ETV Bharat / state

ಅವರಪ್ಪ ದುಡ್ಡು ಮಾಡಿದ್ದಕ್ಕೆ ಮಗ ಇಲ್ಲಿ ಎಗ್ರಾಡ್ತಿದ್ದಾನೆ: ಶಾಸಕ ಪ್ರೀತಂ ಗೌಡ ವಿರುದ್ಧ ಪ್ರಜ್ವಲ್ ರೇವಣ್ಣ ಕಿಡಿ - ಈಟಿವಿ ಭಾರತ ಕನ್ನಡ

ನಾನು ಜನ ಹಾಕಿರುವ ವೋಟಿನಿಂದ ಗೆದ್ದಿರುವೆ. ಶಾಸಕ ಪ್ರೀತಂ ವೋಟಿಂದ ಅಲ್ಲ. ಮೊದಲು ಅವರು ಗೆಲ್ಲುವುದನ್ನು ನೋಡಿಕೊಳ್ಳಲಿ. ಆಮೇಲೆ ಲೋಕಸಭೆ ಚುನಾವಣೆಗೆ ಬರಲಿ ಎಂದು ಸಂಸದ ಪ್ರಜ್ವಲ್​ ರೇವಣ್ಣ ಶಾಸಕ ಪ್ರೀತಂ ಗೌಡ ವಿರುದ್ಧ ಹರಿಹಾಯ್ದಿದ್ದಾರೆ.

Prajwal war to
ಪ್ರಜ್ವಲ್​ ರೇವಣ್ಣ
author img

By

Published : Sep 28, 2022, 8:25 AM IST

ಹಾಸನ/ಅರಸೀಕೆರೆ: ಅವರಪ್ಪಂಗೆ ಬಿಬಿಎಂಪಿ ತೋರಿಸಿದ್ದು ನಮ್ಮಪ್ಪ. ಬಿಬಿಎಂಪಿಯಲ್ಲಿ ಅವರಪ್ಪ ದುಡ್ಡು ಮಾಡಿದ್ರು. ಆ ದುಡ್ಡು ತಗೊಂಡು ಬಂದು ಇವನಿಲ್ಲಿ ಎಗರಾಡುತ್ತಿದ್ದಾನೆ ಎಂದು ಮತ್ತೆ ಏಕವಚನದಲ್ಲಿ ಶಾಸಕ ಪ್ರೀತಂ ಗೌಡ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಹರಿಹಾಯ್ದಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿನ ಗಣಪತಿ ಆಸ್ಥಾನ ಮಂಟಪದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಜನ ಹಾಕಿರುವ ವೋಟಿನಿಂದ ಗೆದ್ದಿರುವೆ, ಪ್ರೀತಂ ಗೌಡ ವೋಟಿಂದ ಅಲ್ಲ. ಮೊದಲು ಅವರು ಗೆಲ್ಲುವುದನ್ನು ನೋಡಿಕೊಳ್ಳಲಿ. ಆಮೇಲೆ ಎಂಪಿ ಚುನಾವಣೆಗೆ ಬರಲಿ. ಮೊದಲು ವಿಧಾನಸಭಾ ಚುನಾವಣೆ ಬರುತ್ತೆ ಅಲ್ಲಿ ಅವರು ಸೋಲುವುದಂತು ಖಚಿತ. ಸೋತ ಬಳಿಕ ನನ್ನ ವಿರುದ್ಧವೇ ಎಂಪಿ ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.

ಚುನಾವಣೆಯಲ್ಲಿ ಗೆಲುವು ಸಾಧಿಸಿ ನಾವು ಹಾಸನದಲ್ಲೇ ಇರ್ತೀವಿ. ಅವರು ಈ ಬಾರಿ ದುಡ್ಡು ಮಾಡಿಕೊಂಡು ಬೆಂಗಳೂರಿಗೆ ವಾಪಸ್ ಹೋಗಬಹುದು. ಜಿಲ್ಲೆಯಲ್ಲಿ ಎಲ್ಲರೂ ದೇವೇಗೌಡರ ಹೆಸರನ್ನು ಹೇಳಿಕೊಂಡೇ ರಾಜಕಾರಣ ಮಾಡಿರೋದು. ಹಳ್ಳಿ ಮೈಸೂರಿನಲ್ಲಿ ಶಾಸಕ ಪ್ರೀತಂ ಗೌಡ ಅವರಪ್ಪ ಯಾವುದೋ ಇಂಜಿನೀಯರ್ ಆಗಿದ್ರು. ಅವತ್ತಿನ ದಿನ ರೇವಣ್ಣನವರ ಕೈಕಾಲು ಹಿಡಿದಿದ್ದಕ್ಕೆ ಅವರ ತಂದೆಗೆ ಬಿಬಿಎಂಪಿಯನ್ನು ತೋರಿಸಿಕೊಟ್ರು ನಮ್ಮಪ್ಪ. ಅವರ ಕುಟುಂಬಕ್ಕೆ ನಮ್ಮ ಕುಟುಂಬದಿಂದ ಸಹಕಾರ ಆಗಿದೆ. ಅದನ್ನು ಮೊದಲು ಜ್ಞಾಪಿಸಿಕೊಂಡು ಕೃತಜ್ಞತೆ ತಿಳಿಸುವುದನ್ನು ಮೊದಲು ಕಲಿಯುವುದಕ್ಕೆ ಹೇಳಿ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸದ್ದು ಮಾಡಿರುವ ಪೇಸಿಎಂ ರೀತಿಯಲ್ಲಿ ಹಾಸನದ ಎಂಪಿ ಪ್ರಜ್ವಲ್ ರೇವಣ್ಣ ಹಾಗೂ ಎಂಎಲ್ಸಿ ಸೂರಜ್ ರೇವಣ್ಣರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ, ಹಾಸನದ ಶಾಸಕ ಪ್ರೀತಂ ಗೌಡ ವಿರುದ್ಧ 'ಪೇ ಎಂಎಲ್ಎ' ಪೋಸ್ಟರ್​ಗಳನ್ನು ಹಾಕಿ, ಹಾಸನದ ಪ್ರತಿ ಕಾರ್ಯಗಳಲ್ಲೂ ಕೂಡ ಶಾಸಕ 50 ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರಜ್ವಲ್ ರೇವಣ್ಣ, ಬೆಂಕಿಯಿಲ್ಲದೇ ಹೊಗೆ ಬರುವುದಿಲ್ಲ. ಇದ್ರ ಬಗ್ಗೆ ನನಗೆ ಹೆಚ್ಚುಗೊತ್ತಿಲ್ಲ. ಆದ್ರೆ ಅಭಿಮಾನಿಗಳು ಹಾಕಿದ್ದಾರೆ ಎಂದ್ರೆ ಸುಮ್ಮನೆ ಹಾಕುವುದಿಲ್ಲ. ಕಮಿಷನ್ ಕೊಟ್ಟಿರುತ್ತಾರೆ. ಇಲ್ಲಾ ಕಮೀಷನ್​ ಕೇಳಿರುತ್ತಾರೆ. ಹಾಗಾಗಿ ಅದು ಸತ್ಯವಿರಬಹುದು. ಆದ್ರೆ ನಾನಂತೂ ಹಾಕಿಲ್ಲ ಎಂದರು.

ಇದನ್ನೂ ಓದಿ: ಇಂದು ದೆಹಲಿಗೆ ವಾಪಸ್​ ಆಗಲಿರುವ ರಾಷ್ಟ್ರಪತಿ.. ರಾಜಭವನದಲ್ಲಿ ವಿಶೇಷ ಔತಣಕೂಟ ಆಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.