ಹಾಸನ : ಲಾಕ್‌ಡೌನ್ ನಿಯಮಗಳಲ್ಲಿ ಕೆಲ ಸಡಿಲಿಕೆ ಮಾಡಿರೋ ಹಿನ್ನೆಲೆ ಬೆಂಗಳೂರಿನ ಗ್ರಾಮಾಂತರ ಪ್ರದೇಶದಿಂದ ಜಿಲ್ಲೆಗೆ ಬಂದಂತಹ 90 ಮಂದಿಯನ್ನು ತಪಾಸಣೆಗೊಳಪಡಿಸಿ ಗೃಹಬಂಧನಕ್ಕಿರಿಸಲಾಗುತ್ತಿದೆ.
ಈಗಾಗಲೇ ಬೇರೆಬೇರೆ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ಸ್ವಂತ ಜಿಲ್ಲೆಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಅದರಂತೆ ಬೆಂಗಳೂರಿನಿಂದ ಜಿಲ್ಲೆಗೆ 3 ಕೆಎಸ್ಆರ್ಟಿಸಿ ಬಸ್ ಮೂಲಕ ಕಳುಹಿಸಿಕೊಡಲಾಗಿದೆ. ಹಾಸನ ಚೆಕ್ಪೋಸ್ಟ್ನಲ್ಲಿ ಪೊಲೀಸರು ಬಸ್ಗಳನ್ನು ತೀವ್ರ ತಪಾಸಣೆ ನಡೆಸಿದರು. ಪ್ರಯಾಣಿಕರನ್ನು ಸರ್ಕಾರಿ ಆಸ್ಪತ್ರೆಯ ಸಮೀಪ ಇಳಿಸಿದ್ದು ಆತಂಕಕ್ಕೆ ಎಡೆಮಾಡಿದೆ.
ಚಿಕ್ಕಬಳ್ಳಾಪುರದಲ್ಲಿ ಈ ಮೊದಲು ಕೊರೊನಾ ಪ್ರಕರಣಗಳಿದ್ದವು. ಈಗ ಅದೇ ಭಾಗದ ಕಡೆಯಿಂದ ಬಂದಂತಹ ಪ್ರಯಾಣಿಕರಾಗಿರುವುದರಿಂದ ಪೊಲೀಸರು ಅನುಮಾನ ವ್ಯಕ್ತಪಡಿಸಿದರು. ಕೆಲಕಾಲ ಚೆಕ್ಪೋಸ್ಟ್ ಬಳಿಯಲ್ಲಿ ಬಸ್ಗಳನ್ನು ನಿಲ್ಲಿಸಿ ಪ್ರತಿ ಪ್ರಯಾಣಿಕರ ವಿಳಾಸವನ್ನು ಪಡೆದು ನಂತರ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿ ಗೃಹಬಂಧನಲ್ಲಿ ಇಡಲಾಗುವುದು ಎಂದು ತಿಳಿಸಿದ್ದಾರೆ.