ಹಾಸನ: ನಿಂಬೆಹಣ್ಣು ಇಡ್ಕೊಂಡು ಓಡಾಡುವವರ ಆಟ ಇನ್ನು ಮುಂದೆ ಹೆಚ್ಚು ದಿನ ನಡೆಯುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪರೋಕ್ಷವಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣನಿಗೆ ಟಾಂಗ್ ನೀಡಿದರು.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿಯ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೆಲವರು ನಿಂಬೆಹಣ್ಣು ಇಟ್ಟುಕೊಂಡು ಹಾಸನ ಜನರನ್ನು ಮರುಳು ಮಾಡಿ ಓಡಾಡುತ್ತಾರೆ. ಆದರೆ ನಿಂಬೆಹಣ್ಣಿನ ಪ್ರಭಾವ ಹೆಚ್ಚು ದಿನ ನಡೆಯೋದಿಲ್ಲ. ಅವರ ಪ್ರಭಾವ ಬೇರೆಯವರಿಗಿಂತ ನನಗೆ ಹೆಚ್ಚು ಪ್ರಭಾವ ಬೀರಿದೆ. ಆದರೆ ಅದರ ಪ್ರಭಾವ ಇನ್ನು ಮುಂದೆ ಹೆಚ್ಚು ದಿನ ಇರುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಬಹಿರಂಗ ಸಭೆಯಲ್ಲಿಯೇ ಟಾಂಗ್ ನೀಡಿದರು.
ಇದನ್ನೂ ಓದಿ: ನಾನು ನಾಯಕ ಅಲ್ಲ, ಹೀಗೆ ಎಲ್ಲೂ ಹೇಳಿಲ್ಲ: ಸಚಿವ ರಮೇಶ್ ಜಾರಕಿಹೊಳಿ