ETV Bharat / state

ಶಾಸಕ ಶಿವಲಿಂಗೇಗೌಡ ಅಯೋಗ್ಯ: ನಾಲಿಗೆ ಹರಿಬಿಟ್ಟ ಅರಸೀಕೆರೆ ಬಿಜೆಪಿ ಮುಖಂಡ - ಹಾಸನ ಬಿಜೆಪಿ ಪಕ್ಷ

ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಅಣ್ಣ ನಾಯಕನಹಳ್ಳಿ ವಿಜಯ್ ಕುಮಾರ್ ಏಕವಚನದಲ್ಲಿ ಮಾತನಾಡುವ ಮೂಲಕ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರನ್ನ ಅಯೋಗ್ಯ ಎಂದು ಕರೆದಿದ್ದಾರೆ.

ನಾಲಿಗೆ ಹರಿಬಿಟ್ಟ ಅರಸೀಕೆರೆ ಬಿಜೆಪಿ ಮುಖಂಡ
ನಾಲಿಗೆ ಹರಿಬಿಟ್ಟ ಅರಸೀಕೆರೆ ಬಿಜೆಪಿ ಮುಖಂಡ
author img

By

Published : Sep 24, 2020, 12:12 PM IST

Updated : Sep 24, 2020, 12:43 PM IST

ಹಾಸನ (ಅರಸೀಕೆರೆ): ಅರಸೀಕೆರೆ ನಗರ ಸ್ವಚ್ಛತೆ ಬಗ್ಗೆ ಎಂಎಲ್ಎಗೆ ಏನ್ರಿ ಗೊತ್ತು? ಬರೀ ಪತ್ರಕರ್ತರ ಸಂಘಕ್ಕೆ ಹೋಗಿ ಮಾಧ್ಯಮಗೋಷ್ಟಿ ನಡೆಸುವುದಲ್ಲ. ನಗರದ ಯಾವುದಾದರೂ ಒಂದು ಬಡಾವಣೆ ಸ್ವಚ್ಛವಾಗಿದೆಯಾ ಹೇಳಿ ನೋಡೋಣ! ನಮ್ಮ ಕ್ಷೇತ್ರದ ಎಂಎಲ್ಎ ಅಯೋಗ್ಯ, ಅವನಿಗೇನು ಗೊತ್ತು ಎಂದು ಬಿಜೆಪಿ ಮುಖಂಡ ನಾಲಿಗೆ ಹರಿಬಿಟ್ಟಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ.

ನಾಲಿಗೆ ಹರಿಬಿಟ್ಟ ಅರಸೀಕೆರೆ ಬಿಜೆಪಿ ಮುಖಂಡ

ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಅಣ್ಣ ನಾಯಕನಹಳ್ಳಿ ವಿಜಯ್ ಕುಮಾರ್ ಏಕವಚನದಲ್ಲಿ ಮಾತನಾಡುವ ಮೂಲಕ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರನ್ನ ಅಯೋಗ್ಯ ಎಂದು ಜರಿದಿದ್ದಾರೆ.

ನಗರದ ಸ್ವಚ್ಛತೆ ಕುರಿತು ನಗರಸಭೆ ಆಹಾರ ನಿರೀಕ್ಷಕ ರೇವಣ್ಣ ಸಿದ್ದಪ್ಪಗೆ ತರಾಟೆ ತೆಗೆದುಕೊಂಡರು. ಶಾಸಕರ ಬೊಕ್ಕಸ ತುಂಬಿಸಿಕೊಳ್ಳಲು ಅಧಿಕಾರಿಗಳು ಸಾಥ್ ನೀಡುತ್ತಿದ್ದೀರಿ. ನಿಮ್ಮ ನಗರಸಭೆ ಆಯುಕ್ತ ದುಡ್ಡು ಮಾಡುತ್ತಿದ್ದಾರೆ. ಆದರೆ ನಗರ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಾದರೆ ಬಡಾವಣೆಗಳ ಜನತೆ ವಾಸಿಸುವುದು ಹೇಗೆ ಎಂದು ಆಕ್ರೋಶದ ಮಾತುಗಳನ್ನಾಡಿದರು.

ಕಳೆದ 15 ದಿನಗಳಿಂದ ಸ್ವಂತ ಖರ್ಚಿನಲ್ಲಿ ನಗರ ಸ್ವಚ್ಛತಾ ಕಾರ್ಯ ಮಾಡುತ್ತಿರುವ ಬಿಜೆಪಿ ಮುಖಂಡ ಅಣ್ಣನಾಯಕನಹಳ್ಳಿ ವಿಜಯಕುಮಾರ್, ಇವತ್ತು ಸ್ಲಮ್ ಬಡಾವಣೆಗಳಲ್ಲಿ ನಿಂತಿದ್ದ ಕೊಳಚೆ ನೀರನ್ನು ಸ್ವಚ್ಛಗೊಳಿಸಿಲ್ಲ ಎಂಬ ಕಾರಣಕ್ಕೆ ಗರಂ ಆದರು.

ಅರಸೀಕೆರೆಯಲ್ಲಿ ಇಂತಹ ಮಾತುಗಳು ಹೊಸದೇನಲ್ಲ. ಈ ಹಿಂದೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರ ಬಗ್ಗೆ ಏಕವಚನದಲ್ಲಿಯೇ ಶಾಸಕ ಶಿವಲಿಂಗೇಗೌಡ ಮಾತನಾಡುವ ಮೂಲಕ ಬಿಜೆಪಿ ಮುಖಂಡರನ್ನು ಕೆರಳಿಸಿದ್ದರು.

ಇದರ ವಿರುದ್ಧ ಬಿಜೆಪಿ ನಾಯಕರು ಮಾಧ್ಯಮಗೋಷ್ಟಿ ನಡೆಸುವ ಮೂಲಕ ಪ್ರತ್ಯುತ್ತರ ನೀಡಿದ್ದರು. ಅಲ್ಲದೆ ಬಿಜೆಪಿಯ ಮಹಿಳಾ ಮೋರ್ಚಾ ಸದಸ್ಯರು ಕೂಡ ಶಾಸಕರ ವಿರುದ್ಧ ಮಾಧ್ಯಮಗೋಷ್ಟಿಯಲ್ಲಿ ಸಿಡಿದೆದ್ದಿದ್ದರು. ಈಗ ಸ್ವಚ್ಛತೆಯ ಕಾರಣವನ್ನು ಮುಂದಿಟ್ಟುಕೊಂಡು ಶಾಸಕರ ವಿರುದ್ಧ ಬಿಜೆಪಿ ಮುಖಂಡ ಆಕ್ರೋಶ ಹೊರಹಾಕಿದ್ದಾರೆ.

Last Updated : Sep 24, 2020, 12:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.