ETV Bharat / state

ಹಾಸನ ಜಿಲ್ಲೆಯಲ್ಲಿಂದು 340 ಮಂದಿಗೆ ಸೋಂಕು

ಹಾಸನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಇಂದು ಒಟ್ಟು 340 ಹೊಸ ಪ್ರಕರಣಗಳು ದಾಖಲಾಗಿವೆ. ಇಂದು ಇಬ್ಬರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 211 ಆಗಿದೆ.

hassan kovid report
ಹಾಸನ ಜಿಲ್ಲೆಯಲ್ಲಿಂದು 340 ಮಂದಿಗೆ ಸೋಂಕು
author img

By

Published : Sep 4, 2020, 9:48 PM IST

ಹಾಸನ: ಜಿಲ್ಲೆಯಲ್ಲಿ ಕೊರೊನಾ ಏರಿಳಿತ ಮುಂದುವರೆದಿದ್ದು, ಇಂದು ಹೊಸದಾಗಿ 340 ಮಂದಿಗೆ ಸೋಂಕು ದೃಢಪಟ್ಟಿದೆ.

ಹಾಸನ ಜಿಲ್ಲೆಯಲ್ಲಿಂದು 340 ಮಂದಿಗೆ ಸೋಂಕು

ಸೋಂಕಿತರ ಪ್ರಮಾಣ ಇದೀಗ ಒಟ್ಟು 9366 ಕ್ಕೆ ಜಿಗಿದಿದೆ. ಇಂದು ಇಬ್ಬರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 211 ಕ್ಕೆ ಮುಟ್ಟಿದೆ! ಇಂದು ಗುಣಮುಖರಾಗಿ ಆಸ್ಪತ್ರೆಯಿಂದ 196 ಮಂದಿ ಬಿಡುಗಡೆಯಾಗಿದ್ದರೂ, ಸಕ್ರಿಯ ಸೋಂಕಿತರ ಸಂಖ್ಯೆ 3043 ಕ್ಕಿಂತ ಗುಣಮುಖರಾಗಿ ಬಿಡುಗಡೆಯಾದವರ 6112 ಸಂಖ್ಯೆಗೆ ಹೆಚ್ಚಾಗಿರುವುದು ಕೊಂಚ ಸಮಾಧಾನ ತಂದಿದೆ.

ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಾಂತರಾಜು ಈ ಮಾಹಿತಿ ನೀಡಿದ್ದು, ಶುಕ್ರವಾರ ಹಾಸನ ಹಾಗೂ ಚನ್ನರಾಯಪಟ್ಟಣ ತಾಲೂ ಕಿನಲ್ಲಿ ತಲಾ ಒಬ್ಬರಂತೆ ಒಟ್ಟಾರೆ ಇಬ್ಬರು ರೋಗಿಗಳು ನಗರದ ‘ಹಿಮ್ಸ್’ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಇವರು ಜ್ವರ ಹಾಗೂ ಸಾಮಾನ್ಯ ಉಸಿರಾಟದ ತೊಂದರೆಯಿಂದ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ವಿವರಿಸಿದರು.

ಹಾಸನ ತಾಲೂಕಿನಲ್ಲಿ ಸಾವುಗಳ ಸಂಖ್ಯೆ 81 ಕ್ಕೆ ಏರಿದ್ದು, ಇಂದು ಅತ್ಯಧಿಕ 129 ಸೋಂಕಿತರೂ ಸೇರಿ ಒಟ್ಟು 3917 ಪ್ರಕರಣಗಳಿಗೆ ಏರಿದಂತಾಗಿದೆ. ಅದೇ ರೀತಿ ಇಂದು ತಾಲೂಕಿನಲ್ಲಿ 79 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಆಸ್ಪತ್ರೆಯಿಂದ 2463 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ತಾಲೂಕಿನಲ್ಲಿ 1373 ಸಕ್ರಿಯ ಸೋಂಕಿತರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಇಂದು 196 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟಾರೆ 6112 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಂತಾಗಿದೆ. ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಇರುವ 51 ಮಂದಿ ಸೇರಿದಂತೆ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ ಇದೀಗ 3043 ಕ್ಕೆ ಏರಿದೆ.

ಹೊಸದಾಗಿ ಇಂದು ಪತ್ತೆಯಾದ 340 ಪ್ರಕರಣಗಳಲ್ಲಿ ಹಾಸನ ಬಿಟ್ಟು ಉಳಿದ ತಾಲೂಕುವಾರು ವಿವರ ಇಂತಿದೆ:

ಆಲೂರು-8, ಅರಕಲಗೂಡು-43, ಅರಸೀಕೆರೆ-44, ಬೇಲೂರು-19, ಚನ್ನರಾಯಪಟ್ಟಣ-51, ಹೊಳೆನರಸೀಪುರ-32 ಹಾಗೂ ಸಕಲೇಶಪುರ ತಾಲೂಕು-14 .

ETV Bharat Logo

Copyright © 2024 Ushodaya Enterprises Pvt. Ltd., All Rights Reserved.