ETV Bharat / state

ಭಾರೀ ಮಳೆಗೆ ಮನೆಗಳು ಕುಸಿತ.. ಮಹಾಮಳೆಗೆ ಮುಳುಗಿದ ಬದುಕು.. - kannadanews

ರಾಜ್ಯದೆಲ್ಲೆಡೆ ತನ್ನ ರೌದ್ರಾವತಾರ ತೋರುತ್ತಿರುವ ಮಳೆ ಹಾಸನದಲ್ಲಿ ಕೂಡ ತನ್ನ ಆರ್ಭಟ ಮುಂದುವರೆಸಿದೆ.

ಭಾರೀ ಮಳೆಗೆ ಮನೆಗಳು ಕುಸಿತ
author img

By

Published : Aug 9, 2019, 10:32 AM IST

ಹಾಸನ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮನೆಯಿಂದ ಹೊರ ಬರಲು ಆಗದ ಪರಿಸ್ಥಿತಿ ತಂದೊಡ್ಡಿದೆ. ವಿಪರೀತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆಯಲ್ಲದೇ ಹಲವು ಮನೆಗಳು ಕುಸಿದು ಬಿದ್ದು, ಅಪಾರ ನಷ್ಟ ಸಂಭವಿಸಿದೆ.

ಮಳೆಯ ಆರ್ಭಟಕ್ಕೆ ನಗರದ ಚಿತಿನ್ ಕಟ್ಟೆ ಸುತ್ತಮುತ್ತ ಮೂರು ಮನೆ ಹಾಗೂ ಮಳಿಗೆಗಳು ಕುಸಿದು ಬಿದ್ದಿದ್ದು, ಅದೃಷ್ಟವಶಾತ್​ ಯಾವುದೇ ಸಾವು-ನೋವು ಸಂಭವಿಸಿಲ್ಲ. ಮನೆಯ ಗೋಡೆಗಳು ನೆಲಕಚ್ಚಿವೆ, ಮುಂದೆ ಮತ್ತಷ್ಟು ಕುಸಿಯುವ ಮುನ್ಸೂಚನೆಯನ್ನು ನೀಡುತ್ತಿವೆ. ವಿಷಯ ತಿಳಿದ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನೆ ಮನೆಗೂ ತೆರಳಿ ಪರಿಶೀಲನೆ ನಡೆಸಿ ಅಂಕಿಅಂಶ ಕಲೆಹಾಕುತ್ತಿದ್ದಾರೆ.

ಭಾರೀ ಮಳೆಗೆ ಮನೆಗಳು ಕುಸಿತ..

ಇಲ್ಲಿನ ನಿವಾಸಿಗಳು ಮಳೆಗಾಲದಲ್ಲಿ ಇದ್ದ ಒಂದು ಸೂರನ್ನು ಕಳೆದುಕೊಂಡು ಬೀದಿಯಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಮುಂದೇನು ಮಾಡಬೇಕೆಂದು ತೋಚದೆ ಚಿಂತೆಗೀಡಾಗಿದ್ದಾರೆ. ಸದ್ಯ ಮನೆ ಕಳೆದುಕೊಂಡವರಿಗೆ ಪಕ್ಕದ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆದು ಉಳಿದುಕೊಳ್ಳಲು ತಾತ್ಕಾಲಿಕ ಸೂರು ಕಲ್ಪಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕಷ್ಟಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.

Intro:ಹಾಸನ : ಮಳೆಯಿಲ್ಲದೆ ಬಿಸಿಲಿನ ಝಳದಿಂದ ಹೈರಾಣಾಗಿದ್ದ ಒಂದುವಾರದಿಂದ ತಂಪೆರೆಯುವದಷ್ಟೇಯಲ್ಲದೇ ಮನೆಯಿಂದ ಹೊರಬರಲು ಆಗದ ಪರಿಸ್ಥಿತಿ ತಂದೊಡ್ಡಿದ್ದು ವಿಪರೀತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆಯಲ್ಲದೇ ಹಲವು ಮನೆಗಳು ಕುಸಿದು ಬಿದ್ದು, ಅಪಾರ ನಷ್ಟ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಆರ್ಭಟಕ್ಕೆ ನಗರದ ಚಿತಿನ್ ಕಟ್ಟೆ ಸುತ್ತಮುತ್ತ ಮೂರು ಮನೆ ಹಾಗೂ ಮಳಿಗೆಗಳು ಕುಸಿದು ಬಿದ್ದಿದ್ದು, ಮನೆ ಕುಸಿದಾಗ ಹೆದರಿದ ಮನೆಯವರು ಹೊರಗೆ ಬಂದಿದ್ದಾರೆ.

Body:ನೋಡುನೋಡುತ್ತಿದ್ದಂತೆ ಸಂಪೂರ್ಣ ಮನೆಯ ಗೋಡೆಗಳು ನೆಲಕಚ್ಚಿವೆ, ಮುಂದೆ ಮತ್ತಷ್ಟು ಕುಸಿಯುವ ಮುನ್ಸೂಚನೆಯನ್ನು ನೀಡುತ್ತಿವೆ.
ವಿಜಯ ತಿಳಿದ ನಗರಸಭೆ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ತಹಸಿಲ್ದಾರ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನೆ ಮನೆ ಕುಸಿತದಿಂದಾಗಿ ರೂ ಪರಿಶೀಲನೆ ನಡೆಸಿ ಅಂಕಿಅಂಶ ಪಡೆದರು.
ಇನ್ನು ಗಲ್ಲಿಯಲ್ಲೊಂದು ಪುಟ್ಟ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಇಲ್ಲಿನ ನಿವಾಸಿಗಳು ಮಳೆಗಾಲದಲ್ಲಿ ಒಂದು ಸೂರನ್ನು ಕಳೆದುಕೊಂಡು ಬೀದಿಯಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಮುಂದೇನು ಮಾಡಬೇಕೆಂದು ತೋಚದೆ ಚಿಂತೆಗೀಡಾಗಿದ್ದಾರೆ.
ಹಲವು ವರ್ಷಗಳ ಹಿಂದೆ ಕಟ್ಟಲಾಗಿರುವ ಈ ಮನೆಗಳನ್ನು ಬಹುತೇಕ ಮಣ್ಣಿನಿಂದಲೇ ನಿರ್ಮಾಣ ಮಾಡಲಾಗಿದ್ದು, ಮಳೆಯ ಒತ್ತಡಕ್ಕೆ ಮನೆಗಳು ಕೆಳಕ್ಕುರುಳಿವೆ, ನೆಲಕಚ್ಚಿರುವ ಎಲ್ಲಾ ಮನೆಗಳು ಮನೆ ನಿವಾಸಿಗಳು ಮನೆಯೊಳಗೆ ಮಲಗಿದ್ದ ವೇಳೆ ಕುಸಿದುಬಿದ್ದಿದೆಯಾದರೂ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

Conclusion:ಸದ್ಯ ಮನೆ ಕಳೆದುಕೊಂಡವರಿಗೆ ಪಕ್ಕದ ಸರಕಾರಿ ಉರ್ದು ಶಾಲೆಯಲ್ಲಿ ಗಂಜಿ ಕೇಂದ್ರ ತೆರೆದು ಉಳಿದುಕೊಳ್ಳಲು ತಾತ್ಕಾಲಿಕ ಕಲ್ಪಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ಕಲ್ಪಿಸಿಕೊಡ ಬೇಕೆಂಬುದು ಮನೆ ಕಳೆದುಕೊಂಡ ಸಂತ್ರಸ್ತರ ಆಗ್ರಹವಾಗಿದೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.