ETV Bharat / state

ಹಾಸದಲ್ಲಿ ಕಾನ್​ಸ್ಟೇಬಲ್​ ಸೇರಿ 14 ಮಂದಿಗೆ ಕೊರೊನಾ: 99ಕ್ಕೇರಿದ ಸೋಂಕಿತರು

ಪೊಲೀಸ್​ ಕಾನ್​ಸ್ಟೇಬಲ್​ ಸೇರಿ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನಲೆ ಹಾಸನ ನಗರದ ಇಂದಿರಾ ನಗರ ಮತ್ತು ಉತ್ತರ ಬಡಾವಣೆಯ ಕೆಲ ಪ್ರದೇಶಗಳನ್ನು ಕಂಟೈನ್ಮೆಂಟ್​​ ವಲಯವೆಂದು ಘೋಷಿಸಲಾಗಿದೆ.

14-new-corona-cases-foud-in-hassan
ಕೋವಿಡ್​ ಪ್ರಕರಣಗಳು
author img

By

Published : May 24, 2020, 4:04 PM IST

ಹಾಸನ: ನಗರದ ಇಬ್ಬರು ಸೇರಿ ಇಂದು 14 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 99ಕ್ಕೆ ಏರಿಕೆಯಾಗಿದೆ.

ಪೊಲೀಸ್‌ ಕಾನ್‌ಸ್ಟೇಬಲ್ ಹಾಗೂ ಮಹಿಳೆಯೊಬ್ಬರಿಗೆ ಸೋಂಕು ತಗುಲಿದ್ದು, ಉಳಿದವರು ಮುಂಬೈ ಪ್ರಯಾಣ ಹಿನ್ನಲೆ ಹೊಂದಿದ್ದಾರೆ. ಇಂದಿರಾ ನಗರ ಮತ್ತು ಉತ್ತರ ಬಡಾವಣೆಯ ಕೆಲ ಪ್ರದೇಶಗಳನ್ನು ಕಂಟೈನ್ಮೆಂಟ್​​ ವಲಯವೆಂದು ಘೋಷಿಸಿ, ಬ್ಯಾರಿಕೇಡ್‌ ಹಾಕಲಾಗಿದೆ.

ಬೆಂಗಳೂರಿನಿಂದ ಬಂದಿದ್ದ ಮಹಿಳೆಯಲ್ಲಿ ಕೆಮ್ಮು ಕಂಡ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ನಡೆಸಿದ ನಂತರ ಸೋಂಕು ತಗುಲಿರುವುದು ದೃಢವಾಗಿದೆ. ಸದ್ಯ ಮಹಿಳೆ ವಾಸವಿದ್ದ ಸ್ಥಳವನ್ನು 28 ದಿನಗಳ ಕಾಲ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ, ನಗರಸಭೆ ಅಧಿಕಾರಿಯನ್ನು ಮೇಲ್ವಿಚಾರಣೆಗೆ ನೇಮಿಸಲಾಗಿದೆ. ಅಗತ್ಯವಿದ್ದಲ್ಲಿ ಜನರ ಗಂಟಲು ದ್ರವ ಪರೀಕ್ಷೆಗೆ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ತಿಳಿಸಿದರು.

ಹಾಸದಲ್ಲಿ ಭಾನುವಾರದ ಕೋವಿಡ್​ ಪ್ರಕರಣಗಳು

ಪೊಲೀಸ್​ ಕಾನ್​ಸ್ಟೇಬಲ್​ಗೂ ಸೋಂಕು

ಕರ್ತವ್ಯಕ್ಕೆಂದು ಬೆಂಗಳೂರಿಗೆ ತೆರಳಿದ್ದ ಕೆಎಸ್​ಆರ್​ಪಿ ಕಾನ್​ಸ್ಟೇಬಲ್​ಗೂ ಸೋಂಕು ತಗುಲಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕ ಹೊಂದಿದವರ ಪತ್ತೆ ಕಾರ್ಯ ನಡೆದಿದೆ.

ನಗರಸಭೆ ಆಯುಕ್ತ ಕೃಷ್ಣಮೂರ್ತಿ ಮಾತನಾಡಿ, ಕಂಟೈನ್ಮೆಂಟ್​ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಂಕಿತರು ವಾಸವಿದ್ದ ನೂರು ಮೀಟರ್‌ ಪ್ರದೇಶವನ್ನು ಸೀಲ್‌ಡೌನ್‌ ಹಾಗೂ 200 ಮೀಟರ್‌ ಬಫರ್ ವಲಯವಾಗಿ ಘೋಷಿಸಲಾಗಿದೆ ಎಂದರು.

ಅಗತ್ಯ ವಸ್ತುಗಳಿಗೆ ಕರೆ ಮಾಡಿ

103 ಮನೆಗಳಲ್ಲಿ 260 ಜನರು ವಾಸಿಸುತ್ತಿದ್ದಾರೆ. ಇವರಿಗೆ ದಿನಬಳಕೆ ವಸ್ತುಗಳನ್ನು ನಗರಸಭೆ ಸಿಬ್ಬಂದಿ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ. 97315 04899 ಮತ್ತು 96063 49246 ಸಂಖ್ಯೆಗೆ ಕರೆ ಮಾಡಿದರೇ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವವರು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.