ETV Bharat / state

ವರ್ಗ ಸೃಷ್ಠಿ ಎಂಬುದು ಜಾತಿ ಸೃಷ್ಠಿಗಿಂತ ಅಪಾಯಕಾರಿ;  ಸಚಿವ ಮಾಧುಸ್ವಾಮಿ - ಪಾರ್ಲಿಮೆಂಟ್ ಚುನಾವಣೆ

ಮಠಗಳು ಯಾವ ಹಣದ ಹಿಂದೆ ಹೋಗಬಾರದು, ವರ್ಗ ಸೃಷ್ಠಿ ಎಂಬುದು ಜಾತಿ ಸೃಷ್ಠಿಗಿಂತ ಅಪಾಯಕಾರಿಯಾಗಿದೆ ಎಂದು ವೀರಶೈವ-ಲಿಂಗಾಯಿತರಿಗೆ ಸಚಿವ ಮಾಧುಸ್ವಾಮಿ ಸಲಹೆ ನೀಡಿದ್ದಾರೆ.

ಮಾಧುಸ್ವಾಮಿ
author img

By

Published : Sep 13, 2019, 5:01 AM IST

ಹಾಸನ; ಮಠಗಳು ಯಾವ ಹಣದ ಹಿಂದೆ ಹೋಗಬಾರದು ಮತ್ತು ವರ್ಗ ಸೃಷ್ಠಿ ಎಂಬುದು ಜಾತಿ ಸೃಷ್ಠಿಗಿಂತ ಅಪಾಯಕಾರಿಯಾಗಿದೆ ಎಂದು ವೀರಶೈವ-ಲಿಂಗಾಯಿತರಿಗೆ ಸಚಿವ ಮಾಧುಸ್ವಾಮಿ ಸಲಹೆ ನೀಡಿದ್ದಾರೆ.

ನಗರದ ಅರಳೇಪೇಟೆ ಬಳಿ ಇರುವ ಶ್ರೀ ಬಸವೇಶ್ವರ ಕಲ್ಯಾಣ ಮಂದಿರದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಮನೆಯಲ್ಲಿ ಬೇಸರವಾದರೇ ಮಠಕ್ಕೆ ಹೋಗುತ್ತಾರೆ. ಮಠ ಮತ್ತು ಮನೆ ಎರಡನ್ನು ನೆನೆಪಿಟ್ಟುಕೊಳ್ಳಬೇಕು ಎಂದರು. ಮಠ ಯಾರ ಸ್ವಂತ ಸ್ವತ್ತಲ್ಲ. ಮಠದ ಧರ್ಮಕ್ಕೆ ಬೆನ್ನಲುಬಾಗಿ ನಾವುಗಳು ನಿಲ್ಲಬೇಕು ಎಂದರು.

ಮಾಧುಸ್ವಾಮಿ ಮಾತನಾಡಿದ್ದಾರೆ

ವೀರಶೈವ-ಲಿಂಗಾಯಿತ ಎಂದು ಮಾತನಾಡುವ ಅಧಿಕಾರ ನಮಗೆ ಕೊಟ್ಟಿಲ್ಲ. ಅದು ಧರ್ಮವಾಗಿದ್ದು, ಜಾತಿ ಅಲ್ಲವೇ ಅಲ್ಲ. ಯಾರಾದರೂ ನಾನು ಶ್ರೇಷ್ಟ ಎಂದು ಜಾತಿ ಬಗ್ಗೆ ಮಾತನಾಡಿದರೇ ಆತನು ಯಾವ ಸಾಧನೆ ಮಾಡಲು ಸಾಧ್ಯವಿಲ್ಲ. ಹುಟ್ಟು ಆಕಸ್ಮಿಕ, ಜನ್ಮ ತಾಳಿದ ಮೇಲೆ ಅದರ ಗೌರವ ಕಾಪಾಡಿಕೊಳ್ಳಬೇಕು. ನಮ್ಮ ಬಗ್ಗೆ ಜನರು ಒಳ್ಳೆ ಮಾತನಾಡುವ ವಾತಾವರಣ ನಿರ್ಮಾಣ ಮಾಡುವ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ಏನೇ ಗೊಂದಲ ಇದ್ದರೂ ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ. ಸುಮ್ಮನೆ ವಾದಿಗಳಾಗುವುದು ಬೇಡ. ವರ್ಗ ಸೃಷ್ಠಿ ಎಂಬುದು ಜಾತಿ ಸೃಷ್ಠಿಗಿಂತ ಅಪಾಯ. ಶ್ರೀಮಂತರ ವರ್ಗ, ಬಡವರ ವರ್ಗ, ಕಾರ್ಮಿಕರ ವರ್ಗ, ಮಧ್ಯಮ ವರ್ಗ, ಸಾಮಾನ್ಯ ಜನಗಳ ವರ್ಗ ಎಂಬ ಈ ಸೃಷ್ಠಿಯನ್ನು ನಾವು ಮಾಡಿದರೇ ಅಂದೇ ದೊಡ್ಡ ಅಪಚಾರ ಮಾಡಿದಂತಾಗುತ್ತದೆ. ಧಾರ್ಮಿಕ ಸಂಘಟನೆಗಳಲ್ಲಿ ವರ್ಗ ಸೃಷ್ಠಿಯಾಗುವುದು ಒಳ್ಳೆಯದಲ್ಲ ಎಂದರು.

ಈಗಾಗಲೇ ಕರ್ನಾಟಕದಲ್ಲಿ ಒಂದು ಇತಿಹಾಸ ನಿರ್ಮಾಣವಾಗಿದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ 25 ಮತ್ತು 1 ಸೀಟು ಸೇರಿ 26 ಸೀಟುಗಳು ಜನರಿಂದ ಸಿಕ್ಕಿದೆ. ಆ ವಿಶ್ವಾಸವನ್ನು ನಾವುಗಳು ಉಳಿಸಿಕೊಳ್ಳಲೇಬೇಕು ಎನ್ನುವ ನಿಟ್ಟಿನಲ್ಲಿ ಶ್ರಮಪಡುತ್ತಿದ್ದೇವೆ ಎಂದರು.

Intro:ಹಾಸನ; ಮಠಗಳು ಯಾವ ಹಣದ ಹಿಂದೆ ಹೋಗಬಾರದು ಮತ್ತು ವರ್ಗ ಸೃಷ್ಠಿ ಎಂಬುದು ಜಾತಿ ಸೃಷ್ಠಿಗಿಂತ ಅಪಾಯಕಾರಿಯಾಗಿದೆ ಎಂದು ವೀರಶೈವ-ಲಿಂಗಾಯಿತರಿಗೆ ಸಚಿವ ಮಾಧುಸ್ವಾಮಿ ಸಲಹೆ ನೀಡಿದರು.
ನಗರದ ಅರಳೇಪೇಟೆ ಬಳಿ ಇರುವ ಶ್ರೀ ಬಸವೇಶ್ವರ ಕಲ್ಯಾಣ ಮಂದಿರದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಮನೆಯಲ್ಲಿ ಬೇಸರವಾದರೇ ಮಠಕ್ಕೆ ಹೋಗುತ್ತಾರೆ. ಮಠ ಮತ್ತು ಮನೆ ಎರಡನ್ನು ಜ್ವಾಪಕ ಮಾಡಿಕೊಳ್ಳಬೇಕು. ಮಠ ಯಾರ ಸ್ವಂತ ಸ್ವತ್ತಲ್ಲ. ಮಠದ ಧರ್ಮಕ್ಕೆ ಬೆನ್ನಲುಬುವಾಗಿ ನಾವುಗಳು ನಿಲ್ಲಬೇಕು ಎಂದರು.
ನಾವು ವೀರಶೈವ-ಲಿಂಗಾಯಿತ ಎಂದು ಮಾತನಾಡುವ ಅಧಿಕಾರ ನಮಗೆ ಕೊಟ್ಟಿಲ್ಲ. ಹಾಗೇ ಅದು ಧರ್ಮವಾಗಿದ್ದು, ಜಾತಿ ಅಲ್ಲವೇ ಅಲ್ಲ. ಯಾರಾದರೂ ನಾನು ಶ್ರೇಷ್ಟ ಎಂದು ಜಾತಿ ಬಗ್ಗೆ ಮಾತನಾಡಿದರೇ ಆತನು ಯಾವ ಸಾಧನೆ ಮಾಡಲು ಸಾಧ್ಯವಿಲ್ಲ. ಹುಟ್ಟು ಆಕಸ್ಮಿಕ, ಜನ್ಮ ತಾಳಿದ ಮೇಲೆ ಅದರ ಗೌರವ ಕಾಪಾಡಿಕೊಳ್ಳಬೇಕು. ನಮ್ಮ ಬಗ್ಗೆ ಜನರು ಒಳ್ಳೆ ಮಾತನಾಡುವಾಗೆ ವಾತವರಣ ನಿರ್ಮಾಣ ಮಾಡುವ ಕೆಲಸ ಮಾಡು ಎಂದು ಕಿವಿಮಾತು ಹೇಳಿದರು.
ಏನೆ ಗೊಂದಲ ಇದ್ದರೂ ಚರ್ಚೆ ಮಾಡಿ ಬಗೆಹರಿಸಿಕೊಳ್ಳೊಣ ವರತು ವಾದಿಗಳಾಗುವುದು ಬೇಡ. ವರ್ಗ ಸೃಷ್ಠಿ ಎಂಬುದು ಜಾತಿ ಸೃಷ್ಠಿಗಿಂತ ಅಪಾಯ. ಶ್ರೀಮಂತರ ವರ್ಗ, ಬಡವರ ವರ್ಗ, ಕಾರ್ಮಿಕರ ವರ್ಗ, ಮಧ್ಯಮ ವರ್ಗ, ಸಾಮಾನ್ಯ ಜನಗಳ ವರ್ಗ ಎಂಬ ಈ ಸೃಷ್ಠಿಯನ್ನು ನಾವು ಮಾಡಿದರೇ ಅಂದೆ ದೊಡ್ಡ ಅಪಚಾರ ಮಾಡಿದಂತಾಗುತ್ತದೆ. ಧಾರ್ಮಿಕ ಸಂಘಟನೆಗಳಲ್ಲಿ ವರ್ಗ ಸೃಷ್ಠಿಯಾಗುವುದು ಒಳ್ಳೆಯದಲ್ಲ ಎಂದರು. ಸ್ವಾಮೀಜಿ ಮೇಲೆ ಸಂಪೂರ್ಣ ಗೌರವ ಇರುವ ನಿಟ್ಟಿನಲ್ಲಿ ದೂರದಿಂದ ಇಲ್ಲಿಗೆ ಬಂದಿದ್ದೇನೆ. ಎಲ್ಲಾರಿಗಾಗಿ ಬದುಕಿದ್ದೇವೆ ಎಂದು ಎದೆ ತಟ್ಟಿ ಹೇಳುವಂತಾಗಬೇಕು. ಸ್ವಾಮೀಜಿಗಳ ಸೇವೆಗೆ ಮತ್ತು ಒಳ್ಳೆ ಕಾರ್ಯಕ್ಕೆ ಸದಾ ಸಿದ್ಧವಾಗಿರುತ್ತೇವೆ. ದುಡ್ಡು ಗಿಡ್ಡು ನಮ್ಮ ಬಳಿ ನಿರೀಕ್ಷೆ ಮಾಡಬಾರದು ಅದು ನಮ್ಮ ಬಳಿ ಇಲ್ಲ. ಹಣ ಬೇಕು ಎಂದರೇ ರೇವಣ್ಣರವರನ್ನು ಕರೆದು ಓಡಾಡಿಸಲಿ ನಮ್ಮದೇನು ತಾಪತ್ರೆಯವಿಲ್ಲ. ಉಳಿದ ಸೇವೆ ಏನೆ ಇದ್ದರೂ ನಾವು ಮಾಡುತ್ತೇವೆ ಎಂದರು. ನಾನು ಸಿದ್ದಗಂಗೆ ಶ್ರೀ ಬಿಟ್ಟರೇ ಯಾವ ಸ್ವಾಮೀಜಿ ಬಳಿ ಹೋಗುತ್ತಿರಲಿಲ್ಲ. ಸಿದ್ದಗಂಗಾ ಸ್ವಾಮೀಜಿ ಬಸವಣ್ಣ ಮತ್ತು ದೇವರನ್ನು ನೋಡಿದವರು.
ವೀರಶೈವ ಧರ್ಮ ಎಂದರೇ ಶ್ರೇಷ್ಟ ಧರ್ಮ. ಕರ್ನಾಟಕದ ಪ್ರಗತಿಗೆ ಚಾಮರಾಜೇಂದ್ರ ಒಡೆಯರ್ ರೀತಿಯಲ್ಲಿ ವೀರಶೈವ ಮಠಗಳು ಕೆಲಸ ಮಾಡಿದೆ. ಈ ಧರ್ಮದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಉತ್ತಮವಾಗಿ ಕೊಡುತಿದ್ದಾರೆ. ಮಕ್ಕಳು ನಾವು ಮಾಡಿದ ಪಾಪಕ್ಕೆ ವಂಚಿತರಾಗಿದ್ದಾರೆ. ಅವರಿಗೆ ಉತ್ತಮ ಶಿಕ್ಷಣ ಕೊಡಬೇಕು. ಮಕ್ಕಳಿಗೆ ಸರಕಾರ ಏನು ಕೊಡುತಿತ್ತು ಆ ಮಟ್ಟದ ನೆರವನ್ನು ಈ ಸಮಾಜ ಕೊಟ್ಟಾಗ ಮಾತ್ರನಾವೇಲ್ಲಾ ವೀರಶೈವರು ಎಂದು ಹೇಳಿಕೊಳ್ಳಲು ಲಾಯಕ್ ಆಗುತೇವೆ ಎಂದು ಅಭಿಪ್ರಾಯಪಟ್ಟರು.
ಪುಟ್ಗೊಸಿ ಎಂಬ ಪದ ಅತ್ಯಂತ ಚನ್ನಾಗಿ ಬಳಕೆ ಮಾಡುವವರು ರೇವಣ್ಣನವರು ಎಂದು ಕೆಲ ಉದಾಹರಣೆಯನ್ನು ನೀಡಿದರು.
ನಾನು ಮನಸ್ಸು ಬಿಚ್ಚಿ ಹೇಳುವೇ ನಾನು ಮತ್ತು ಯಡಿಯೂರಪ್ಪ ಮಧ್ಯೆ ಏನು ಭಿನ್ನಾಭಿಪ್ರಾಯಗಳಿಲ್ಲ. ಸ್ವಾಮಿಗಳ, ಸಮಾಜದ ಹಾಗೂ ಇಡೀ ಕರ್ನಾಟಕದಲ್ಲಿರುವ ಬಡವರ ಅಭಿವೃದ್ಧಿ ನಮಗೆ ಬಹಳ ಶ್ರೇಷ್ಟ. ಎಷ್ಟರ ಮಟ್ಟಿಗೆ ಕೆಲಸ ಮಾಡಲು ಸಾಧ್ಯ ಅಷ್ಟು ಮಾಡುತ್ತೇವೆ. ನೀವು ಇಟ್ಟಿಕೊಂಡಿರುವ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಈಗಾಗಲೇ ಕರ್ನಾಟಕದಲ್ಲಿ ಒಂದು ಇತಿಹಾಸ ನಿರ್ಮಾಣವಾಗಿದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ೨೫ ಮತ್ತು ೧ ಸೀಟು ಸೇರಿ ೨೬ ಸೀಟುಗಳು ಜನರಿಂದ ಸಿಕ್ಕಿದೆ. ಆ ವಿಶ್ವಾಸವನ್ನು ನಾವುಗಳು ಉಳಿಸಿಕೊಳ್ಳಲೇಬೇಕು ಎನ್ನುವ ನಿಟ್ಟಿನಲ್ಲಿ ಶ್ರಮಪಡುತ್ತಿದ್ದೇವೆ. ಆದರೇ ಸಂಪನ್ಮೂಲದ ಕೊರತೆ ಇದ್ದು, ಹಣಕಾಸಿನ ಸ್ಥಿತಿ ರಾಜ್ಯದಲ್ಲಿ ಉತ್ತಮವಾಗಿಲ್ಲ. ಆದರೂ ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು. ಬೇಲೂರಿನ ಲಿಂಗೇಶ್‌ರವರು ನಮ್ಮ ಮೇಲೆ ಸಲ್ಪ ಪ್ರೀತಿ ಇಟ್ಟುಕೊಂಡಿರಲಿ ಎಂಬುದು ನಮ್ಮ ಆಸೆಯಾಗಿದೆ ಎಂದು ಹೇಳಿದರು.
ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಚಾರ್ಯ ಮಹಾಸ್ವಾಮಿಜಿ, ಜಗದ್ಗುರು ರೇಣುಕಾಚಾರ್ಯ ಗುರುಕುಲ ಬಾಳೆಹೊನ್ನೂರು, ತೆಂಕಲಗೂಡು ಬೃಹನ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹಿರೇಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಜಿ, ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್. ಲಿಂಗೇಶ್, ದಾನಿಗಳಾದ ಬೆಂಗಳೂರಿನ ಎಂ.ಎಸ್. ಸಿದ್ಧೇಶ್, ಬಿ.ಆರ್. ಗುರುದೇವ್, ಶ್ರೀ ವೀರಶೈವ-ಲಿಂಗಾಯಿತ ಸಂಘದ ಅಧ್ಯಕ್ಷರಾದ ಬಿ.ಪಿ. ಐಸಾಮಿಗೌಡ, ಕಾರ್ಯದರ್ಶಿ ಬಿ.ಎಂ. ಭುವನಾಕ್ಷ, ಖಜಾಂಜಿ ಈ.ಎಂ. ರುದ್ರಕುಮಾರ್, ಸಹಕಾರ್ಯದರ್ಶಿ ಹೆಚ್.ಕೆ. ಲೋಕೇಶ್, ಸದಸ್ಯ ಕಿರಣ್ ಕುಮಾರ್ ಹೊಸಮನಿ, ಹೆಚ್. ಮಲ್ಲಿಕಾರ್ಜುನ್ ಇತರರು ಹಾಜರಿದ್ದರು.

ಬೈಟ್ 1 : ಮಾಧುಸ್ವಾಮಿ, ಸಚಿವ.

-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.