ಹಾಸನ: ಕಾಂಗ್ರೆಸ್ ಪಕ್ಷವು ಕೊಳ್ಳೆ ಹೊಡೆಯುವುದನ್ನು ತಪ್ಪಿಸಲು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದೊಳಗೆ 28ಕ್ಕೆ 28 ಸೀಟು ಮೈತ್ರಿ ಪಕ್ಷ ಗೆಲ್ಲಲಿದ್ದು, ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ವೀರಪ್ಪ ಮೊಯ್ಲಿ ದೇವೇಗೌಡರ ಕುಟುಂಬದ ಬಗ್ಗೆ ಸುಳ್ಳು ಹೇಳುವುದನ್ನು ಮೊದಲು ಬಿಡಲಿ. ಕಾನೂನು ಚೌಕಟ್ಟನ್ನು ಪಾಲಿಸಲಿ. ಕಾವೇರಿ ನದಿ ನೀರು ಉಳಿಸಲು ಹೋರಾಟ ಮಾಡಿದ್ದಾರೆ ಎಂದು ಸುಳ್ಳು ಹೇಳುಕೊಂಡು ತಿರುಗುವ ಬದಲು ಕಾವೇರಿ ನದಿ ನೀರಾವರಿ ವೇದಿಕೆಯಲ್ಲಿ ಮಾತನಾಡಲಿ ಎಂದು ಹೆಚ್.ಡಿ.ಕೆ.ಮೊಯ್ಲಿ ವಿರುದ್ದ ಗರಂ ಆದರು.
ಎರಡೂ ವರ್ಷ ಮುಖ್ಯಮಂತ್ರಿಯಾಗಿದ್ದಾಗ, ನಿಮ್ಮ ಶಾಸಕರು ವಿಧಾನಸೌಧದಲ್ಲಿ ಓಡಿಸಿಕೊಂಡು ಬಂದಿದ್ದು ನಿಮ್ಮ ಸಾಧನೆ. ನೀರಾವರಿ ವಿಷಯದಲ್ಲಿ ನೀವು ಏನೇ ಮಾತನಾಡುವುದಿದ್ದರೂ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲೆಸಿದ ಹೆಚ್ಡಿಕೆ, ಜೆಡಿಎಸ್ ಪಕ್ಷವು ಸುಪ್ರೀಂ ಕೋರ್ಟ್ ತೀರ್ಪು ನೀಡುವರೆಗೂ ನೀರು ಬಿಡದಂತೆ ಬೆಂಬಲಿಸುತ್ತೇವೆ. ತಮಿಳುನಾಡಿನ ಸದದ್ಯ ಪರಿಸ್ಥಿತಿ ಬಗ್ಗೆ ವಿಡಿಯೋ ಮಾಡಿ ಸುಪ್ರೀಂ ಕೋರ್ಟ್‌ಗೆ ವಸ್ತುಸ್ಥಿತಿ ತಿಳಿಸಲಿ. ಎಸ್.ಎಂ. ಕೃಷ್ಣ ಅವರಿಗೆ ಅಧಿಕಾರ ನೀಡಿದ್ದಿರಿ. ಕುಮಾರಸ್ವಾಮಿ ಅವರಿಗೆ ಅಧಿಕಾರ ನೀಡಿದ್ದಿರಿ. ನನಗೆ ಪೇಪರ್ ಪೆನ್ನು ಕೊಡಿ ಅಂದ ವ್ಯಕ್ತಿ ಅಧಿಕಾರ ಪಡೆದು ಕೊಂಡಿರುವುದು ತಮಿಳುನಾಡಿಗೆ ನೀರು ಬಿಡುವುದಕ್ಕೆ ಅಲ್ಲ ಎಂದು ಗರಂ ಆದರು.
ಜೆಡಿಎಸ್-ಬಿಜೆಪಿ ಮೈತ್ರಿಗೆ ಯಾವುದೇ ಸಮಸ್ಯೆ ಇಲ್ಲ. ಸದ್ಯದಲ್ಲೇ ದೆಹಲಿಗೆ ಹೋಗಿ ಸಭೆಯಲ್ಲಿ ಭಾಗವಹಿಸುತ್ತೇವೆ. ಸಿದ್ದರಾಮಯ್ಯ 2004ರಲ್ಲಿ ನಾನು ಮುಖ್ಯಮಂತ್ರಿ ಆಗಲ್ಲ ಎಂದು ಯಾವಾವ ಬಿಜೆಪಿ ನಾಯಕನ ಸಂಪರ್ಕ ಮಾಡಿದ್ರಲ್ಲ ಎಲ್ಲವೂ ಗೊತ್ತಿದೆ. ದೇವೇಗೌಡರು ಜಾತ್ಯತೀತತೆ ಬಗ್ಗೆ ಮಾತನಾಡುತ್ತಾರಲ್ಲ, ಇದೇ ಸಿದ್ದರಾಮಯ್ಯ, ಮಹಾದೇವಪ್ಪ, ಸತೀಶ್ ಜಾರಕಿಹೋಳಿ, ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಸಚಿವರಾಗಲು ಹೋಗಿದ್ದವರು. ಈಗ ಸಿದ್ದಾಂತದ ಬಗ್ಗೆ ಮಾತನಾಡುತ್ತಾರೆ ಎಂದರು.
ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ಎದುರಿಸುವ ಶಕ್ತಿ ನನಗಿದೆ. ಆದರೆ, ಅವರಂತೆ ದಿನಕ್ಕೆ 25 ಬಾರಿ ಮಾತನಾಡುವ ಹುಚ್ಚು ನನಗಿಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೆಚ್ಡಿಕೆಗೆ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಅವರು ದಿನಕ್ಕೆ 25 ಬಾರಿ ಮಾತಾಡುತ್ತಾರೆ, ಅವರು ಮಾತಿನ ದಾಳಿ ಮಾಡಿದರೆ ಎದುರಿಸುವ ಶಕ್ತಿ ನನಗಿದೆ, ಆದರೆ ಅವರಿಗೆ ಪದೇ ಪದೆ ಮಾತನಾಡುವ ಹುಚ್ಚು ಇದೆ. ನನಗೆ ಆ ಹುಚ್ಚು ಇಲ್ಲ. ನಾನು ಎರಡು ಬಾರಿ ಗೆದ್ದಿದ್ದೇನೆ ಎಂದು ಕವಿ ಸರ್ವೋತ್ತಮ, ಮಹಾಕವಿ, ಕುವೆಂಪು ಅವರಿಗೂ ಮಹಾನ್ ಕವಿ, ರಾಮಾಯಣ ಮಾಹಾನ್ವೇಷಣೆ ಮಾಡಿ ಮಹಾಕಾವ್ಯ ಬರೆದ ಮಹಾನುಭಾವ, ಸರಸ್ವತಿ ಸಮ್ಮಾನ ಪುರಸ್ಕಾರ ಪಡೆದ ಸರಸ್ವತಿ ಪುತ್ರರು, ಇಂತಹ ಸರಸ್ವತಿ ಪುತ್ರನ ಬಾಯಿಂದ ಸುಳ್ಳು ಬರಬಹುದೇ ಎಂದು ಮಾಜಿ ಸಿಎಂ ಎಚ್ಡಿಕೆ ನೀಡಿದ್ದ ಹೇಳಿಕೆಗೆ ವೀರಪ್ಪ ಮೋಯ್ಲಿ ತಿರುಗೇಟು ನೀಡಿದರು.
ಇದನ್ನೂ ಓದಿ: ಸಚಿವ ಡಿ ಸುಧಾಕರ್ ರಾಜೀನಾಮೆ ಒತ್ತಾಯ : ಕಾನೂನು ಕ್ರಮಕ್ಕೆ ಬಿ ವೈ ವಿಜಯೇಂದ್ರ ಆಗ್ರಹ