ETV Bharat / state

ನನ್ನ ವಿರುದ್ಧ ಸ್ಪರ್ಧೆ ಮಾಡಲು ಅವರಿಗೆ ಶಕ್ತಿ ಇಲ್ವಾ? ಜೆಡಿಎಸ್​ಗೆ ಶಾಸಕ ಪ್ರೀತಂ ಟಾಂಗ್ - ಕುಮಾರಸ್ವಾಮಿ ಬಗ್ಗೆ ಶಾಸಕ ಪ್ರೀತಂ ಟೀಕೆ

ಚುನಾವಣೆ ಎದುರಿಸೋಕೆ, ಪ್ರಚಾರ ಮಾಡೋಕೆ ಹೆಚ್ ​ಡಿ ಕುಮಾರಸ್ವಾಮಿ ಅವರೇ ಬರಬೇಕೆ? ರೇವಣ್ಣರಿಗೆ ಶಕ್ತಿ ಇಲ್ಲವೇ? ಎಂದು ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಟಾಂಗ್ ನೀಡಿದರು.

MLA Preetham gowda criticize JDS
ಶಾಸಕ ಪ್ರೀತಂ ಜೆ ಗೌಡ
author img

By

Published : Sep 18, 2022, 3:25 PM IST

ಹಾಸನ: ನನ್ನ ವಿರುದ್ಧ ಸ್ಪರ್ಧೆ ಮಾಡಲು ಅವರಿಗೆ ಶಕ್ತಿ ಇಲ್ವಾ? ಮಾಜಿ ಮುಖ್ಯಮಂತ್ರಿ, ಅವರ ಸಹೋದರ ಹೆಚ್​ ಡಿ ಕುಮಾರಸ್ವಾಮಿ ಅವರು ಬಂದು ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಹಾಸನ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಿಸುತ್ತೇನೆಂದು ಯಾಕೆ ಹೇಳಬೇಕಿತ್ತು ಎಂದು ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರು ಮಾಜಿ ಸಿಎಂ ಹೆಚ್​ಡಿಕೆ ಮತ್ತು ಮಾಜಿ ಸಚಿವ ಹೆಚ್​ ಡಿ ರೇವಣ್ಣ ಅವರಿಗೆ ಟಾಂಗ್ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿರುವ ರೇವಣ್ಣ, ಜಿಪಂ ಉಪಾಧ್ಯಕ್ಷ ಹೆಚ್.ಪಿ ಸ್ವರೂಪ್, ಕಾಂಗ್ರೆಸ್​ನವರು ನನ್ನ ರಾಜಕೀಯ ವಿರೋಧಿಯಾಗಿದ್ದಾರೆ. ಅವರು ತೆಗಳಿದ್ದಾರೆ, ಹೊಗಳಿದ್ದಾರೆ ಅಂತಾ ನಾನು ಯಾವುದಕ್ಕೂ ವಿಚಲಿತನಾಗೋದಿಲ್ಲ. ಹಿಗ್ಗೋದೂ ಇಲ್ಲ, ಕುಗ್ಗೋದೂ ಇಲ್ಲ ಎಂದರು.

ಶಾಸಕ ಪ್ರೀತಂ ಜೆ ಗೌಡ

ನಾನು ಯಾರಿಗೂ ಆಹ್ವಾನ ನೀಡಿಲ್ಲ. ನನ್ನ ವಿಧಾನಸಭಾ ಕ್ಷೇತ್ರದಲ್ಲಿನ ಕಾಮಗಾರಿಗಳಲ್ಲಿ ಮೂಗು ತೂರಿಸುತ್ತಾರೆ. ನನ್ನ ಕ್ಷೇತ್ರದ ಮೇಲೆ ಅಷ್ಟೊಂದು ಆಸಕ್ತಿ ಇದ್ರೆ ನೀವು ಬಂದು ಚುನಾವಣೆಗೆ ನಿಂತು ಎದುರಿಸಿ ಅಂತ ಹೇಳಿದ್ದೇನೆ. ನಾನು ಹೇಳಿದ್ದನ್ನು ಅವರು ಬಹಳ ಸೀರಿಯಸ್ ಆಗಿ ತೆಗೆದುಕೊಂಡು ಸ್ಪರ್ಧೆ ಮಾಡ್ತಾರೆ ಅನ್ನೋದಾದ್ರೆ ಸಂತೋಷ ಎಂದು ಸ್ಪರ್ಧೆಗೆ ಆಹ್ವಾನಿಸಿದರು. ಸ್ವರೂಪ್ ಅವರಿಗೆ ವಯಸ್ಸಿದೆ, ರೇವಣ್ಣ ಅವರಿಗೆ ಅವಕಾಶ ಮಾಡಿಕೊಡಲಿ. ಇಲ್ಲಾಂದ್ರೆ ಅವರಿಗೆ ಬೇರೆ ಕ್ಷೇತ್ರ ಕೊಡಲಿ. ಈ ಬಗ್ಗೆ ಅವರಿಬ್ಬರು ಕುಳಿತು ಯೋಚನೆ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: ಕುಮಾರಣ್ಣ ಏನೇ ಅಂದ್ರೂ ಆಶೀರ್ವಾದ ಎಂದು ಭಾವಿಸುವೆ: ಶಾಸಕ ಪ್ರೀತಂ ಗೌಡ

ಶಾಸಕ ಪ್ರೀತಂಗೌಡ ರೌಡಿಸಂ ಮಾಡಿಸ್ತಿದ್ದಾರೆ ಎಂದು ಸಭೆಯಲ್ಲಿ ಹೆಚ್.ಪಿ. ಸ್ವರೂಪ್ ಹೇಳಿಕೆ ನೀಡಿದ್ದಾರೆ. ಚುನಾವಣೆ ಅಂತ ಹೇಳಿದ್ರೆ ಕೇವಲ ಭಾಷಣ. ಒಳ್ಳೆಯರು, ಕೆಟ್ಟವರು, ರೌಡಿಸಂ ಅದೆಲ್ಲವೂ ವಿರೋಧ ಪಕ್ಷದವರು ಮಾಡೋದು. ಇನ್ನೊಂದು ಪಕ್ಷದ ಬಗ್ಗೆ aವರಿಗೆ ಗೊತ್ತಿರೋದು ಅಷ್ಟೇ. ರಾಜಕಾರಣದಲ್ಲಿ ನಿಜವಾಗಿ ನೋಡಬೇಕಾಗಿರೋದು ಜನಸೇವೆ. ಸೇವೆ ಮಾಡಲು ಅವಕಾಶ ಸಿಕ್ಕ ಸಂದರ್ಭದಲ್ಲಿ ಎಷ್ಟು ಕೆಲಸ ಮಾಡಿದ್ದಾರೆ. ಅವರ ತಂದೆ ನಾಲ್ಕು ಬಾರಿ ಶಾಸಕರಾಗಿದ್ದಾರೆ. ನಾಲ್ಕು ಬಾರಿ ಶಾಸಕರಾಗಿದ್ದವರ ಕೊಡುಗೆ ಏನು ಅಂತಾ ಜನಸಾಮಾನ್ಯರನ್ನ ಕೇಳಿ. ನಾನು ಮಾತಾಡಿದ್ರೆ ವಿರೋಧ ಪಕ್ಷದವನು ಅಂತಾ ತಪ್ಪಾಗುತ್ತದೆ. ಆದರೆ ಪ್ರೀತಂ ಗೌಡನ ಕೊಡುಗೆ ಏನು ಎಂದು ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಕೇಳಿ, ಅಲ್ಲೇ ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.