ETV Bharat / state

ರಸ್ತೆ ಕಾಮಗಾರಿ ಅವ್ಯವಹಾರ, ಅಧಿಕಾರಿಗಳ ವಿರುದ್ಧ ಆರೋಪ: ಕರವೇ ಪ್ರತಿಭಟನೆ

ತುಂಡು ಗುತ್ತಿಗೆ ಮೂಲಕ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಅಧಿಕಾರಿಗಳು ಕಾನೂನು ಬಾಹಿರ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದ್ರು.

ಪ್ರತಿಭಟನೆ
author img

By

Published : Sep 22, 2019, 3:48 PM IST

ಹಾಸನ : ಅರಸೀಕೆರೆ ತಾಲೂಕಿನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗಿದೆ.

ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ: ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

ಅರಸೀಕೆರೆ ಸಾಯಿನಾಥ ರಸ್ತೆಗೆ ಕಳಪೆ ಹಾಗೂ ಅವೈಜ್ಞಾನಿಕವಾಗಿ ರಾತ್ರೋರಾತ್ರಿ ತ್ವರಿತಗತಿಯಲ್ಲಿ ಕಾಂಕ್ರೀಟ್ ಕಾಮಗಾರಿ ಮಾಡಲಾಗುತ್ತಿದೆ. ಈ ರಸ್ತೆ ಮೂಲಕ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ಹೊಸದಾಗಿ ಒಳಚರಂಡಿ ಪೈಪು​ಗಳನ್ನು ರಸ್ತೆ ಮಧ್ಯೆ ಅಳವಡಿಸಲಾಗಿದ್ದು, ರಸ್ತೆಯ ಇಕ್ಕೆಲೆಗಳಲ್ಲಿ ಮನೆಗಳಿಗೆ ಹೊಸ ಸಂಪರ್ಕ ಕಲ್ಪಿಸಿಲ್ಲ. ಇದು ಅವೈಜ್ಞಾನಿಕ ಕಾಮಗಾರಿ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರ ರಕ್ಷಣೆಯಲ್ಲಿ ಭೂಸೇನಾ ನಿಗಮದ ಅಧಿಕಾರಿಗಳಿಗೆ ಹೆದರಿಸಿ ಇಲ್ಲಿನ ಶಾಸಕರು ಹಾಗೂ ಬಿಜೆಪಿ ನಗರಸಭಾ ಅಧ್ಯಕ್ಷ ಶಾಮೀಲಾಗಿ ರಾತ್ರೋರಾತ್ರಿ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿ ಮುಗಿಸಿದ್ದಾರೆ. ಗುತ್ತಿಗೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಯಾವುದೇ ಕ್ರಿಯಾ ಯೋಜನೆ ತಯಾರಿಸದೇ ಕಾನೂನುಬಾಹಿರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಕರವೇ ಕಾರ್ಯಕರ್ತರು ಮನವಿ ಮಾಡಿದ್ರು.

Intro:ಹಾಸನ : ಅರಸೀಕೆರೆ ತಾಲೂಕು ತುಂಡು ಗುತ್ತಿಗೆ ಹೆಸರಿನ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕೂಡಲೇ ಶಿಸ್ತುಕ್ರಮ ಜರುಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರು.

ಅರಸೀಕೆರೆ ಸಾಯಿನಾಥ ರಸ್ತೆಗೆ ಯಾವುದೇ ದಾಖಲೆಗಳು ಇಲ್ಲದೆ ಕಳಪೆ ಹಾಗೂ ಅವೈಜ್ಞಾನಿಕವಾಗಿ ರಾತ್ರೋರಾತ್ರಿ ತ್ವರಿತಗತಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಈ ಬಗ್ಗೆ ಭೂಸೇನಾ ನಿಗಮದ ಅಧಿಕಾರಿಗಳ ಬಳಿ ಯಾವ ದಾಖಲೆಗಳು ಇರಲಿಲ್ಲವಾದ್ದರಿಂದ ಅವರೇ ಕೆಲಸವನ್ನು ನಿಲ್ಲಿಸಿದ್ದರು ಎಂದರು.

ಸಾಯಿನಾಥರ ಪ್ರಮುಖವಾಗಿದ್ದು, ಇಲ್ಲಿ ಪ್ರತಿನಿತ್ಯ ನಾಗರಿಕರು ಸಾವಿರಾರು ವಾಹನಗಳು ಓಡಾಡುವ ಸ್ಥಳವಾಗಿದೆ. ಹೊಸದಾಗಿ ಒಳಚರಂಡಿ, ಪೈಪ್ ಗಳನ್ನು ರಸ್ತೆಯ ಮಧ್ಯೆ ಅಳವಡಿಸಲಾಗಿದ್ದು, ರಸ್ತೆಯ ಎರಡೂ ಬದಿ ಮನೆಗಳಿಗೆ ಹೊಸ ಸಂಪರ್ಕ ಕಲ್ಪಿಸಿರುವುದಿಲ್ಲ. ಯಾವುದನ್ನು ಸರಿಪಡಿಸದೆ ಇಲ್ಲಿನ ಅಧಿಕಾರಿಗಳು ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಾರಂಭ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.

ರಸ್ತೆ ಎರಡೂ ಬದಿ ಚರಂಡಿ ನಿರ್ಮಿಸುವುದಿಲ್ಲ, ಮಳೆ ಬಂದರೆ ನೀರು ರಸ್ತೆಯಲ್ಲಿಯೇ ಹರಿಯುವುದರಿಂದ ರಸ್ತೆಯ ಹಾಳಾಗಿ ಹೋಗುತ್ತದೆ. ಸುಮಾರು 45 ವರ್ಷಗಳ ಹಿಂದಿನ ಕಾಂಕ್ರೀಟ್ ರಸ್ತೆಯನ್ನು ಹೇಳದೆ ಅದರ ಮೇಲೆ ಮತ್ತೆ ಹೊಸ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುತ್ತಿರುವುದಾಗಿ ಆರೋಪಿಸಿದ ಅವರು ಇದರಿಂದ ರಸ್ತೆ ಗುಂಡಿ ಬಿದ್ದು ಸಾರ್ವಜನಿಕರಿಗೆ ತೊಂದರೆಯಾಗಿದೆ. ಸರ್ಕಾರದ ಕೋಟ್ಯಾಂತರ ರೂಗಳನ್ನು ನಷ್ಟ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಅರಸೀಕೆರೆ ನಗರಸಭಾ ಹಾಗೂ ಭೂಸೇನಾ ನಿಗಮದ ಅಧಿಕಾರಿಗಳೇ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದು, ನಾವು ತಕ್ಷಣ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಿರುವುದಾಗಿ ಹೇಳಿದರು. ಕೇವಲ 80 ಮೀಟರ್‌ಗೆ ಮಾತ್ರ ಕ್ರಿಯಾಯೋಜನೆ ಪ್ರತಿಯನ್ನು ನಮಗೆ ನೀಡಿದ್ದು ಉಳಿದ ಕೆಲಸದ ಬಗ್ಗೆ ವಿಚಾರಿಸಿದರೆ ದಾಖಲೆಯಲ್ಲಿ ಇರುವುದಿಲ್ಲ ಎಂದಿದ್ದಾರೆ.

ಸ್ಥಳಕ್ಕೆ ಬಂದ ಶಾಸಕರು ಹಾಗೂ ಬಿಜೆಪಿ ನಗರಸಭಾ ಅಧ್ಯಕ್ಷ ಶಾಮೀಲಾಗಿ ರಾತ್ರೋರಾತ್ರಿ ಕಳಪೆ ಹಾಗೂ ವೈಜ್ಞಾನಿಕವಾಗಿ ಪೊಲೀಸರ ರಕ್ಷಣೆಯಲ್ಲಿ ಭೂಸೇನಾ ನಿಗಮದ ಅಧಿಕಾರಿಗಳಿಗೆ ಹೆದರಿಸಿ ಕೆಲಸ ಮುಗಿಸಿದ್ದಾರೆ. ಗುತ್ತಿಗೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಯಾವ ಕ್ರಿಯಾಯೋಜನೆ ತಯಾರಿಸದೇ ಕಾನೂನುಬಾಹಿರವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ‌ ಮನವಿ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಅರಸೀಕೆರೆ ತಾಲೂಕು ಘಟಕದ ಅಧ್ಯಕ್ಷ ಹೇಮಂತ್ ಕುಮಾರ್, ನಗರ ಘಟಕದ ಅಧ್ಯಕ್ಷ ಕಿರಣ್ ಕುಮಾರ್, ಕಾರ್ಯದರ್ಶಿ ರವಿಶಂಕರ್ ಸಂಚಾಲಕ ಉದಯ್‌ಶಂಕರ್, ಯತೀಶ್ ಮತ್ತಿತರರು ಹಾಜರಿದ್ದರು.

ಬೈಟ್ 1 : ಹೇಮಂತ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಅರಸೀಕೆರೆ ತಾಲೂಕು ಘಟಕದ ಅಧ್ಯಕ್ಷ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.