ಹಾಸನ: ಮಾರಕಾಸ್ತ್ರಗಳನ್ನು ತೋರಿಸಿ ಅರ್ಧ ಕೋಟಿಗೂ ಅಧಿಕ ಹಣವನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚನ್ನರಾಯಪಟ್ಟಣದ ಆದರ್ಶ (27), ದಿವಾಕರ (24), ಮಂಜುನಾಥ್ (23) ಮತ್ತು ಶಿವಮೊಗ್ಗ ಮೂಲದ ವಸಂತ (20) ಬಂಧಿತ ಆರೋಪಿಗಳು. ಮಾ. 18ರಂದು ಚನ್ನರಾಯಪಟ್ಟಣದ ಬೆಲಸಿಂದ ಪಾರ್ಕ್ ಬಳಿ ಲಾಂಗ್ ತೋರಿಸಿ ಹಣ ದೋಚಿದ್ದರು. ಈ ಸಂಬಂಧ ಕಂಪನಿ ನೌಕರ ಆದರ್ಶ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.
ನುಗ್ಗೇಹಳ್ಳಿ ಬಸ್ ನಿಲ್ದಾಣದ ಬಳಿ ಆರೋಪಿ ದಿವಾಕರ್ ಇರುವ ಮಾಹಿತಿ ಕಲೆಹಾಕಿದ ಪೊಲೀಸರು ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣ ಕಳೆದುಕೊಂಡವನೇ ಪ್ರಕರಣದ ಸೂತ್ರಧಾರ ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದ್ದು, ಐಷಾರಮಿ ಜೀವನಕ್ಕಾಗಿ ಇಂತಹ ಕೃತ್ಯ ಮಾಡಿರುವುದಾಗಿ ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಎಸ್ಪಿ ಶ್ರೀನಿವಾಸಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಲಕ್ಷ್ಮೇಗೌಡ, ಸಿಪಿಐ ಕುಮಾರ್ ಮತ್ತು ಪಿಎಸ್ಐ ಕಿರಣ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ಆರೋಪಿಗಳ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಸಿಬ್ಬಂದಿಗೆ ಶ್ಲಾಘಿಸಿದ್ರು. ಇನ್ನು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.