ETV Bharat / state

ದೆಹಲಿಯಲ್ಲಿ ಅಡಗಿ ಕುಳಿತಿದ್ದ ಹಾಸನದ ನಟೋರಿಯಸ್ ರೌಡಿಶೀಟರ್ ಚೇತು ಅರೆಸ್ಟ್​ - ಹಾಸನ ಇತ್ತೀಚಿನ ಸುದ್ದಿ

ಹಾಸನ ಮೂಲದ ನಟೋರಿಯಸ್​ ರೌಡಿಶೀಟರ್ ಚೇತು ಅಲಿಯಾಸ್​ ಯಾಚೇನಹಳ್ಳಿ ಚೇತನ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

Hassan
ರೌಡಿ ಶೀಟರ್ ಚೇತು
author img

By

Published : Jul 25, 2021, 6:56 AM IST

Updated : Jul 25, 2021, 8:23 AM IST

ಹಾಸನ: ಮೇ 3ರಂದು ಜಿಲ್ಲೆಯಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ ಮತ್ತು ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಸನ ಮೂಲದ ನಟೋರಿಯಸ್​ ರೌಡಿಶೀಟರ್ ಚೇತು ಅಲಿಯಾಸ್​ ಯಾಚೇನಹಳ್ಳಿ ಚೇತನ್ ಎಂಬುವನನ್ನು ಜಿಲ್ಲಾ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ: ನಿವೃತ್ತ ಪ್ರಾಂಶುಪಾಲರ ಮಗನಾಗಿರುವ ಈತ 2007ರ ಸಂದರ್ಭದಲ್ಲಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಬಳಿಕ ಜಾಮೀನಿನ ಮೇಲೆ ಹೊರಬಂದು, ಮತ್ತಷ್ಟು ಅಪರಾಧ ಕೃತ್ಯಗಳನ್ನು ಎಸಗಿ ರೌಡಿಸಂ ಅಖಾಡಕ್ಕೆ ಧುಮುಕಿ ತಾಲೂಕಿನಲ್ಲಿ ಕೆಲವರನ್ನು ಹೆದರಿಸಿ, ಬೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ. ತನ್ನ ಶಿಷ್ಯ ಮಾಸ್ತಿ ಅಲಿಯಾಸ್​ ಮಾಸ್ತಿ ಗೌಡನೊಂದಿಗೆ ಜಗಳವಾಡಿಕೊಂಡು ಆತನನ್ನು ಕೊಲೆ ಮಾಡಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಚೇತುವಿನ ವಿರುದ್ಧ ಮಾಸ್ತಿಗೌಡ ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದ.

ಮಾಸ್ತಿಗ್ಯಾಂಗ್​​ನಿಂದ ಶೂಟೌಟ್ ಯತ್ನ: ಇದಾದ ಬಳಿಕ ಮಾಸ್ತಿ ಗ್ಯಾಂಗ್ ಚೇತುವನ್ನು ಮುಗಿಸಬೇಕೆಂದು ಸ್ಕೆಚ್ ಹಾಕಿದ್ದರು. ಆದ್ರೆ ಅದು ಸಾಧ್ಯವಾಗಿರಲಿಲ್ಲ. ಚೇತು 2 ವರ್ಷದ ಹಿಂದೆ ಜೆಡಿಎಸ್ ಕಾರ್ಯಕರ್ತ ಮತ್ತು ಸುಫಾರಿ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಕಿರಣ್ ಅಲಿಯಾಸ್​ ಬಾಂದು ಎಂಬಾತನನ್ನು ಕಿಡ್ನಾಪ್ ಮಾಡಿ ಆತನಿಂದ 5 ಲಕ್ಷ ರೂ. ಹಫ್ತಾ ವಸೂಲಿ ಮಾಡಿದ್ದ. ಹೀಗಾಗಿ ಚೇತುವನ್ನು ಮುಗಿಸಲು ಬಾಂದು ಮಾಸ್ತಿ ಗ್ಯಾಂಗ್​ಗೆ ಸುಫಾರಿ ನೀಡಿ ಮೇ 3 ರಂದು ಚನ್ನರಾಯಟಪ್ಟಣದ ಹೊರವಲಯದಲ್ಲಿನ ಹೊನ್ನಶೆಟ್ಟಿಹಳ್ಳಿ ಚರ್ಚ್ ಬಳಿ ಚೇತುವಿನ ಮೇಲೆ ಶೂಟೌಟ್​ ಮಾಡಿದ್ದರು. ಆದ್ರೆ ಚೇತುವಿನ ಕಾರು ಚಾಲಕನ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ.

Hassan
ಬಂಧನವಾಗಿರುವ ಮಾಸ್ತಿಗ್ಯಾಂಗ್​​
48 ಗಂಟೆಯಲ್ಲಿ ಮಾಸ್ತಿಗ್ಯಾಂಗ್ ಅರೆಸ್ಟ್ : ಈ ಪ್ರಕರಣದ ಬಳಿಕ ಪೊಲೀಸರ ಕೈಗೆ ಮಾಸ್ತಿ ಗ್ಯಾಂಗ್ ಸಿಕ್ಕಿಬಿದ್ದಿತ್ತು. ಈ ಗುಂಪಿನಲ್ಲಿದ್ದ ಹುಡುಗರ ಕೈಯಲ್ಲಿ ಬಂದೂಕು ನೋಡಿ ಇಡೀ ಚನ್ನರಾಯಪಟ್ಟಣದ ಜನರು ಮಾತ್ರವಲ್ಲದೆ, ಪೊಲೀಸರು ಸಹ ಬೆಚ್ಚಿಬಿದ್ದಿದ್ದರು. ರೌಡಿಸಂ ಮಟ್ಟಹಾಕದಿದ್ದರೇ ಮತ್ತಷ್ಟು ಕೊಲೆ ಪ್ರಕರಣಗಳು ಹೆಚ್ಚಾಗುತ್ತವೆ ಎಂಬ ಆತಂಕ ಕೂಡಾ ಅವರಿಗಿತ್ತು. ಹೇಗಾದ್ರು ಮಾಡಿ ಆತನನ್ನು ಹೆಡೆಮುರಿ ಕಟ್ಟಬೇಕೆಂದು ಅಂದುಕೊಂಡ ಪೊಲೀಸರು, ಕೊನೆಗೂ ಮೇ 6 ರಂದು ಮಾಸ್ತಿಗ್ಯಾಂಗ್​ನ 8 ಮಂದಿಯನ್ನು 48 ಗಂಟೆಗಳಲ್ಲಿ ಬಂಧಿಸಿ ಜೈಲಿಗಟ್ಟಿದರು. ಆದ್ರೆ ಚೇತು ಮಾತ್ರ ತಲೆಮರೆಸಿಕೊಂಡಿದ್ದ.
ಇಲಾಖೆಯ ಸಿಬ್ಬಂದಿಯಿಂದಲೇ ಮಾಹಿತಿ ಸೋರಿಕೆ: ಚೇತುವನ್ನು ಬಂಧಿಸಬೇಕೆಂದು ಹಾಸನದ ಎಸ್​ಪಿ ವಿಶೇಷ ತಂಡವನ್ನು ರಚಿಸಿದರು. ಆದರೆ ಆತನನ್ನು ಹಿಡಿಯುವ ಪ್ರಯತ್ನದಲ್ಲಿ ಚನ್ನರಾಯಪಟ್ಟಣದ ಪೊಲೀಸರು ವಿಫಲವಾಗಿದ್ದರು. ಜೊತೆಗೆ ಇಲಾಖೆಯ ಕೆಲವು ಪೊಲೀಸರು ಆತನೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯನ್ನು ಕಲೆ ಹಾಕಿದ ಎಸ್​ಪಿ ಆರ್.ಶ್ರೀನಿವಾಸ್ ಗೌಡ ಯಾರಿಗೂ ಅನುಮಾನಬಾರದಿರಲಿ ಎಂದು ಇಡೀ ಚನ್ನರಾಯಪಟ್ಟಣದ ನಗರ ಠಾಣೆಯ ಅಪರಾಧ ಸೇರಿದಂತೆ ಎಲ್ಲಾ ವಿಭಾಗದ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿದರು.
Hassan
ಪೊಲೀಸರ ವಿಶೇಷ ತಂಡ

ಗುರುಗ್ರಾಮ್​ನಲ್ಲಿ ಅಡಗಿದ್ದ ನಟೋರಿಯಸ್ ಚೇತು: ಪೊಲೀಸ್​ ಸಿಬ್ಬಂದಿ ವರ್ಗಾವಣೆಯಾದ ಬಳಿಕ ಕೇವಲ 2 ದಿನದಲ್ಲಿ ಚನ್ನರಾಯಪ್ಟಟಣದ ಇನ್​ಸ್ಪೆಕ್ಟರ್ ಸುಬ್ರಹ್ಮಣ್ಯ, ಅರಕಲಗೂಡು ಸಿಪಿಐ ಸತ್ಯನಾರಾಯಣ್, ಹೊಳೆನರಸೀಪುರ ಠಾಣೆಯ ಪಿಎಸ್ಐ ಅರುಣ್, ಹಿರೀಸಾವೆ ಪೊಲೀಸ್ ಠಾಣೆಯ ಪಿಎಸ್ಐ ಶ್ರೀನಿವಾಸ್, ಗೊರೂರು ಪೊಲೀಸ್ ಠಾಣೆಯ ಪಿಎಸ್ಐ ಸಾಗರ್ ಮತ್ತು ಹೊಳೆನರಸೀಪುರ ಪೊಲೀಸ್ ಸಿಬ್ಬಂದಿಯ ಮಂಜೇಗೌಡ ನೇತೃತ್ವದ ವಿಶೇಷ ತಂಡ ರಚಿಸಿದ ಎಸ್​ಪಿ ಆರ್. ಶ್ರೀನಿವಾಸ್ ಗೌಡ, ಚೇತು ಹೆಡೆಮುರಿ ಕಟ್ಟುವಂತೆ ಆದೇಶ ಮಾಡಿದರು. ಅದರಂತೆ ಕೇವಲ 24 ಗಂಟೆಯಲ್ಲಿ ಆತನ ಚಲನವಲನದ ಜಾಡು ಹಿಡಿದ ಪೊಲೀಸರು ಕೊನೆಗೂ ನವದೆಹಲಿ ಸಮೀಪದ ಗುರುಗ್ರಾಮ್​ ಪ್ರದೇಶದ ಖಾಸಗಿ ಪಿಜಿಯೊಂದರಲ್ಲಿ ಅಡಗಿ ಕುಳಿತಿದ್ದ ಚೇತುವನ್ನು ಬಂಧಿಸಿ ಶನಿವಾರ ಜೈಲಿಗಟ್ಟಿದ್ದಾರೆ. 16 ವರ್ಷಗಳಿಂದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚೇತುವನ್ನು ಬಂಧಿಸಿದ ಪೊಲೀಸ್ ತಂಡವನ್ನು ಎಸ್ಪಿ ಅಭಿನಂದಿಸಿದ್ದಾರೆ.

16 ವರ್ಷಗಳಿಂದ ಜಿಲ್ಲೆಯಲ್ಲಿ ತನ್ನ ಅಪರಾಧದ ಆಟಾಟೋಪಗಳನ್ನು ನಡೆಸಿದ್ದ ನಟೋರಿಯಸ್ ಚೇತುವನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಮತ್ತೊಬ್ಬ ನಟೋರಿಯಸ್ ರೌಡಿಶೀಟರ್ ಬರಗೂರು ವಿಜಿಯನ್ನು ಬಂಧಿಸಿದರೆ, ಹಾಸನ ಜಿಲ್ಲೆಯ ರೌಡಿಸಂ ಹಣೆಪಟ್ಟಿಯ ಕಳಂಕವನ್ನು ತೊಡೆದುಹಾಕಿದಂತಾಗುತ್ತದೆ ಎಂಬುದು ಇಲ್ಲಿನ ಜನರ ಮಾತಾಗಿದೆ.

Last Updated : Jul 25, 2021, 8:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.