ಅರಕಲಗೂಡು (ಹಾಸನ): ಜೀತ ವಿಮುಕ್ತ ದಲಿತರು ಉಳುಮೆ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆಯವರು ತಮ್ಮ ಇಲಾಖೆಗೆ ಸೇರಿದ ಭೂಮಿ ಎಂದು ವಶಪಡಿಸಿಕೊಳ್ಳಲು ಮುಂದಾದಾಗ ಗಲಾಟೆ ನಡೆದಿದೆ.
ಗಲಾಟೆ ಏಕೆ?
ಜೀತ ವಿಮುಕ್ತ ದಲಿತರಿಗೆ ಜಮೀನು ನೀಡಿಲ್ಲ. ಕಳೆದ 5 ದಶಕದಿಂದ ನಾವು ಇಲ್ಲಿ ಕೃಷಿ ಮಾಡಿಕೊಂಡಿದ್ದೇವೆ. 24 ಮಂದಿಗೆ ದಾಖಲಾತಿ ಇದ್ದು ಉಳಿದ 19 ಮಂದಿಗೆ ದಾಖಲಾತಿ ಇಲ್ಲ. ಹೀಗಾಗಿ ನಮ್ಮ ಜಮೀನು ವಶಪಡಿಸಿಕೊಳ್ಳೋಕೆ ಅರಣ್ಯ ಇಲಾಖೆಯವರು ಮುಂದಾಗಿದ್ದಾರೆ. ಒಂದು ವೇಳೆ ಬಲವಂತವಾಗಿ ನಮ್ಮಿಂದ ಭೂಮಿ ಕಸಿದುಕೊಂಡ್ರೆ ವಿಷ ಸೇವನೆಗೂ ಸಿದ್ಧ ಅಂತ ಇಲ್ಲಿನ ಜೀತ ವಿಮುಕ್ತ ದಲಿತರು ಅರಣ್ಯ ಇಲಾಖೆಯವರು ಗಲಾಟೆ ಮಾಡಿ ತೆರವಿಗೆ ಬಂದ ಜೆಸಿಬಿಗಳನ್ನು ತಡೆದು ನಿಲ್ಲಿಸಿದ್ದಾರೆ.
ಅರಕಲಗೂಡಿನ ರಾಮನಾಥಪುರ ಹೋಬಳಿಯ ಗೊಬ್ಬಳಿ ಗ್ರಾಮದಲ್ಲಿ ಹಲವು ವರ್ಷದಿಂದ ಈ ಸಮಸ್ಯೆ ಉದ್ಭವವಾಗಿದೆ.
ಸಚಿವ ಕೆ.ಗೋಪಾಲಯ್ಯ ಭರವಸೆ
ಈ ಬಗ್ಗೆ ಹಾಸನ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸೋದಾಗಿ ತಿಳಿಸಿದ್ದಾರೆ.