ಹಾಸನ/ಅರಸೀಕೆರೆ : ಕಪ್ಪು ಕೋಳಿಯನ್ನು ಬಲಿಕೊಟ್ಟು ಪೊಲೀಸ್ ಠಾಣೆಯಲ್ಲಿ ಭಾನಾಮತಿ (ಮಾಟ-ಮಂತ್ರ) ಮಾಡಿಸೋ ಮೂಲಕ ಸರ್ಕಾರಿ ಅಧಿಕಾರಿಗಳು ಮೌಢ್ಯತೆ ಮೆರೆದಿರೋ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ ಎಂಬ ವಿಷಯ ಹೊರಬಿದ್ದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಂತಹುದೊಂದು ಘಟನೆ ನಡೆದಿದ್ದು, ಮಣ್ಣೆತ್ತಿನ ಅಮಾವಾಸ್ಯೆಯ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ಈ ರೀತಿಯ ಭಾನಾಮತಿ ಮಾಡಿಸಲಾಗಿದೆ ಎನ್ನಲಾಗಿದೆ.
ಗ್ರಾಮೀಣ ಭಾಗದಲ್ಲಿ ಇಂದಿಗೂ ಮೂಢನಂಬಿಕೆ ಜೀವಂತವಾಗಿದೆ. ಇದನ್ನು ಕೆಲವರು ಸಂಪ್ರದಾಯ ಎಂದು ನಡೆಸಿಕೊಂಡು ಬರುತ್ತಿದ್ದರೆ, ಕೆಲವರು ಮಾತ್ರ ಇಂತಹ ಪದ್ಧತಿ ಆಚರಿಸದಿದ್ದರೆ ಗ್ರಾಮಕ್ಕೆ ಕೆಡುಕಾಗುತ್ತದೆ. ಊರಿಗೆ ಮಾರಿ ಬರುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ ಪೊಲೀಸ್ ಠಾಣೆಗೆ ಅದೆಂಥ ರೋಗ ಬರುತ್ತೋ ಗೊತ್ತಿಲ್ಲ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೌಢ್ಯತೆಗೆ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾಗಿದೆ. ಕಪ್ಪು ಕೋಳಿಯನ್ನು ಬಲಿಕೊಡುವ ದೃಶ್ಯದ ತುಣುಕೊಂದು ವೈರಲ್ ಆಗಿದೆ. ಆದರೆ ಇದರ ಸತ್ಯಾಸತ್ಯತೆಯ ಬಗ್ಗೆ ಖಚಿತತೆ ಇಲ್ಲ.
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಮಕ್ಕಳು, ಯುವಕರು, ಅಥವಾ ದೊಡ್ಡವರು ನಡೆಯುವಾಗ ಅಥವಾ ಒಂದೇ ಸ್ಥಳದಲ್ಲಿ 2-3 ಬಾರಿ ಎಡವಿ ಬಿದ್ದಾಗ, ಅಥವಾ ಗ್ರಾಮಕ್ಕೆ ಹೊಸಬರು ಯಾರಾದರೂ ಬಂದರೇ ಕೋಳಿ ಅಥವಾ ಕುರಿ ಬಲಿಕೊಟ್ಟು ಶಾಂತಿ ಮಾಡಿಸುವ ಪದ್ದತಿಯಿದೆ. ಆದರೆ ಅರಸೀಕೆರೆಯ ಪೊಲೀಸರು ಕೋಳಿ ಬಲಿ ಯಾಕೆ ಮಾಡಿಸಿದ್ರು ಯಾರಾದ್ರೂ ಎಡವಿ ಬಿದ್ದಿದ್ರಾ..? ಅಥವಾ ಜಿಲ್ಲೆಗೆ ಯಾರಾದ್ರೂ ಹೊಸಬರು ಬಂದ್ರಾ ...? ಎಂಬ ಪ್ರಶ್ನೆಗೆ ಕಾಕತಾಳಿಯ ಎಂಬಂತೆ ಜನರೂ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ನಾಲಿಗೆ ಕಟ್ ಮಾಡಿ ದೇವಿಗೆ ಅರ್ಪಿಸಿದ 20 ವರ್ಷದ ಯುವತಿ!