ETV Bharat / state

ಕೊರೊನಾ ಸಂಕಷ್ಟದಲ್ಲೂ ಸಾಲ ಮರು ಪಾವತಿಗೆ ಬ್ಯಾಂಕ್​ನಿಂದ ರೈತರಿಗೆ ಬಂತು ನೋಟಿಸ್ - ಕೃಷಿ ಸಾಲ ಮರುಪಾವತಿಸುಂತೆ ರೈತರಿಗೆ ಬ್ಯಾಂಕ್​​ ನೋಟಿಸ್

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬ್ಯಾಂಕೊಂದರಿಂದ ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ಕೊರೊನಾ ಕರ್ಫ್ಯೂ ನಡುವೆಯೂ ಇಂತಹ ನೋಟಿಸ್ ನೀಡುತ್ತಿರುವುದಕ್ಕೆ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೃಷಿ ಸಾಲ ಮರುಪಾವತಿಸುಂತೆ ರೈತರಿಗೆ ಬ್ಯಾಂಕ್​​ ನೋಟಿಸ್

author img

By

Published : May 8, 2021, 9:32 AM IST

ಹಾಸನ: ಕೊರೊನಾ ಸಂಕಷ್ಟದ ನಡುವೆ ಬ್ಯಾಂಕ್​ಗಳು ರೈತರಿಗೆ ನೀಡಿದ್ದ ಕೃಷಿ ಸಾಲವನ್ನು ಮರುಪಾವತಿ ಮಾಡುವಂತೆ ಮನೆಗೆ ಬಂದು ​ರೈತರಿಗೆ ನೋಟಿಸ್ ನೀಡುತ್ತಿವೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಬ್ಯಾಂಕೊಂದರಿಂದ ನೋಟಿಸ್​ ನೀಡಿದ ಹಿನ್ನೆಲೆಯಲ್ಲಿ ಸಿಬ್ಬಂದಿ ವಿರುದ್ಧ ರೈತರು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕ್​ನ ನಡೆಗೆ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೃಷಿ ಸಾಲ ಮರುಪಾವತಿಸುಂತೆ ರೈತರಿಗೆ ಬ್ಯಾಂಕ್​​ ನೋಟಿಸ್

ಬ್ಯಾಂಕ್ ನಿಂದ ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರು ವ್ಯಾಪ್ತಿಗೆ ಒಳಪಡುವ, ಚಿಕ್ಕೆನಹಳ್ಳಿ, ಕಲ್ಕೆರೆ, ಸೇರಿದಂತೆ 5-6 ಗ್ರಾಮಗಳಲ್ಲಿ ಸಾಲ ಪಡೆದಿರುವ ರೈತರ ಸುಮಾರು 50 ಕ್ಕೂ ಹೆಚ್ಚು ಮನೆಗಳ ಬಾಗಿಲಿಗೆ ಬ್ಯಾಂಕ್​ ಅಧಿಕಾರಿಗಳು ನೋಟಿಸ್​ ಅಂಟಿಸಿದ್ದು, ಇದರಿಂದ ಅನ್ನದಾತರು ವಿಚಲಿತರಾಗಿದ್ದಾರೆ. ಮೊದಲೇ ಕೊರೊನಾ ಸಂಕಷ್ಟದಿಂದ ಸರಿಯಾಗಿ ಕೂಲಿ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಆಗುತ್ತಿಲ್ಲ. ದಯಮಾಡಿ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರ್ಕಾರ ಬ್ಯಾಂಕ್ ಗಳಿಗೆ ಸೂಚನೆ ನೀಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಇಂತಹ ನೋಟಿಸ್ ನೀಡಬಾರದೆಂದು ಎಂದು ರೈತರು ಮನವಿ ಮಾಡಿದ್ದಾರೆ.

ಅಲ್ಲದೇ ಕಳೆದ ಎರಡು ವರ್ಷದಿಂದ ಕೊರೊನಾ ಎಂಬ ಹೆಮ್ಮಾರಿ ವಕ್ಕರಿಸಿದ್ದ ಹಿನ್ನೆಲೆಯಲ್ಲಿ ಸರಿಯಾಗಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ಸರ್ಕಾರ ನಮ್ಮ ಸಂಕಷ್ಟವನ್ನು ಅರಿತು ಸಾಲ ಮನ್ನಾ ಮಾಡಬೇಕು. ನನ್ನ ಮಗ ಈಗಾಗಲೇ ಸಾಲ ಮಾಡಿ ತೀರಿಸಲಾಗದೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗ ತೀರಿ ಹೋದ ನಂತರ ವಯೋವೃದ್ಧ ತಂದೆ-ತಾಯಿಗೆ ನೋಟಿಸ್​ ಬರುತ್ತಿದೆ. ಹೀಗಾದ್ರೆ ನಾವು ಬದುಕೋದು ಹೇಗೆ ಎಂದು ರೈತ ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಓದಿ : ಕೊರೊನಾ ಸೋಂಕಿತರಿಗೆ ಉಚಿತ ಊಟ.. ಹಸಿವು ನೀಗಿಸುವ ಯುವ ಬ್ರಿಗೇಡ್ ಕಾರ್ಯಕ್ಕೆ ಸಲಾಂ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.