ETV Bharat / state

ಹಾಸನ: ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ - ಹಾಸನದಲ್ಲಿ ಆತ್ಮಹತ್ಯೆ

ಗಂಡ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾಯಿ, ಮಕ್ಕಳು ಆತ್ಮಹತ್ಯೆ
ತಾಯಿ, ಮಕ್ಕಳು ಆತ್ಮಹತ್ಯೆ
author img

By ETV Bharat Karnataka Team

Published : Jan 2, 2024, 5:55 PM IST

Updated : Jan 2, 2024, 6:50 PM IST

ಹಾಸನ : ಒಂದೇ ಮನೆಯಲ್ಲಿ ತಾಯಿ, ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಗರದ ಹೊರ ವಲಯದಲ್ಲಿ ನಡೆದಿದೆ. ಮೃತರನ್ನು ತಾಯಿ ಶಿವಮ್ಮ (36) ಮತ್ತು ಅವರ 7 ವರ್ಷದ ಪುತ್ರಿ ಹಾಗೂ 9 ವರ್ಷದ ಮಗ ಎಂದು ಗುರುತಿಸಲಾಗಿದೆ. ಗಂಡ ಮನೆಯಲ್ಲಿ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಕಾರಣ ನಿಗೂಢ : ಮೃತ ಶಿವಮ್ಮನಿಗೆ ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ದಾಂಪತ್ಯದಲ್ಲಿಯೂ ಯಾವುದೇ ಕಿರಿಕಿರಿ ಇರಲಿಲ್ಲ. ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಶಿವಮ್ಮನ ಪತಿ ತುಮಕೂರಿನ ಬೇಕರಿವೊಂದರಲ್ಲಿ ಕೆಲಸ ಮಾಡಿಕೊಡಿದ್ದರು.

ತುಮಕೂರಿನಲ್ಲಿ ಬೇಕರಿ ಕೆಲಸಕ್ಕೆಂದು ಒಂದು ತಿಂಗಳ ಹಿಂದೆ ಹೋಗಿದ್ದೆ. ಸೋಮವಾರ ಸಂಜೆ ವಿಡಿಯೋ ಕಾಲ್​ ಕಾಲ್​ ಮಾಡಿ ಹೆಂಡತಿ ಮಕ್ಕಳೊಂದಿಗೆ ಮಾತನಾಡಿದ್ದೇನೆ. ಇವತ್ತು ಕೋರ್ಟ್​ ನಲ್ಲಿ ಕೆಲಸವಿದ್ದ ಕಾರಣ ತುಮಕೂರಿನಿಂದ ಹಾಸನಕ್ಕೆ ಬರುತ್ತೇನೆ ಎಂದು ಹೇಳಿದ್ದೆ. ಆಚೆ ಕಡೆ ಹೋಗೋಣ ಎಂದು ಕೂಡ ಹೇಳಿದ್ದೆ.

ಹಾಸನಕ್ಕೆ ಬಂದ ಮೇಲೆ 3-4 ಬಾರಿ ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಮನೆ ಬಳಿಕ ಬಂದು ನೋಡಿದಾಗಲೂ ಯಾರೂ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದೆ, ಆದರೂ ಪತ್ತೆ ಆಗಲಿಲ್ಲ. ಮತ್ತೆ ಮನೆ ಹತ್ತಿರ ಬಂದಾಗ ಗ್ಯಾಸ್​ ವಾಸನೆ ಬಂತು. ಆದರೇ, ಬಾಗಿಲು ಮತ್ತು ಎಲ್ಲಾ ಕಿಟಕಿಗಳನ್ನು ಮುಚ್ಚಲಾಗಿತ್ತು. ಮನೆ ಬಾಗಿಲಿಗೆ ಬೀಗ ಹಾಕಿದ್ದರಿಂದ ಹೊರಗಡೆ ಹೋಗಿರಬಹುದು ಎಂದು ಮನೆ ಬಳಿ ಸ್ವಲ್ಪ ಹೊತ್ತು ಕಾದು ಕುಳಿತಿದ್ದೆ. ನಂತರ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಮೃತ ಶಿವಮ್ಮಳ ಪತಿ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದು, ಮೃತದೇಹಗಳನ್ನು ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪತ್ನಿ, ಮಕ್ಕಳು, ಮೊಮ್ಮಗಳ ಕೊಂದು ಪೋಸ್ಟ್​ಮಾಸ್ಟರ್ ಆತ್ಮಹತ್ಯೆ

Last Updated : Jan 2, 2024, 6:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.