ETV Bharat / state

ಮಲೆನಾಡಿನೆಲ್ಲೆಡೆ ಮಳೆ ಅಬ್ಬರ: ರೈತರಿಗೆ ಶುರುವಾಯ್ತು ಆತಂಕ - ಮುಳುಗಡೆಯ ಭೀತಿಯಲ್ಲಿ ಹೊಳೆ ಮಲ್ಲೇಶ್ವರ ದೇವಾಲಯ

ಪಶ್ಚಿಮಘಟ್ಟದಲ್ಲಿ ನಿರಂತರವಾಗಿ ಸುರಿಯುತ್ತಿರುವ ವರುಣನ ಆರ್ಭಟದಿಂದಾಗಿ ಮಲೆನಾಡಿನ ರೈತರಿಗೆ ಆತಂಕ ಶುರುವಾಗಿದೆ. ಈಗಾಗಲೇ ಭೋರ್ಗರೆದು ಹರಿಯುತ್ತಿರುವ ನೀರಿನಿಂದ ಭತ್ತ, ಶುಂಠಿ, ಬಾಳೆ, ಕಾಫಿ, ಮೆಣಸು ಸೇರಿದಂತೆ ಹಲವು ಫಸಲುಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಮಲೆನಾಡಿನೆಲ್ಲೆಡೆ ಬಿಟ್ಟುಬಿಡದೇ ಸುರಿಯುತ್ತಿರುವ ವರುಣ
author img

By

Published : Aug 7, 2019, 8:58 PM IST

ಹಾಸನ: ಪಶ್ಚಿಮ ಘಟ್ಟದಲ್ಲಿ ಅಬ್ಬರಿಸುತ್ತಿರುವ ಮಳೆಯಿಂದ ಸಕಲೇಶಪುರ ಮತ್ತು ಆಲೂರು ತಾಲೂಕಿನಲ್ಲಿ ರೈತರು ಕಂಗಾಲಾಗಿದ್ದಾರೆ. ಧಾರಾಕಾರ ಮಳೆಗೆ ರೈತರು ಬೆಳೆಗಳು ನೆಲಕಚ್ಚಿದ್ದು, ಭೋರ್ಗರೆದು ಹರಿಯುತ್ತಿರುವ ನೀರಿನಿಂದ ಭತ್ತ, ಶುಂಠಿ, ಬಾಳೆ, ಕಾಫಿ, ಮೆಣಸು ಸೇರಿದಂತೆ ಹಲವು ಫಸಲುಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಇನ್ನು ಸತತವಾಗಿ ಸುರಿಯುತ್ತಿರುವ, ಮಳೆಯಿಂದ ಸಕಲೇಶಪುರದ ಹಾನುಬಾಳು, ಜಂಬರಡಿ, ಬಿಜ್ಜಳ್ಳಿ, ಚಾಗಟ್ಟ, ರಾಗಿಗುಂಟೆ, ಚಿನ್ನಿಕೋಲು ಮುಂತಾದ ಗ್ರಾಮದಲ್ಲಿ ಹಲವು ಮನೆಗಳು ಕುಸಿದಿವೆ. ಹಾಗಾಗಿ ಭಯದ ನಡುವೆಯೇ ದಿನ ದೂಡುವಂತಾಗಿದೆ. ಇನ್ನು ಈ ಭಾಗದಲ್ಲಿ ಜಿಲ್ಲಾಡಳಿತದಿಂದ ರಕ್ಷಣಾ ಕಾರ್ಯಕ್ಕೆ ವಿಶೇಷ ತಂಡ ರಚಿಸಿದ್ದು, ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಮಲೆನಾಡಿನೆಲ್ಲೆಡೆ ಬಿಟ್ಟುಬಿಡದೇ ಸುರಿಯುತ್ತಿರುವ ವರುಣ

ಮಹಾಮಳೆಗೆ ಜಲಾವೃತವಾಯ್ತು ಸಕಲೇಶಪುರ...!

ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಹೇಮಾವತಿ ನದಿಯಲ್ಲಿ ಸುಮಾರು 29 ಸಾವಿರ ಕ್ಯೂಸೆಕ್​ ನೀರು ಹರಿಯುತ್ತಿದ್ದು, ಹವಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಈಗಾಗಲೇ ಆದೇಶ ಹೊರಡಿಸಿದ್ದಾರೆ.

ಮುಳುಗಡೆಯ ಭೀತಿಯಲ್ಲಿ ಹೊಳೆ ಮಲ್ಲೇಶ್ವರ ದೇವಾಲಯ..!

ಸಕಲೇಶಪುರದ ಪಟ್ಟಣದ ಹೇಮಾವತಿ ಸೇತುವೆ ಬಳಿ ಪಕ್ಕದಲ್ಲಿ ಹೊಳೆ ಮಲ್ಲೇಶ್ವರ ದೇವಾಲಯವಿದ್ದು, ಮಂಗಳವಾರ 19 ಸಾವಿರ ಕ್ಯೂಸೆಕ್​ ನೀರು ಹರಿದಿದ್ದರಿಂದ ದೇವಾಲಯದ ಪ್ರಾಂಗಣಕ್ಕೆ ನೀರು ತಲುಪಿತತ್ತು. ಇಂದು ಕೂಡ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಹೊಳೆಮಲ್ಲೇಶ್ವರ ದೇವಾಲಯದ ಅರ್ಧಭಾಗ ನೀರಿನಲ್ಲಿ ಮುಳುಗಿದೆ. ಇನ್ನೆರಡು ದಿನ ಮಳೆಯ ಪ್ರಮಾಣ ಹೆಚ್ಚಾದ್ರೆ ದೇವಾಲಯ ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆಯಿದೆ.

ಕಣ್ಣುಹಾಯಿಸಿದಷ್ಟು ನೀರು... ಜಲಾವೃತವಾಯ್ತು ಮಲೆನಾಡು..!

ಆಶ್ಲೇಷ ಮಳೆ ಪ್ರಾರಂಭವಾದ ಮಾರನೇ ದಿನದಿಂದ ಜಿಲ್ಲೆಯಲ್ಲಿ ವರುಣನ ರೌದ್ರನರ್ತನ ನಿಂತಿಲ್ಲ. ದಿನದಿಂದ ದಿನಕ್ಕೆ ಮಳೆ ಆರ್ಭಟ ಹೆಚ್ಚಾಗುತ್ತಿದ್ದು, ಸಕಲೇಶಪುರ ಪಟ್ಟಣದ ಕೆಲವು ಬಡಾವಣೆ ಸೇರಿದಂತೆ ಹೊರವಲಯದ ಪ್ರದೇಶಗಳು ಜಲಾವೃತವಾಗಿವೆ. ದಿನನಿತ್ಯದ ಗೃಹಬಳಕೆ ವಸ್ತುಗಳನ್ನ ಸಹ ಖರೀದಿಸಲಾಗದ ಪರಿಸ್ಥಿತಿಯಿದ್ದು, ಜನರು ದಿಕ್ಕು ತೋಚದಂತಾಗಿದ್ದಾರೆ.

Intro:ಹಾಸನ: ಮಳೆ....ಮಳೆ....ಮಳೆ... ಮೂರುದಿನದಿಂದ ಸುರಿಯುತ್ತಿರುವ ಭರ್ಜರಿ ಮಳೆಗೆ ಜಿಲ್ಲೆಯ ಜನ ಪುಲ್ ಖುಷ್ ಆಗಿದ್ರೆ, ಈ ಭಾಗದ ಜನ್ರು ಮಾತ್ರ ಮಳೆರಾಯನಿಗೆ ಇಡೀ ಶಾಪವಾಕ್ತಿದ್ದಾರೆ.

ಹೌದು...ಮೂರು ದಿನಗಳಿಂದ ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಮಳೆಯಿಂದ ಮಲೆನಾಡು ಭಾಗವಾದ ಸಕಲೇಶಪುರ ಮತ್ತು ಆಲೂರು ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ರೈತಾಪಿ ವರ್ಗ ಕಂಗಾಲಾಗಿದ್ದಾರೆ. ಕೈಗೆ ಬಂದು ಬಾಯಿಗೆ ಬರುವಷ್ಟರಲ್ಲಿ ಮಳೆ ಎಲ್ಲವನ್ನ ಮಣ್ಣುಪಾಲು ಮಾಡಿದ್ದಾನೆ.

20 ಲಕ್ಷಕ್ಕೂ ಅಧಿಕ ಬೆಳೆ ನಷ್ಟ.

ಧಾರಾಕಾರ ಮಳೆಗೆ ರೈತರು ಬೆಳೆಗಳು ಫಸಲು ನೆಲಕಚ್ಚಿದ್ದು, ಬೋರ್ಗರೆದು ಹರಿಯುತ್ತಿರುವ ನೀರಿನಿಂದ ಭತ್ತ, ಶುಂಠಿ, ಬಾಳೆ, ಕಾಫಿ, ಮೆಣಸು ಸೇರಿದಂತೆ ಹಲವು ಫಸಲುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇನ್ನು ಸತತವಾಗಿ ಸುರಿಯುತ್ತಿರುವ, ಮಳೆಯಿಂದ ಸಕಲೇಶಪುರದ ಹಾನುಬಾಳು, ಜಂಬರಡಿ, ಬಿಜ್ಜಳ್ಳಿ, ಚಾಗಟ್ಟ, ರಾಗಿಗುಂಟೆ, ಚಿನ್ನಿಕೋಲು ಮುಂತಾದ ಗ್ರಾಮದಲ್ಲಿ ಹಲವು ಮನೆಗಳು ಕುಸಿತ ಉಂಟಾಗಿದ್ದು, ಭಯದ ನಡುವೆಯೇ ದಿನದೂಡು ವಂತಾಗಿದೆ.

ಇನ್ನು ಈ ಭಾಗದಲ್ಲಿ ಜಿಲ್ಲಾಡಳಿತದಿಂದ ರಕ್ಷಣಾ ಕಾರ್ಯಕ್ಕೆ ವಿಶೇಷ ತಂಡ ರಚಿಸಿದ್ದು, ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ಒಟ್ಟಾರೆ... ಇಂದು ಕೂಡ ಮಳೆಯ ಆರ್ಭಟ ಜೋರಾಗಿದ್ದು ಇನ್ನು ಎಷ್ಟು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.