ETV Bharat / state

ಹಾಸನ: ಸುಖಾಂತ್ಯ ಕಂಡ ನಟ ಯಶ್ ಜಮೀನು ಜಟಾಪಟಿ

ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ ಹಾಸನ ತಾಲೂಕು ದುದ್ದ ಬಳಿಯ ನಟ ಯಶ್ ಜಮೀನು ವಿವಾದ ಇಂದು ಸುಖಾಂತ್ಯ ಕಂಡಿದೆ.

dispute
ಯಶ್ ಜಮೀನು ವಿವಾದ
author img

By

Published : Mar 16, 2021, 7:08 PM IST

Updated : Mar 16, 2021, 7:47 PM IST

ಹಾಸನ: ಜಮೀನು ವಿಚಾರಕ್ಕೆ ನಟ ಯಶ್ ಪೋಷಕರು ಹಾಗೂ ರಮೇಶ್ ಎಂಬ ರೈತಕುಟುಂಬ ಸೇರಿದಂತೆ ಗ್ರಾಮದವರ ನಡುವೆ ನಡೆದಿದ್ದ ಜಟಾಪಟಿ ಪ್ರಕರಣ ಪರಿಹಾರ ಕಂಡಿದೆ.
ಯಶ್ ತಂಡದವರು ಇಂದು ತಿಮ್ಲಾಪುರಕ್ಕೆ ಭೇಟಿ ನೀಡಿ ಗ್ರಾಮದವರೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡರು. ತಿಮ್ಲಾಪುರದವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಯಶ್​ಗೆ ನಾವು ಇನ್ನೂ ಹೆಚ್ಚಿಗೆ ದಾರಿ ಬಿಡಲು ಸಿದ್ಧ ಎಂದು ತಿಳಿಸಿದ್ದಾರೆ.

ನಟ ಯಶ್ ಜಮೀನು ವಿವಾದಕ್ಕೆ ತೆರೆ

ವಿವರ:
ಹಾಸನ ತಾಲೂಕು ದುದ್ದ ಬಳಿಯ ಯಶ್ ಜಮೀನು ಜಾಗದ ಗಲಾಟೆ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಯಶ್ ಅವರು ಖುದ್ದು ಈ ಸಮಸ್ಯೆಗೆ ಇತಿಶ್ರೀ ಹಾಡಲು ಹಾಸನಕ್ಕೆ ಭೇಟಿ ನೀಡುವ ಮಟ್ಟಕ್ಕೆ ಈ ಪ್ರಕರಣ ತಲುಪಿತ್ತು. ಜಮೀನು ಬಳಿ ದಾರಿ ವಿಚಾರಕ್ಕಾಗಿ ಪಕ್ಕದ ಜಮೀನು ಮಾಲೀಕ ರಮೇಶ್ ತಕರಾರು ತೆಗೆದಿದ್ದರು.

ಜೊತೆಗೆ ಯಶ್ ತೋಟದ ಹುಡುಗರು ಹಾಗೂ ಅವರ ಪೋಷಕರ ನಡುವೆ ಸಣ್ಣದಾಗಿ ತಳ್ಳಾಟ, ನೂಕಾಟ ಹಾಗೂ ಗಲಾಟೆಯಾಗಿತ್ತು. ಯಶ್ ಪೋಷಕರು ನಮ್ಮ ಜಮೀನು ಜಾಗದಲ್ಲಿ ರಸ್ತೆ ಮಾಡಲು ಆಗಮಿಸಿದ್ದರು ಅನ್ನೋದು ರಮೇಶ್ ಕುಟುಂಬದವರ ಆರೋಪವಾಗಿತ್ತು.

ಇದನ್ನೂ ಓದಿ: ಬಡವ್ರಿಗೆ ಉಪಯೋಗವಾಗುತ್ತೋ 10 ಎಕರೆ ನಾನೇ ಬಿಟ್ಟುಕೊಡ್ತೀನಿ: ಜಮೀನು ವಿವಾದ ವಿಚಾರವಾಗಿ ಯಶ್ ಹೇಳಿಕೆ

ಈ ಘಟನೆಯ ನಂತರ ಯಶ್ ನೇರವಾಗಿ ಮಧ್ಯಪ್ರವೇಶ ಮಾಡಿ ಯಾವುದೇ ಕಾರಣಕ್ಕೂ ನಾನು ರೈತರಿಗೆ ಅನ್ಯಾಯ ಆಗಲು ಬಿಡಲ್ಲ, ಹಾಗೆಯೇ ಅವರು ನಮ್ಮ ತಂದೆ ತಾಯಿ ವಿಚಾರಕ್ಕೆ ಬರಬಾರದು ಎಂದು ಈಟಿವಿ ಭಾರತದ ಜೊತೆ ತಮ್ಮ ಅಭಿಪ್ರಾಯ ಹಾಗೆಯೇ ಸಮಸ್ಯೆ ಬಗೆಹರಿಸೋ ಬಗ್ಗೆ ಹೇಳಿದರು. ಇದ್ರಂತೆ ಇಂದು ಯಶ್ ತಂಡದವರು ತಿಮ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದವರು ಹಾಗೂ ಜಮೀನು ವಿವಾದಕ್ಕೆ ಕಾರಣವಾಗಿದ್ದ ರಮೇಶ್ ಕುಟುಂಬದವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ.

LAND dispute
ಸುಖಾಂತ್ಯ ಕಂಡ ನಟ ಯಶ್ ಜಮೀನು ಜಟಾಪಟಿ

ಸಂವಹನ ಕೊರತೆಯಿಂದ ಈ ಗಲಾಟೆಗೆ ವೈಮನಸ್ಸಿಗೆ ಕಾರಣವಾಗಿತ್ತು. ರೈತರ ಜಮೀನಿನಲ್ಲಿ ದಾರಿ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಹಾಸನದಲ್ಲಿ ಜಮೀನು ವಿವಾದ: ಠಾಣೆಗೆ ಹೋಗದ ನಟ ಯಶ್​ ಪೋಷಕರು

ತಿಮ್ಲಾಪುರ ಕಾಲಭೈರವ ದೇವಾಲಯದ ಬಳಿ ನಡೆದ ಪಂಚಾಯತಿ ಸಭೆ ಬಳಿಕ ಮಾತಾಡಿದ ತಿಮ್ಲಾಪುರ ಗ್ರಾಮದವರು, ಯಶ್ ನಮ್ಮ ಊರಿಗೆ ಹೆಮ್ಮೆ. ಕೆಲ ಗೊಂದಲದಿಂದ ಗಲಾಟೆ ಆಗಿದ್ದು ನಿಜ. ಆದ್ರೆ ಅವರಿಗಾಗಿ ನಾವು ಅವರಿಗೆ ಅಗತ್ಯ ಇರೋ ಕಡೆ ದಾರಿ ಬಿಡಲು ಸಿದ್ಧ. ಅವರು ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ನಮ್ಮ ಮೆಚ್ಚಿನ ಹೀರೋ ಅಂತ ಹೇಳಿದ್ದಾರೆ.

ತಿಮ್ಲಾಪುರ ದೇವಾಲಯ ಬಳಿ ಯಶ್ ಜಮೀನಿಗೆ ಹೋಗೋ ದಾರಿಗೆ ಅಡ್ಡಲಾಗಿ ಗುಂಡಿ ತೋಡಿದ್ದರು. ಈಗ ನಟನಿಗಾಗಿ ಪುನಃ ಗುಂಡಿ ಮುಚ್ಚಿ ಯಶ್ ಜಮೀನಿಗೆ ಹೋಗಲು ಅನುಕೂಲ ಮಾಡಿಕೊಟ್ಟಿದ್ದಾರೆ.

LAND dispute
ನಟ ಯಶ್ ಜಮೀನು ವಿವಾದ ಅಂತ್ಯ

Last Updated : Mar 16, 2021, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.