ಹಾಸನ: ಕೊರೊನಾ ಹಿನ್ನಲೆಯಲ್ಲಿ ಗ್ರಾಮೀಣಾ ಭಾಗದ ಜನರ ಬದುಕು ಮೂರಾ ಬಟ್ಟೆಯಾಗುತ್ತಿದೆ. ಕಬ್ಬು ಬೆಳಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಕೆಲವು ಕಬ್ಬು ಬೆಳೆಗಾರರು ಕಬ್ಬು ಬೆಳೆದು ಕಟಾವು ಮಾಡಲು ಸಾಧ್ಯವಾಗದೇ ಸಾಲದ ಸುಳಿಯಲ್ಲಿ ಸಿಲುಕುವ ಸಂಕಷ್ಟ ಎದುರಾಗಿದೆ.
ಚನ್ನರಾಯಪಟ್ಟಣ, ಹೊಳೆನರಸೀಪುರ ಭಾಗದಲ್ಲಿ ಕಬ್ಬು ಬೆಳೆದ ಬೆಳೆಗಾರರು ಈಗ ಚಿಂತೆಗೀಡಾಗಿದ್ದಾರೆ. ಬೆಳೆದ ಕಬ್ಬು ಕಟಾವು ಮಾಡಲಾಗದೇ ಒಣಗುವ ಸ್ಥಿತಿ ತಲುಪಿದೆ. ಹೀಗಾಗಿ ಹಾಸನದ ಹೊಳೆನರಸೀಪುರದ ತಹಶೀಲ್ದಾರ್ ಕಛೇರಿಯ ಆವರಣದಲ್ಲಿ ಕೆಲವು ಕಬ್ಬು ಬೆಳೆಗಾರರು ಟ್ರ್ಯಾಕ್ಟರ್ನಲ್ಲಿ ಕಬ್ಬು ತಂದು ಮೂಲಕ ಸಾಂಕೇತಿಕವಾಗಿ ಕಬ್ಬು ತಂದು ಕಚೇರಿ ಆವರಣದಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರೇವಣ್ಣ ಕೂಡಾ ಆಗಮಿಸಿ ರೈತರ ಪರವಾಗಿ ಇರುವುದಾಗಿ ಭರವಸೆ ನೀಡಿದ್ದು, ಕೊರೊನಾದಿಂದ ಯಾರು ಅನಗತ್ಯವಾಗಿ ಚಿಂತೆಗೀಡಾಗುವುದು ಬೇಡ. ಇದ್ರ ಬಗ್ಗೆ ನಾನು ಕೃಷಿ ಸಚಿವರೊಂದಿಗೆ ಚರ್ಚೆ ಮಾಡಿ ಪರಿಹಾರ ಕೊಡಿಸುವ ಭರವಸೆ ನೀಡಿದರು. ಇದರ ಬಳಿಕ ರೈತರು ತಮ್ಮ ಮನವಿಯನ್ನ ತಹಶೀಲ್ದಾರ್ಗೆ ನೀಡುವ ಮೂಲಕ ಪ್ರತಿಭಟನೆಯನ್ನ ಹಿಂಪಡೆದರು.
ಕಬ್ಬು ಬೆಳೆಗಾರರಿಗೆ ಎಕರೆಗೆ 1 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು ಎಂದು ಜಿಲ್ಲೆಗೆ ಆಗಮಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಲ್ಲಿ ಎಚ್.ಡಿ.ರೇವಣ್ಣ ಮನವಿ ಮಾಡಿದ್ದು, ಇದರ ಬಗ್ಗೆ ನಾನು ಸಚಿವ ಸಂಪುಟದಲ್ಲಿ ಚರ್ಚಿಸಿ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.