ETV Bharat / state

ಹಾಸನ ಜಿಲ್ಲೆಯಲ್ಲಿ ಹೊಸದಾಗಿ 439 ಕೊರೊನಾ ಪ್ರಕರಣಗಳು ಪತ್ತೆ - new corona cases detected

ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟ ವರದಿ ಬಂದಿದ್ದು ಇದರೊಂದಿಗೆ ಜಿಲ್ಲೆಯಲ್ಲಿನ ಸಾವಿನ ಸಂಖ್ಯೆ 366ಕ್ಕೆ ಏರಿದೆ.

439 new corona cases detected in Hassan district
ಹಾಸನ ಜಿಲ್ಲೆಯಲ್ಲಿ ಕೊರೊನಾ ಅಂಕಿ-ಅಂಶ
author img

By

Published : Oct 8, 2020, 6:15 PM IST

ಹಾಸನ : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಕೂಡ ಹೊಸದಾಗಿ 439 ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಹೇಳಿದರು.

ಕೊರೊನಾ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 19,880 ಪ್ರಕರಣಗಳು ದಾಖಲಾಗಿದ್ದು,15,445 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ 4,069 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಸೋಂಕಿನಿಂದ ಇಂದು ಇಬ್ಬರು ಮೃತಪಟ್ಟ ವರದಿ ಬಂದಿದ್ದು ಇದರೊಂದಿಗೆ ಜಿಲ್ಲೆಯಲ್ಲಿನ ಸಾವಿನ ಸಂಖ್ಯೆ 366ಕ್ಕೆ ಏರಿದೆ. ತೀವ್ರ ನಿಗಾ ಘಟಕದಲ್ಲಿ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

439 new corona cases detected in Hassan district
ಹಾಸನ ಜಿಲ್ಲೆಯ ಕೊರೊನಾ ಅಂಕಿ-ಅಂಶ

ಇಂದಿನ ತಾಲೂಕಾವಾರು ಪ್ರಕರಣಗಳು:

ಅರಸೀಕೆರೆಯಲ್ಲಿ 21 , ಚನ್ನರಾಯಪಟ್ಟಣ 53, ಆಲೂರು 10, ಹಾಸನ 240, ಹೊಳೆನರಸೀಪುರ 33, ಅರಕಲಗೂಡು 33, ಬೇಲೂರು 36 ಹಾಗೂ ಸಕಲೇಶಪುರದಲ್ಲಿ 13 ಮಂದಿಗೆ ಸೋಂಕು ದೃಢಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.