ಹಾಸನ: ರೈತರು ಪ್ರತಿಭಟನೆಯನ್ನು ಹಿಂಪಡೆಯುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನ್ನದಾತರಿಗೆ ಜಯವಾಗಲಿ ಎನ್ನುವ ಮೂಲಕ ಘೋಷಣೆ ಕೂಗಿ ಪ್ರತಿಭಟನಾಕಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.
ರೈತರು ಪ್ರತಿಭಟನೆ ಹಿಂಪಡೆಯುವಂತೆ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮನವೊಲಿಸುವ ವೇಳೆ ತಮ್ಮ ಪೊಲೀಸ್ ಸಿಬ್ಬಂದಿಗೆ ರೈತರಿಗೆ ಜೈಕಾರ ಹಾಕಿ ಪ್ರತಿಭಟನೆ ಕೈಬಿಡಲು ಆದೇಶ ಮಾಡಿದರು. ಜೊತೆಗೆ ಸ್ವತಃ ಎಸ್ಪಿಯವರೆ ಅನ್ನದಾತರಿಗೆ ಜಯವಾಗಲಿ ಎಂದು ಘೋಷಣೆ ಕೂಗಿ ಪ್ರತಿಭಟನಾ ನಿರತ ರೈತರ ಮನವೊಲಿಸಿದರು.
ಇಂದು ಬೆಳಗ್ಗೆ 11 ಗಂಟೆಯಿಂದ ಪ್ರಾರಂಭವಾದ ರೈತರ ಪ್ರತಿಭಟನೆ ಸಂಜೆ 4 ಗಂಟೆಯ ತನಕ ನಿರಂತರವಾಗಿ ನಡೆಯುವ ಮೂಲಕ ಹಾಸನದಲ್ಲಿ ಭಾಗಶಃ ಬಂದ್ ಯಶಸ್ವಿಯಾಯಿತು ಎನ್ನಬಹುದು.
ಆದರೆ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗುತ್ತೆ ಎನ್ನುವ ಕಾರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ರೈತರನ್ನು ಮನವೊಲಿಸುವ ವೇಳೆ ನಾನು ರೈತನ ಮಗನೇ. ಹಾಗಾಗಿ ನಿಮ್ಮ ಪ್ರತಿಭಟನೆಗೆ ನಮ್ಮ ಸಹಕಾರವೂ ಇತ್ತು ಎಂದು ಘೋಷಣೆ ಕೂಗಿ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡಿದರು.