ETV Bharat / state

ಗದಗ: SSLC ಪರೀಕ್ಷೆ ಆರಂಭಕ್ಕೂ ಮುನ್ನ ನಡೆದ ಎಡವಟ್ಟುಗಳಿವು - ಎಸ್ಸೆಸ್ಸೆಲ್ಸಿ ಪರೀಕ್ಷೆ 2020

ಪರೀಕ್ಷಾ ಕೇಂದ್ರ ಮುನ್ಸಿಪಲ್​​ ಕಾಲೇಜು ಬಳಿ ಪರೀಕ್ಷೆ ಆರಂಭಕ್ಕೂ ಮುನ್ನವೇ ಮೈದಾದನದಲ್ಲಿ ಯುವಕರು ಕ್ರಿಕೆಟ್​ ಆಡುತ್ತಿದ್ದ ಕಾರಣ, ಓದಿಕೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟಾಯಿತು.

There were awkward moments before SSLC  Exam began
ಮುನ್ಸಿಪಲ್​​ ಕಾಲೇಜು
author img

By

Published : Jun 27, 2020, 2:33 PM IST

Updated : Jun 27, 2020, 3:15 PM IST

ಗದಗ: ಪರೀಕ್ಷಾ ಕೇಂದ್ರ ಇರುವ ಮುನ್ಸಿಪಲ್​​ ಕಾಲೇಜು ಬಳಿ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ಆರಂಭಕ್ಕೂ ಮುನ್ನ ಕೆಲವೊಂದು ಎಡವಟ್ಟುಗಳು ನಡೆದವು.

ಶಾಲಾ ಆವರಣದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ಹುಡುಗಿಯರನ್ನು ನೋಡಲು, ಮಾತನಾಡಿಸಲು ಬರುವ ಪೋಲಿಗಳ ಹಾವಳಿಯೂ ಹೆಚ್ಚಾಗಿದ್ದು ಕಂಡು ಬಂತು. ಪಾಲಕರು, ವಿದ್ಯಾರ್ಥಿಗಳು ಗುಂಪು ಗುಂಪಾಗಿ ಸೇರಿದ್ದರು. ಇಲ್ಲಿ ಹೇಳೋರು ಕೇಳುವವರು ಯಾರು ಇಲ್ಲದಂತಾಗಿತ್ತು.

ಕ್ಯಾಮರಾ ಕಂಡ ಕೂಡಲೇ ಪಾಲಕರು ಹಾಗೂ ಪೋಲಿಗಳನ್ನು ಪೊಲೀಸರು ಓಡಿಸಿದರು. ಕ್ರಿಕೆಟ್ ಆಟಗಾರರನ್ನು ಹೊರ ಹಾಕಿದರು. ಅಷ್ಟೇ ಅಲ್ಲ, ಪರೀಕ್ಷಾ ಕೇಂದ್ರ ಗುಟ್ಕಾ, ಪಾನ್ ಪರಾಗ್ ಉಗುಳುವ ಸ್ಥಳವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ ಆಗರವಾಗಿದೆ. ಎಲ್ಲಂದರಲ್ಲಿ ಗಲೀಜೋ ಗಲೀಜು ಎಂದು ಮಕ್ಕಳ ಪೋಷಕರು ಆರೋಪಿಸಿದರು.

ಮುನ್ಸಿಪಲ್​​ ಕಾಲೇಜು

ದುರುಳರು ಉಗುಳಿದ ಗೋಡೆಗೆ ಸುಣ್ಣ, ಬಣ್ಣ ಹಚ್ಚುವ ಗೋಜಿಗೂ ಹೋಗದಿರುವುದಕ್ಕೆ ಆಡಳಿತ ಮಂಡಳಿಯ ವಿರುದ್ಧ ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ಕಿಡಿ‌ಕಾರಿದರು.

Last Updated : Jun 27, 2020, 3:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.