ಹಾಸನ : ಚುನಾವಣೆ ಬಳಿಕ ಗ್ರಾಮದ ಅಭಿವೃದ್ಧಿ ಕಾರ್ಯ ಮಾಡಬೇಕಾದ ಅಭ್ಯರ್ಥಿಗಳೇ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೈರಗೊಂಡನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಭೂಮಿ ಕಾಲೋನಿಯಲ್ಲಿ ಆನಂದ ಮತ್ತು ಉಮೇಶ್ ಎಂಬುವರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿ ಬೆಂಬಲಿತ ಉಮೇಶ್ ಗೆದ್ದ ಹಿನ್ನೆಲೆ, ಜೆಡಿಎಸ್ ಬೆಂಬಲಿತ ಆನಂದ್ ಕುಟುಂಬದ ಮಹಿಳೆಯರು ಮಾತಿಗೆ ಮಾತು ಬೆಳೆಸಿ ಜಗಳ ಕಾಯ್ದಿದ್ದಾರೆ, ಅದು ವಿಕೋಪಕ್ಕೆ ತಿರುಗಿದೆ.
ಅಷ್ಟೇ ಅಲ್ಲ, ಸಿನಿಮೀಯ ರೀತಿ ಜಡೆಗಳ ಜಗಳ ನಡೆಯುತ್ತಿದ್ರೇ, ಕೈಯಲ್ಲಿ ದೊಣ್ಣೆ, ಬಡಿಗೆ ಹಿಡಿದು ವೀರಾವೇಶದಿಂದವಾಗಿ ಮಹಿಳೆಯರ ಜಗಳ ಬಿಡಿಸಲು ಹೋದ ಪುರುಷರು ಕೂಡ ಕೊನೆಗೆ ಬಡಿದಾಡಿದ ಘಟನೆ ನಡೆಯಿತು.
ಸುದ್ದಿ ತಿಳಿದು ಅರಸೀಕೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಗಳ ನಿಯಂತ್ರಿಸಲು ಹರಸಾಹಸ ಪಡಬೇಕಾಯ್ತು. ತಮ್ಮ ಗ್ರಾಮದ ರಸ್ತೆಯಲ್ಲಿಯೇ ಪರಸ್ಪರರು ದೊಣ್ಣೆ ಹಿಡಿದು, ಕಲ್ಲು ತೂರಿದ್ದು, ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಡೆ ಜಗಳ ತಾರಕಕ್ಕೇರಿ ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:'ಒನ್ ಟೈಂ ಪಾಸ್ವರ್ಡ್' ಹಂಚಿದ್ರೇ.. ನಿಮ್ಮ ಖಾತೆಗೆ ಕನ್ನ ಗ್ಯಾರಂಟಿ