ETV Bharat / state

IT Raid : ಅರಸೀಕೆರೆಯಲ್ಲಿ ಮೂವರು ವರ್ತಕರ ಮನೆ-ಅಂಗಡಿಗಳ ಮೇಲೆ ಐಟಿ ದಾಳಿ - ಅರಸೀಕೆರೆಯಲ್ಲಿ ಐಟಿ ದಾಳಿ

ರಾಜ್ಯದ 15 ಸರ್ಕಾರಿ ಅಧಿಕಾರಿಗಳ ಮನೆ-ಕಚೇರಿ ಸೇರಿದಂತೆ 60 ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ. ಅದರಂತೆ ಇಂದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಐಟಿ ಅಧಿಕಾರಿಗಳು ಮೂರು ಕಡೆ ದಾಳಿ ನಡೆಸಿದ್ದಾರೆ..

IT raid on arasikere
ಅರಸೀಕೆರೆಯಲ್ಲಿ ಐಟಿ ದಾಳಿ
author img

By

Published : Nov 24, 2021, 3:02 PM IST

ಹಾಸನ : ಇಂದು ಬೆಳ್ಳಂಬೆಳ್ಳಗ್ಗೆ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧೆಡೆ ದಾಳಿ ನಡೆಸಿ ಅಧಿಕಾರಿಗಳಿಗೆ ಶಾಕ್​ ನೀಡಿದ್ದಾರೆ. ಅದರಂತೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ಮೂರು ಕಡೆ ಐಟಿ ದಾಳಿ ನಡೆದಿದೆ.

ಬೆಂಗಳೂರಿನಿಂದ ಆರು ವಾಹನಗಳಲ್ಲಿ ಬಂದ ಅಧಿಕಾರಿಗಳ ತಂಡ ಜಿಲ್ಲೆಯ ಅರಸೀಕೆರೆ ನಗರದ ಕೊಬ್ಬರಿ ಮಂಡಿ ವರ್ತಕ ಆರ್​​ಟಿಎಸ್ ಟ್ರೇಡರ್ಸ್ ರಾಜಣ್ಣ, ಮಹೇಶ್ವರಪ್ಪ ಅಂಡ್ ಕೋ ಕಂಪನಿ ಮಾಲೀಕ ನಿಜಗುಣ ಮತ್ತು ರಾಜಸ್ಥಾನ ಕಮರ್ಷಿಯಲ್ ಕಾರ್ಪೊರೇಷನ್ ಮಾಲೀಕ ನಿತಿನ್ ಎಂಬುವರ ಮನೆ ಹಾಗೂ ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ ಡಿಪಾರ್ಟ್​ಮೆಂಟ್​) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

IT raid on arasikere
ಅರಸೀಕೆರೆಯಲ್ಲಿ ಐಟಿ ದಾಳಿ

ವಿಧಾನಪರಿಷತ್ ಚುನಾವಣೆ ಸಮೀಪಿಸುತ್ತಿದ್ದು, ಹಣ ಚಲಾವಣೆ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ACB Raid: ರಾಜ್ಯಾದ್ಯಂತ ಭ್ರಷ್ಟರಿಗೆ ಬಲೆ.. ಕೋಟ್ಯಂತರ ಮೌಲ್ಯದ ಚಿನ್ನಾಭರಣ ಪತ್ತೆ, ಮುಂದುವರೆದ ತಲಾಶ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.