ETV Bharat / state

ಗದಗ ಕೆಎಸ್​ಆರ್​ಟಿಸಿ ಮಹಾ ಎಡವಟ್ಟು..ಗಂಡಭೇರುಂಡ ಬದಲು ಮಹಾರಾಷ್ಟ್ರ ಸರ್ಕಾರದ ಲಾಂಛನ - ಮಹಾರಾಷ್ಟ್ರ ಟಿಕೆಟ್ ಹಂಚಿಕೆ

ಕೆಎಸ್ಆರ್​ಟಿಸಿ ಟಿಕೆಟ್​ನಲ್ಲಿ ಕರ್ನಾಟಕ ಸರ್ಕಾರದ ಗಂಡಭೇರುಂಡ ಲಾಂಛನದ ಬದಲಾಗಿ ಮಹಾರಾಷ್ಟ್ರ ಸರ್ಕಾರ ಲಾಂಚನದ ಪ್ರಿಂಟ್ ಕಂಡುಬಂದಿದೆ.

ಕೆಎಸ್​ಆರ್​ಟಿಸಿ
ಕೆಎಸ್​ಆರ್​ಟಿಸಿ
author img

By

Published : Oct 5, 2022, 10:07 PM IST

ಗದಗ: ಕೆಎಸ್​ಆರ್​ಟಿಸಿ ಇಲಾಖೆ ಸದಾ ಒಂದಿಲ್ಲೊಂದು ಸುದ್ಧಿಗೆ ಗ್ರಾಸವಾಗಿರುತ್ತೆ. ಈಗ ಮತ್ತೊಂದು ಯಡವಟ್ಟಿನಿಂದ ಮತ್ತೆ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅದೇನಪ್ಪ ಅಂದ್ರೆ ಕೆಎಸ್ಆರ್​ಟಿಸಿ ಟಿಕೆಟ್​ನಲ್ಲಿ ಕರ್ನಾಟಕ ಸರ್ಕಾರದ ಗಂಡ ಭೇರುಂಡ ಲಾಂಛನದ ಬದಲಾಗಿ ಮಹಾರಾಷ್ಟ್ರ ಸರ್ಕಾರ ಲಾಂಚನದ ಪ್ರಿಂಟ್ ಕಂಡುಬಂದಿದೆ.

ಗಂಡಭೇರುಂಡ ಬದಲು ಮಹಾರಾಷ್ಟ್ರ ಸರ್ಕಾರದ ಲಾಂಛನ
ಗಂಡಭೇರುಂಡ ಬದಲು ಮಹಾರಾಷ್ಟ್ರ ಸರ್ಕಾರದ ಲಾಂಛನ

ಮಹಾರಾಷ್ಟ್ರ ಸರ್ಕಾರದ ಲಾಂಚನದ ಪ್ರಿಂಟ್ ಇರೋ ಟಿಕೆಟ್​ಗಳನ್ನ ಪ್ರಯಾಣಿಕರಿಗೆ ಕಂಡೆಕ್ಟರ್​ಗಳು ಹರಿದು ಕೊಡ್ತಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ದೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಸರ್ಕಾರಿ ಬಸ್​ನಲ್ಲಿ ಈ ಟಿಕೆಟ್ ಹಂಚಿಕೆಯಾಗಿದೆ. ಇದೊಂದೇ ಮಾರ್ಗವಲ್ಲ ಬದಲಾಗಿ ಬಹುತೇಕ ನಗರಗಳಿಗೆ, ಹಳ್ಳಿಗಳಿಗೆ, ತಾಲೂಕುಗಳಿಗೆ ಹೋಗುವ ಬಸ್​ಗಳಲ್ಲಿಯೂ ಇದೇ ಲಾಂಚನ ಇರುವ ಟಿಕೆಟ್ ನೀಡಲಾಗ್ತಿದೆ.

ಏನಿದು ಟಿಕೆಟ್ ವಿವಾದ?: ಮಹಾರಾಷ್ಟ್ರ ರಾಜ್ಯ ಪರಿವಾರನ್, ಜೈ ಮಹಾರಾಷ್ಟ್ರ ಅಕ್ಷರಗಳು ಮತ್ತು ಮಹಾರಾಷ್ಟ್ರ ಸರ್ಕಾರದ ಲಾಂಚನ ಪ್ರಿಂಟ್ ಆಗಿರೋ ಟಿಕೆಟ್​ಗಳನ್ನ ಹಂಚುತ್ತಿದ್ದಾರೆ. ಅಂದಹಾಗೆ ಕರ್ನಾಟಕ ಸರ್ಕಾರದ ಟಿಕೆಟ್​ನಲ್ಲಿ ರಾಜ್ಯ ಲಾಂಛನವಾಗಿರೋ ಗಂಡಭೇರುಂಡ ಲಾಂಛನ ಇರುತ್ತದೆ. ಆದರೆ, ಗದಗನಲ್ಲಿ ಮಾತ್ರ ಸದ್ಯ ಕೆಲವು ಬಸ್ ಗಳಲ್ಲಿ ಮಹಾರಾಷ್ಟ್ರ ಟಿಕೆಟ್ ಹಂಚಿಕೆಯಾಗಿದೆ.

ಇದರಿಂದ ರೊಚ್ಚಿಗೆದ್ದ ಕನ್ನಡಪರ ಸಂಘಟನೆಗಳು ದಿಢೀರ್ ಪ್ರತಿಭಟನೆಗಿಳಿದಿವೆ. ನಗರದ ಹಳೆ ಬಸ್ ನಿಲ್ದಾಣದಲ್ಲಿ ಎಡವಟ್ಟು ಮಾಡಿದ ನಾಡದ್ರೋಹಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ಜನ ಒತ್ತಾಯಿಸಿದ್ದಾರೆ.

ಓದಿ: ಕೌಟುಂಬಿಕ ಕಲಹ : ವಿಜಯಪುರದಲ್ಲಿ ಕೆನಾಲ್​ಗೆ ಹಾರಿ ಕೆಎಸ್ಆರ್​ಟಿಸಿ ನೌಕರ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.