ETV Bharat / state

ವಜಾ ಮಾಡಿ, ಎಫ್​ಐಆರ್ ಹಾಕಿಸ್ತೀನಿ... ಕಂಪನಿ ಅಧಿಕಾರಿಗಳಿಗೆ ಶಾಸಕ ಪ್ರೀತಂಗೌಡ ತರಾಟೆ

ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕೈಗಾರಿಕಾ ಸಂಸ್ಥೆಗಳ ಸಭೆಯಲ್ಲಿ ಸಿಎಸ್ಆರ್ ನಿಧಿ ಬಳಕೆ ಕುರಿತು ಸಮರ್ಪಕ ಮಾಹಿತಿ ನೀಡದ ಕಂಪನಿ ಅಧಿಕಾರಿಗಳನ್ನು ಶಾಸಕ ಪ್ರೀತಂಗೌಡ ತರಾಟೆಗೆ ತೆಗೆದುಕೊಂಡರು.

Meeting of Representatives, Officers and Industrial Establishments at Hassan District Secretariat
ಅಧಿಕಾರಿಗಳಿಗೆ ಶಾಸಕ ಪ್ರೀತಂಗೌಡ ತರಾಟೆ
author img

By

Published : Jan 19, 2020, 4:33 AM IST

ಹಾಸನ: ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿ ಬಳಕೆ ಕುರಿತು ಸಮರ್ಪಕ ಮಾಹಿತಿ ನೀಡದ ಹೆಚ್​ಪಿಸಿಎಲ್ ಕಂಪನಿ ಅಧಿಕಾರಿಗಳನ್ನು ಶಾಸಕ‌ ಪ್ರೀತಂಗೌಡ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕೈಗಾರಿಕಾ ಸಂಸ್ಥೆಗಳ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಕಂಪನಿ ವಜಾಗೊಳಿಸಿ, ಪ್ರಕರಣ ದಾಖಲಿಸುತ್ತೇನೆ. ಶಾಲಾ- ಕಾಲೇಜುಗಳಿಗೆ ಬೆಂಚು ಹಾಗೂ ಕಂಪ್ಯೂಟರ್ ವಿತರಿಸುವಂತೆ 5 ಬಾರಿ ಹೇಳಿದ್ದೇನೆ. ಈ ಮಾತನ್ನು ಕೇಳದೆ ಗವೇನಹಳ್ಳಿ ಹಾಗೂ ಜವೇನಹಳ್ಳಿ ಕೆರೆಯಲ್ಲಿ 35 ಲಕ್ಷದಲ್ಲಿ ಟ್ಯಾಂಕ್​​ಗಳನ್ನು ನಿರ್ಮಿಸಿರುವುದು ತಪ್ಪು ಎಂದು ಕಂಪನಿ ವಿರುದ್ಧ ಕಿಡಿಕಾರಿದರು.

ದುಡ್ಡು ಕೇಳಿದರೆ ಇಲ್ಲ ಎಂದು ಉತ್ತರಿಸುತ್ತಾರೆ. ಲೂಟಿ ಹೊಡೆಯಲು ದುಡ್ಡನ್ನೆಲ್ಲಾ ಕೆರೆಗೆ ಹಾಕುತ್ತೀರಾ? ಇಷ್ಟಕ್ಕೂ ಯಾರ ಅನುಮತಿ ಪಡೆದ್ದಿದ್ದೀರಾ? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳಿಗೆ ಶಾಸಕ ಪ್ರೀತಂಗೌಡ ತರಾಟೆ

ಸಿಎಸ್​​ಆರ್ ನಿಧಿ ಖರ್ಚು ಮಾಡಲು ಬ್ಲಾಕ್​ ಮೇಲ್ ಮಾಡುವುದಿಲ್ಲ. ಸ್ವಯಂ ಪ್ರೇರಣೆಯಿಂದ ಕೊಡುವುದಾದರೇ ಕೊಡುವ ಹಣದಲ್ಲಿ ನೀವು ಅರ್ಧ ಖರ್ಚು ಮಾಡಿ. ಉಳಿದದ್ದು ಜನಪ್ರತಿನಿಧಿಗಳು ತಿಳಿಸಿದ ಪ್ರಸ್ತಾವನೇ ಪ್ರಕಾರವೇ ಖರ್ಚು ಮಾಡಿ ಎಂದರು.

ಕೆಲವು ಕಡೆಗಳಲ್ಲಿ ಶಾಸಕರ ನಿಧಿಯಿಂದ ಹಣ ನೀಡಿರುತ್ತೇವೆ. ಈಗ ನೀವು ಕಂಪ್ಯೂಟರ್, ಬೆಂಚುಗಳನ್ನು ವಿತರಿಸಿ ಎರಡೆರಡು ಬಾರಿ ಹಣ ವ್ಯಯಿಸುವುದು ಬೇಡ. ಮುಂದೆ ಮಾಡುವ ಎಲ್ಲ ಸಿಎಸ್ಆರ್ ನಿಧಿ ಖರ್ಚು ಕುರಿತು ಜಿಲ್ಲಾಧಿಕಾರಿ ಹಾಗೂ ಎಲ್ಲಾ ಶಾಸಕರಿಗೆ ವಿವರವಾದ ವರದಿ ನೀಡಬೇಕು ಎಂದು ಸೂಚಿಸಿದರು.

ಒಂದೂವರೇ ವರ್ಷದಿಂದ ಸಿಎಸ್ಆರ್ ನಿಧಿ ಖರ್ಚು ಬಗ್ಗೆ ಕೇಳಿದರೂ ಹಣ ಇಲ್ಲ ಎಂದವರು ಈಗ ಮೂರು ತಿಂಗಳಲ್ಲಿ ಅನುಮೋದನೆ ಮಾಡಿದವರು ಯಾರು? ಬೇರೆಯವರ ಬಳಿ ಮಾತನಾಡಿದ ಹಾಗೇ ನನ್ನ ಬಳಿ ತಲೆ ಹರಟೆ ಮಾತನಾಡಬೇಡಿ. ಬೇರೆ ಕಂಪನಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ನಿಮ್ಮ ಕಂಪನಿ ಬಗ್ಗೆ ಏಕೆ ಮಾತನಾಡುತ್ತಿದ್ದೇನೆ ಎಂದು ಪ್ರಶ್ನಿಸಿದರು.

Intro:Exclusive Report

ಎಚ್ ಪಿಎಸ್ ಎಲ್ ಅಧಿಕಾರಿಗೆ ಶಾಸಕ‌ ಪ್ರೀತಂ ಗೌಡ ತರಾಟೆ

ಹಾಸನ : ಸಿ.ಎಸ್.ಆರ್. ನಿಧಿ ಬಳಕೆ ಕುರಿತು ಸಮರ್ಪಕ ಮಾಹಿತಿ ನೀಡದ ಎಚ್ ಪಿಸಿ ಎಲ್ ಕಂಪನಿ ಅಧಿಕಾರಿಗಳನ್ನು ಶಾಸಕ‌ ಪ್ರೀತಂ ಗೌಡ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕೈಗಾರಿಕಾ ಸಂಸ್ಥೆಗಳ ಸಭೆಯಲ್ಲಿ ಪ್ರೀತಂ ಗೌಡ
ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ನಿಮ್ಮ ಕಂಪನಿಯನ್ನು ವಜಾಗೊಳಿಸಿ, ಎಫ್‌ಐಆರ್ ಮಾಡಿಸುತ್ತೇನೆ.... ೫ ಭಾರಿ ಹೇಳಿದ್ದೇನೆ ಶಾಲಾ- ಕಾಲೇಜುಗಳಿಗೆ ಡೆಸ್ಕ್ ಹಾಗೂ ಕಂಪ್ಯೂಟರ್ ಕೊಡುವಂತೆ. ಆದರೆ ಇವರು ಗವೇನಹಳ್ಳಿ ಕೆರೆಯಲ್ಲಿ ಟ್ಯಾಂಕ್ ನಿರ್ಮಿಸಿದ್ದು ಮತ್ತೆ ಜವೇನಹಳ್ಳಿ ಕೆರೆಯಲ್ಲಿ ೩೫ ಲಕ್ಷ ರೂ.ನಲ್ಲಿ ಟ್ಯಾಂಕ್ ನಿರ್ಮಿಸಿರುವುದು ತಪ್ಪು ಎಂದು ಎಚ್.ಪಿ.ಸಿ.ಎಲ್ ಕಂಪನಿ ವಿರುದ್ದ ಕಿಡಿಕಾರಿದರು.
ನಾನು ಕೇಳಿದರೆ ದುಡ್ಡು ಇಲ್ಲ ಎನ್ನುತ್ತಾರೆ ಆದರೆ ನಿಮಗೆ ಲೂಟಿ ಹೊಡೆಯೋ ದುಡ್ಡನ್ನು ತೆಗೆದುಕೊಂಡು ಹೋಗಿ ಕೆರೆಗೆ ಹಾಕುತ್ತೀರಾ? ನೀವು ಯಾರ ಅಪ್ಪಣೆಯನ್ನು ಪಡೆದ್ದಿದ್ದೀರಾ?, ಯಾರಿಗೆ ಪ್ರಸ್ತಾವನೇ ಕಳಿಸಿದ್ದೀರಾ? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸಿ.ಎಸ್.ಆರ್. ನಿಧಿ ಖರ್ಚು ಬಳಕೆ ಮಾಡಲು ನಾವೇನು ನಿಮಗೆ ಬ್ಲಾಕ್ ಮೇಲ್ ಮಾಡುವುದಿಲ್ಲ. ನೀವೇ ಸ್ವಯಂ ಪ್ರೇರಣೆಯಿಂದ ಕೊಡುವುದಾದರೇ ನೀವು ಕೊಡುವ ಹಣದಲ್ಲಿ ನೀವು ಆರ್ಧ ಖರ್ಚುಮಾಡಿ, ಇನ್ನ ಆರ್ಧ ಹಣವನ್ನು ಜನಪ್ರತಿನಿಧಿಗಳಾದ ನಾವು ತಿಳಿಸಿದ ಪ್ರಸ್ತಾವನೇ ಪ್ರಕಾರವೇ ಖರ್ಚು ಮಾಡಿ ಎಂದರಲ್ಲದೇ ನಿಮ್ಮ ಜತೆ ನಾವೇಲ್ಲರೂ ಇರುತ್ತೇವೆ ಎಂದು ಎಲ್ಲಾ ಕಂಪನಿಯವರಿಗೂ ಭರವಸೆ ನೀಡಿದರು.
ಕೆಲವು ಕಡೆಗಳಲ್ಲಿ ನಾವು ಶಾಸಕರ ನಿಧಿಯಿಂದ ಹಣವನ್ನು ನೀಡಿರುತ್ತೇವೆ. ಅಲ್ಲಿಗೇ ನೀವು ಕಂಪ್ಯೂಟರ್, ಡೆಸ್ಕ್ ಗಳನ್ನು ನೀಡಿ ಡಬಲ್ ಪೇಮೆಂಟ್ ಹಾಗುವುದು ಬೇಡ. ಮುಂದೆ ಯಾವುದೇ ಕೆಲಸ ಮಾಡುವಾಗಲೂ ನನ್ನ ಕ್ಷೇತ್ರಕ್ಕೆ ಸೇರುವ ಕಂಪನಿಯವರು ಯಾವ ಶಾಲಾ-ಕಾಲೇಜಿಗೆ ಕೊಡುತ್ತೀರಾ ಎಂಬುದನ್ನು ಪಟ್ಟಿ ನೀಡಿ ಅದನ್ನು ಬಿಟ್ಟು ನಿಮ್ಮ ಮನೆ ಪಕ್ಕದಲ್ಲಿರುವ ಪ್ರಾಂಶುಪಾಲರಿಗೆ ಕಂಪ್ಯೂಟರ್ ನೀಡಿದರೆ ಅವರು ಮಕ್ಕಳಿಗೆ ನೀಡಿರುವುದನ್ನು ಮನೆಗೆ ತೆಗೆದುಕೊಂಡು ಹೋದರೆ ಅದಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.
ಇನ್ನು ಮುಂದೆ ನೀವು ಮಾಡುವ ಎಲ್ಲಾ ಸಿ.ಎಸ್.ಆರ್. ನಿಧಿ ಖರ್ಚು ಬಗ್ಗೆ ಜಿಲ್ಲಾಧಿಕಾರಿ ಹಾಗೂ ಎಲ್ಲಾ ಶಾಸಕರುಗಳಿಗೆ ಒಂದೊಮದು ಪ್ರತಿಯನ್ನು ನೀಡಬೇಕು ನಿಮ್ಮಲ್ಲಿ ಒಂದು ಶಿಸ್ತು ಬೆಳೆಯಬೇಕು ಎಂದರಲ್ಲದೇ ಒಂದುವರೇ ವರ್ಷದಿಂದ ನಾನು ಸಿ.ಎಸ್.ಆರ್. ನಿಧಿ ಖರ್ಚು ಬಗ್ಗೆ ಕೇಳಿದರು ಹಣ ಇಲ್ಲ ಎಂದವರು ಈಗ ಮೂರು ತಿಂಗಳಲ್ಲಿ ಅನುಮೋದನೆ ಮಾಡಿದವರು ಯಾರು ಎಂದು ಕಿಡಿಕಾರಿದರು.
ನೀವು ಬೇರೆಯವರ ಬಳಿ ಮಾತನಾಡಿದ ಹಾಗೇ ನನ್ನ ಬಳಿ ತಲೆಹರಟೆ ಮಾತನಾಡಬೇಡಿ. ನಾನು ಬೇರೆ ಕಂಪನಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ನಿಮ್ಮ ಕಂಪನಿ ಬಗ್ಗೆ ಏಕೆ ಮಾತನಾಡುತ್ತಿದ್ದೇನೆ ಎಂದು ಎಚ್.ಪಿ.ಸಿ.ಎಲ್ ಕಂಪನಿಯವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಬೈಟ್ : ಪ್ರೀತಂ ಜೆ. ಗೌಡ, ಶಾಸಕ.

-         ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.