ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 166 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 25,400ಕ್ಕೆ ಏರಿದೆ. 2 ಸಾವಿನೊಂದಿಗೆ ಮೃತರ ಸಂಖ್ಯೆ 434 ತಲುಪಿದೆ ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಇಂದು 55 ಮಂದಿ ಬಿಡುಗಡೆಯಾಗಿದ್ದು, ಈವರೆಗೂ 23,856 ಮಂದಿ ಗುಣಮುಖರಾಗಿದ್ದಾರೆ. 1,110 ಸಕ್ರಿಯ ಪ್ರಕರಣಗಳಿವೆ. ತೀವ್ರ ನಿಗಾ ಘಟಕದಲ್ಲಿ 26 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕುವಾರು ಪ್ರಕರಣ: ಇಂದು ದಾಖಲಾಗಿರುವ ಪ್ರಕರಣದಲ್ಲಿ ಆಲೂರಿನಲ್ಲಿ 13, ಅರಕಲಗೂಡು-13, ಅರಸೀಕೆರೆ-24, ಬೇಲೂರು-11, ಚನ್ನರಾಯಪಟ್ಟಣ-36, ಹಾಸನ-39, ಹೊಳೆನರಸೀಪುರ-18, ಸಕಲೇಶಪುರ-12.

ಉಸಿರಾಟ ತೊಂದರೆ, ಜ್ವರ, ಶೀತಾ, ನೆಗಡಿ, ಕೆಮ್ಮು ಏನಾದರೂ ಇದ್ದರೇ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.