ಹಾಸನ: ಹೇಮಾವತಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಿದ ಪರಿಣಾಮ ಹೊಳೆನರಸೀಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಜಲಕಂಟಕ ಸೃಷ್ಟಿಯಾಗಿದೆ.
ತಾಲೂಕಿನ ಪ್ರಮುಖ ರಾಜ್ಯ ಹೆದ್ದಾರಿಗಳಾದ ಚನ್ನರಾಯಪಟ್ಟಣ ರಸ್ತೆ ಮತ್ತು ಅರಕಲಗೂಡು ರಸ್ತೆ ಜಲಾವೃತವಾಗಿದೆ. ಎರಡೂ ಕಡೆಗೆ ಯಾವುದೇ ಸಂಚಾರ ಸಂಪರ್ಕ ಇಲ್ಲದಂತಾಗಿದ್ದು, ಪಟ್ಟಣದ ಹೃದಯ ಭಾಗವಾದ ರಿವರ್ ಬ್ಯಾಂಕ್ ರಸ್ತೆಯಲ್ಲಿ ಕಳೆದ ರಾತ್ರಿ ರಿವರ್‌ಬ್ಯಾಂಕ್ ರಸ್ತೆಯಲ್ಲಿ ಇರುವ ಯಾಸೀನ್ ನಗರದ ಮೂರೂ ಬೀದಿಗಳ ಇನ್ನೂರಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದವು. ಮಳೆಯ ನೀರು ಮತ್ತು ಹೇಮಾವತಿ ನದಿಯ ನೀರು ನುಗ್ಗಿದ ಪರಿಣಾಮ ಇಪ್ಪತ್ತೈದಕ್ಕು ಹೆಚ್ಚು ಮನೆಗಳು ಕುಸಿದು ಹೋಗಿದೆ.
ಕೋಟ್ಯಂತರ ರೂಪಾಯಿ ನಷ್ಟವೂ ಉಂಟಾಗಿದ್ದಾರೆ, ಜೊತೆಗೆ ಪಟ್ಣದ ಸೂರನಹಳ್ಳಿ ರಸ್ತೆಯಲ್ಲಿರುವ ಕುವೆಂಪು ಬಡಾವಣೆಯಲ್ಲಿಯೂ ನಲವತ್ತು ಮನೆಗಳು ಜಲಾವೃತವಾಗಿವೆ. ಜಿಲ್ಲಾಡಳಿತದಿಂದ ಪಟ್ಟಣದಲ್ಲಿ ಮೂರು ಪುನರ್‌ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಟಿಪ್ಪು ಶಾದಿಮಹಲ್, ಶಿಕ್ಷಕರ ಭವನ, ಮತ್ತು ಎಪಿಎಂಸಿ ಯಾರ್ಡ್‌ಗಳಲ್ಲಿ ಈ ಪುನರ್ ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ನೆರೆ ಸಂತ್ರಸ್ತರು ಇಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ತಾಲೂಕಿನ ಹಿರೇಬೆಳಗುಲಿ, ಕಟ್ಟೆಬೆಳಗುಲಿ, ತಟ್ಟೆಕೆರೆ ಗ್ರಾಮಗಳ ಹಲವೆಡೆ ತೋಟಗಳು, ಭತ್ತದ ಗದ್ದೆಗಳು ನೆರೆಗೆ ಹಾನಿಯಾಗಿ ಕೋಟ್ಯಂತರ ರೂಪಾಯಿ ನಷ್ಟವುಂಟಾಗಿದೆ.