ETV Bharat / state

ಹಾಸನದಲ್ಲಿ ಗರಿಗೆದರಿದ ಗ್ರಾ.ಪಂಚಾಯತ್​ ಚುನಾವಣಾ ಸಿದ್ಧತಾ ಕಾರ್ಯ

author img

By

Published : Dec 4, 2020, 11:11 AM IST

ಗ್ರಾಮ ಪಂಚಾಯತ್​ ಚುನಾವಣೆ ಅಧಿಸೂಚನೆ ಹಿನ್ನೆಲೆಯಲ್ಲಿ ಈಗಾಗಲೇ ಹಾಸನದಲ್ಲಿ ಚುನಾವಣಾ ಕೆಲಸಗಳು ಗರಿಗೆದರುತ್ತಿವೆ. ಮೂರು ಪ್ರಮುಖ ರಾಜಕೀಯ ಪಕ್ಷಗಳು ಸದ್ದಿಲ್ಲದೇ ಚುನಾವಣೆ ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿವೆ. ಹಾಸನದಲ್ಲಿ 267 ಗ್ರಾಮ ಪಂಚಾಯತ್​ಗಳಿದ್ದು, ಅದ್ರಲ್ಲಿ 22 ಗ್ರಾಮ ಪಂಚಾಯತ್​ಗಳಿಗೆ ಈ ಬಾರಿ ಚುನಾವಣೆ ನಡೆಯುತ್ತಿಲ್ಲ.

hassan village panchayath election preperations
ಹಾಸನ ಜಿಲ್ಲಾಧಿಕಾರಿ ಮಾಹಿತಿ

ಹಾಸನ: ಕೋವಿಡ್-19 ಭೀತಿ ನಡುವೆಯೂ ಗ್ರಾ.ಪಂ. ಚುನಾವಣೆ ಅಧಿಸೂಚನೆ ಪ್ರಕಟವಾಗಿದೆ. ಹಾಸನದಲ್ಲಿಯೂ ಚುನಾವಣೆಯ ಕಾವು ನಿಧಾನಗತಿಯಲ್ಲಿ ಏರುತ್ತಿದೆ. ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆಗಳು ನಡೆಯುತ್ತಿವೆ.

ಹಾಸನ ಜಿಲ್ಲಾಧಿಕಾರಿ ಮಾಹಿತಿ

ಈಗಾಗಲೇ ಹಾಸನ ತಾಲೂಕಿನ ಕಸಬಾ ಪಂಚಾಯತ್​ಗಳನ್ನು ಸರ್ಕಾರ ನಗರ ಪಾಲಿಕೆಗಳಿಗೆ ಸೇರ್ಪಡೆ ಮಾಡಿದೆ. ಹೀಗಾಗಿ 10 ಗ್ರಾಮ ಪಂಚಾಯತ್​ಗಳನ್ನು ಹೊರತುಪಡಿಸಿ ಉಳಿದ 26 ಪಂಚಾಯತ್​ಗಳಿಗೆ ಮತ್ತು ಅವಧಿ ಮುಕ್ತಾಯವಾಗದ 12 ಗ್ರಾಮ ಪಂಚಾಯತ್​ಗಳಿಗೆ ಈ ಸಲ ಚುನಾವಣೆ ನಡೆಯುವುದಿಲ್ಲ. ಜಿಲ್ಲೆಯಲ್ಲಿ 245 ಗ್ರಾಮ ಪಂಚಾಯತ್​ಗಳ 3,352 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಮೊದಲ ಹಂತದ ಚುನಾವಣೆ ವಿವರ:

  • ಅಧಿಸೂಚನೆ ಹೊರಡಿಸುವ ದಿನಾಂಕ : ಡಿ.7, 2020
  • ನಾಮಪತ್ರ ಸಲ್ಲಿಸಲು ಕೊನೆಯ ದಿನ : ಡಿ.11, 2020
  • ನಾಮಪತ್ರ ಪರಿಶೀಲಿಸುವ ದಿನಾಂಕ : ಡಿ. 12, 2020
  • ನಾಮಪತ್ರ ಹಿಂಪಡೆಯಲು ಕೊನೆಯ ದಿನ : ಡಿ.14, 2020
  • ಮೊದಲ ಹಂತದ ಮತದಾನ : ಡಿ.22, 2020 ಮಂಗಳವಾರ
  • ಮತದಾನ ಎಣಿಕೆ : ಡಿ.30, 2020 ಬುಧವಾರ

ಮೊದಲ ಹಂತದಲ್ಲಿ 125 ಗ್ರಾಮ ಪಂಚಾಯತ್​ಗಳಿಗೆ ಮತದಾನ ನಡೆಯಲಿದ್ದು, ಹಾಸನದ 26, ಅರಕಲಗೂಡು 35, ಚನ್ನರಾಯಪಟ್ಟಣದ 40 ಮತ್ತು ಸಕಲೇಶಪುರ 24 ಗ್ರಾಮ ಪಂಚಾಯತ್​ಗಳಿ ಮತದಾನ ನಡೆಯಲಿದೆ.

ಎರಡನೇ ಹಂತದ ಚುನಾವಣೆ ವಿವರ:

  • ಅಧಿಸೂಚನೆ ಹೊರಡಿಸುವ ದಿನಾಂಕ : ಡಿ.11, 2020
  • ನಾಮಪತ್ರ ಸಲ್ಲಿಸಲು ಕೊನೆಯ ದಿನ : ಡಿ.16, 2020
  • ನಾಮಪತ್ರ ಪರಿಶೀಲಿಸುವ ದಿನಾಂಕ : ಡಿ. 17, 2020
  • ನಾಮಪತ್ರ ಹಿಂಪಡೆಯಲು ಕೊನೆಯ ದಿನ : ಡಿ.19, 2020
  • ಎರಡನೇ ಹಂತದ ಮತದಾನ :ಡಿ.27, 2020 ಮಂಗಳವಾರ
  • ಮತದಾನ ಎಣಿಕೆ : ಡಿ.30, 2020 ಬುಧವಾರ
    ಇನ್ನು ಈ ಹಂತದಲ್ಲಿ 120 ಗ್ರಾಮ ಪಂಚಾಯ್ತಿಗಳಿಗೆ ಮತದಾನ ನಡೆಯಲಿದ್ದು, ಅರಸೀಕೆರೆ 43, ಬೇಲೂರು 37, ಆಲೂರು 14, ಮತ್ತು ಹೊಳೆನರಸೀಪುರದ 26 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ.

    2003 ಮತಗಟ್ಟೆಗಳಲ್ಲಿ 10,70,545 ಮತದಾರರಿಂದ ಮತ ಚಲಾವಣೆ:
  • ಆಲೂರು ತಾಲೂಕಿನಲ್ಲಿ 14 ಗ್ರಾ.ಪಂ.ಗಳ ಪೈಕಿ 136 ಮತಗಟ್ಟೆಗಳಲ್ಲಿ 30090 ಪುರುಷ ಮತ್ತು 29520 ಮಹಿಳಾ ಮತದಾರರು ಹಾಗೂ ಇತರೆ 3 ಸೇರಿ 59613 ಮತದಾರರಿದ್ದಾರೆ.
  • ಅರಕಲಗೂಡು ತಾಲೂಕಿನ 35 ಗ್ರಾ.ಪಂ.ಗಳಲ್ಲಿ 274 ಮತಗಟ್ಟೆಗಳಿದ್ದು, 75,263 ಪುರಷ ಮತ್ತು 71,281 ಮಹಿಳಾ ಮತದಾರರು ಹಾಗೂ ಇತರೆ 1 ಸೇರಿ 1,46,545 ಮತದಾರರಿದ್ದಾರೆ.
  • ಅರಸೀಕೆರೆಯಲ್ಲಿ 370 ಮತಗಟ್ಟೆಗಳಿದ್ದು, 1,02,141 ಪುರುಷ, 1,00,900 ಮಹಿಳಾ ಮತದಾರರು ಹಾಗೂ ಇತರೆ 1 ಮತದಾರರು ಸೇರಿ 2,03,042 ಮತದಾರರಿದ್ದಾರೆ.
  • ಬೇಲೂರಿನಲ್ಲಿ 241 ಮತಗಟ್ಟೆಗಳ ಪೈಕಿ 67,511 ಪುರುಷ, 65,472 ಮಹಿಳಾ ಹಾಗೂ 4 ಇತರೆ ಮತದಾರರು ಸೇರಿ 1,33,027 ಮತದಾರರಿದ್ದಾರೆ.
  • ಚನ್ನರಾಯಪಟ್ಟಣದಲ್ಲಿ 362 ಮತಗಟ್ಟೆಗ ಪೈಕಿ 1,02,284 ಪುರುಷ, 1,03,151 ಮಹಿಳಾ ಹಾಗೂ ಇತರೆ 4 ಮತದಾರರಿದ್ದು, ಒಟ್ಟು 2,05,439 ಮತದಾರರಿದ್ದಾರೆ.
  • ಹಾಸನ ತಾಲೂಕಿನ 232 ಮತಗಟ್ಟೆಗಳಲ್ಲಿ 62,369 ಪುರುಷ, 61,120 ಮಹಿಳಾ ಮತ್ತು ಇತರೆ 5 ಮತದಾರರಿದ್ದು, 1,23,494 ಮತದಾರರಿದ್ದಾರೆ.
  • ಹೊಳೆನರಸೀಪುರದಲ್ಲಿ 235 ಮತಗಟ್ಟೆಗಳ ಪೈಕಿ 63827 ಪುರುಷ, 60090 ಮಹಿಳಾ ಮತದಾರರು ಮತ್ತು ಇತರೇ 1 ಸೇರಿ 123918 ಮತದಾರರಿದ್ದಾರೆ.
  • ಸಕಲೇಶಪುರದಲ್ಲಿ 153 ಮತಗಟ್ಟೆಗಳಿದ್ದು, 37401 ಪುರುಷ, 38,066 ಮಹಿಳೆಯರು ಸೇರಿ 75467 ಮತದಾರರಿದ್ದಾರೆ.
    ಇನ್ನು ಹಾಸನ ಜಿಲ್ಲೆಯಲ್ಲಿ ಒಟ್ಟಾರೆ 5,40,925 ಪುರುಷ ಮತದಾರರು, 5,29,600 ಮಹಿಳಾ ಮತದಾರರು ಹಾಗೂ ಇತರೆ 19 ಮತದಾರರು ಸೇರಿ 10,70,545 ಮತದಾರರು ಈ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.
    ಅವಧಿ ಮುಗಿಯದ 12 ಗ್ರಾಮ ಪಂಚಾಯತ್​ಗಳು:
    ಹಾಸನ ಜಿಲ್ಲೆಯ 267 ಗ್ರಾಮಪಂಚಾಯ್ತಿಗಳಲ್ಲಿ 245 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದ್ದು, 5 ವರ್ಷಗಳ ಅವಧಿ ಪೂರ್ಣಗೊಳ್ಳದೇ ಇರುವ 12 ಗ್ರಾಮ ಪಂಚಾಯಿತಿಗಳನ್ನ ನೋಡುವುದಾದ್ರೆ, ಹಾಸನ ತಾಲೂಕಿನ ಅಂಬುಗ, ಅಂಕಪುರ, ಚನ್ನಂಗಿಹಳ್ಳಿ, ಹನುಮಂತಪುರ, ಕಟ್ಟಾಯ ಪಂಚಾಯ್ತಿಗಳಿಗೆ ಈ ಬಾರಿ ಚುನಾವಣೆ ನಡೆಯುವುದಿಲ್ಲ. ಇನ್ನು ಸಕಲೇಶಪುರ ತಾಲೂಕಿನ ವಣಗೂರು, ಉಚ್ಚಂಗಿ, ಅರಸೀಕೆರೆಯ ನೇರ್ಲಿಗೆ, ಬಾಣಾವಾರ, ಆಲೂರು ತಾಲೂಕಿನ ಹಂಚೂರು, ಅರಕಲಗುಡು ತಾಲೂಕಿನ ಕೊಣನೂರು, ಚನ್ನರಾಯಪಟ್ಟಣದ ಶ್ರವಣಬೆಳಗೊಳ ಗ್ರಾಮಪಂಚಾಯ್ತಿಗಳಿಗೆ ಈ ಬಾರಿ ಚುನಾವಣೆ ನಡೆಯುವುದಿಲ್ಲ.
    ನಗರಸಭೆಗೆ ಸೇರಿದ 10 ಗ್ರಾಮ ಪಂಚಾಯತ್​ಗೆ ಚುನಾವಣೆಯಿಲ್ಲ:
    ಇನ್ನು ಸರ್ಕಾರ ಹಾಸನ ನಗರದ ಸುತ್ತಮುತ್ತಲಿನ 10 ಗ್ರಾಮ ಪಂಚಾಯ್ತಿಗಳನ್ನ ನಗರಪಾಲಿಕೆಗೆ ಸೇರ್ಪಡೆ ಮಾಡಿದ್ದರಿಂದ , ಬಿ.ಕಾಟೀಹಳ್ಳಿ, ಬೂವನಹಳ್ಳಿ, ಹರಳಹಳ್ಳಿ, ಕಂದಲಿ, ಹಂದಿನಕೆರೆ, ಮಣಚನಹಳ್ಳಿ, ಸತ್ಯಮಂಗಲ, ತಟ್ಟೆಕೆರೆ, ತೇಜೂರು, ಹೂವಿನಹಳ್ಳಿ ಕಾವಲು, ಮತ್ತು ದೊಡ್ಡಗೇಣಿಗೆರೆ ಪಂಚಾಯ್ತಿಗಳಿಗೆ ಈ ಬಾರಿ ಚುನಾವಣೆ ನಡೆಯುವುದಿಲ್ಲ.
    ಪಿಪಿಇ ಕಿಟ್​​ ಧರಿಸಿ ಮತದಾನಕ್ಕೆ ಅವಕಾಶ:
    ಈ ಬಾರಿ ಕೊವೀಡ್ -19 ಇರುವ ಕಾರಣ ಪಾಸಿಟಿವ್ ಇರುವ ಮತದಾರರು ಮತ ಚಲಾವಣೆ ಬಯಸಿದರೆ, ಪಿಪಿಇ ಕಿಟ್​​ ಧರಿಸಿ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಿದ್ದು, ಪ್ರತ್ಯೇಕ ವಾಹನದ ವ್ಯವಸ್ಥೆಯನ್ನ ಕೂಡಾ ಸರ್ಕಾರ ಮಾಡಿದೆ. ಇನ್ನು ಜಿಲ್ಲೆಯಲ್ಲಿ ಸರಿ ಸುಮಾರು 300 ಮಂದಿ ಕೊರೊನಾ ಸೋಂಕಿತರಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 200ರಷ್ಟು ಮಂದಿ ಮತ ಚಲಾವಣೆ ಮಾಡಬಹುದು ಎನ್ನುತ್ತಾರೆ ಜಿಲ್ಲಾಧಿಕಾರಿ ಗಿರೀಶ್​​.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.