ETV Bharat / state

ಅರಸೀಕೆರೆಯಲ್ಲಿ ಅಕ್ಕನನ್ನು ಕೊಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ತಮ್ಮ - ಶಿವಮೊಗ್ಗದ ಲಾಡ್ಜ್ ನಲ್ಲಿ ಮಂಜುನಾಥ್​ ಆತ್ಮಹತ್ಯೆ

ಮದುವೆಯಾದ ಗಂಡನನ್ನು ಕೊಂದಳು ಎಂದು ಅಕ್ಕನನ್ನು ಕೊಂದ ತಮ್ಮನೊಬ್ಬ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

brother-commits-suicide-after-killing-his-own-sister
ಅರಸೀಕೆರೆಯಲ್ಲಿ ಅಕ್ಕನನ್ನು ಕೊಂದು, ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ತಮ್ಮ
author img

By

Published : Sep 17, 2022, 9:31 PM IST

ಶಿವಮೊಗ್ಗ/ಹಾಸನ: ಮದುವೆಯಾದ ಗಂಡನನ್ನೇ ಅಕ್ಕ ಕೊಂದಳೆಂದು, ಅಕ್ಕನನ್ನು ಕೊಂದ ತಮ್ಮನೊಬ್ಬ ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ತುಮಕೂರು ಜಿಲ್ಲೆಯ ಕೆರೆಸೂರಗೊಂಡನಹಳ್ಳಿ ಗ್ರಾಮದ ಮಂಜುನಾಥ್(26) ಎಂದು ಗುರುತಿಸಲಾಗಿದೆ.

ಮೃತ ಮಂಜುನಾಥ್ ಅವರ ದೊಡ್ಡಮ್ಮನ ಮಗಳು ಸುಧಾ, ಹಾಸನ ಜಿಲ್ಲೆ ಹುಳಿಯೂರಿನಲ್ಲಿ ಮಹಿಳಾ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಸುಧಾ ತನ್ನ ಸ್ನೇಹಿತನ ಜೊತೆ ಸೇರಿ ತನ್ನ ಗಂಡನನ್ನು ಕೊಂದಿದ್ದಾರೆ. ಇದರಿಂದ ನನಗೆ ತುಂಬ ಕೋಪ ಬಂದಿದ್ದು, ನಾನು ಆಕೆಯನ್ನು ಬೀದಿ ಹೆಣ ಮಾಡುವುದಾಗಿ ಡೆತ್ ನೋಟು ಬರೆದಿಟ್ಟು ಶಿವಮೊಗ್ಗದ ಲಾಡ್ಜ್ ನಲ್ಲಿ ಮಂಜುನಾಥ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜುನಾಥ್ ಸೆಪ್ಟಂಬರ್ 13 ರಂದು ಶಿವಮೊಗ್ಗಕ್ಕೆ ಬಂದು ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ನಿನ್ನೆ ಕೊಠಡಿಯ ಬಾಗಿಲು ತೆಗೆಯದ ಕಾರಣ ಪೊಲೀಸರನ್ನು ಕರೆಯಿಸಿ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿದ್ದು ತಿಳಿದು ಬಂದಿದೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾಗಿದ್ದ ಮಹಿಳಾ ಕಾನ್ಸ್​​ಟೇಬಲ್ ಶವವಾಗಿ ಪತ್ತೆ : ನಾಪತ್ತೆಯಾಗಿದ್ದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸುಧಾ (39) ಶವವಾಗಿ ಪತ್ತೆಯಾಗಿದ್ದಾರೆ. ಇವರು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿದ್ದರು. ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಸದ್ಯ ಇವರ ಮೃತದೇಹ ಅರಸೀಕೆರೆ ತಿಪಟೂರು ರಾಹೆ 206ರ ಮೈಲನಹಳ್ಳಿ ಗ್ರಾಮದ ಹೊರವಲಯದ ಕುರುಚಲು ಪೊದೆಯೊಂದರಲ್ಲಿ ಸಿಕ್ಕಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸುಧಾ ಅವರನ್ನು ಕಾರಿನಲ್ಲಿ ಕರೆದುಕೊಂಡು ಬಂದು ಅವರ ಚಿಕ್ಕಪ್ಪನ ಮಗ ಮಂಜುನಾಥ್ ಹತ್ಯೆಮಾಡಿರುವುದಾಗಿ ತಿಳಿದು ಬಂದಿದೆ. ಬಳಿಕ ಮಂಜುನಾಥ್ ಶಿವಮೊಗ್ಗದ ಲಾಡ್ಜ್‌ವೊಂದರಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ ಎಂದು ಗೊತ್ತಾಗಿದೆ.

ಇದನ್ನೂ ಓದಿ :ಅರೆಬೈಲ್ ಘಟ್ಟದಲ್ಲಿ ಕಂದಕಕ್ಕೆ ಉರುಳಿದ ಲಾರಿ.. ಡ್ರೈವರ್, ಕ್ಲೀನರ್ ಸ್ಥಳದಲ್ಲೇ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.