮಾಡಿರೋ ಆ್ಯಕ್ಷನ್ ಸೀಕ್ವೆನ್ಸ್ ಸಿನಿಮಾ ನೋಡುವ ಪ್ರೇಕ್ಷಕರ ಮೈಜುಂ ಎನಿಸುವಂತೆ ಮಾಡುತ್ತದೆ.
ಇದನ್ನೂ ಓದಿ: ಭೈರತಿ ರಣಗಲ್: ಡಾಲಿ ಧನಂಜಯ್ ಭರ್ಜರಿ ಡ್ಯಾನ್ಸ್; ಹೇಗಿದೆ ಸಿನಿಮಾ?
ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿರೋದು ಸ್ಕ್ರೀನ್ ಮೇಲೆ ಕಾಣು ಸಿಗುತ್ತದೆ. ನಿರ್ದೇಶಕ ನರ್ತನ್ ಸ್ಕ್ರೀನ್ ಪ್ಲೇ ಹಾಗೂ ನಿರ್ದೇಶನ ಶೈಲಿಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಒಟ್ಟಾರೆ ಭೈರತಿ ರಣಗಲ್ ಮಾಸ್ ಅಲ್ಲದೇ ಫ್ಯಾಮಿಲಿ ಎಂಟರ್ಟೈನ್ ಸಿನಿಮಾ ಅನ್ನೋದು ನೋಡಿದವರ ಅಭಿಪ್ರಾಯ.